»   » ಲಂಡನ್ ನಲ್ಲಿ 'ಡವ್‌'ಗಳಿಗೆ ಕಾಳು ಹಾಕಿದ ಸುದೀಪ್, ಶಿವಣ್ಣ

ಲಂಡನ್ ನಲ್ಲಿ 'ಡವ್‌'ಗಳಿಗೆ ಕಾಳು ಹಾಕಿದ ಸುದೀಪ್, ಶಿವಣ್ಣ

Posted By:
Subscribe to Filmibeat Kannada

ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ದಿ ವಿಲನ್' ಚಿತ್ರೀಕರಣ ಲಂಡನ್ ನ ಪ್ರಮುಖ ನಗರಗಳಲ್ಲಿ ಭರದಿಂದ ಸಾಗುತ್ತಿದೆ. ಶಿವಣ್ಣ ಮತ್ತು ಸುದೀಪ್ ರವರು ಚಿತ್ರೀಕರಣದಲ್ಲಿ ಭಾಗಿಯಾಗುವ ಜೊತೆಗೆ ಬಿಡುವಿನ ವೇಳೆ ಲಂಡನ್ ಪ್ರಮುಖ ನಗರಗಳ ಸೊಬಗನ್ನು ನೋಡಿ ಎಂಜಾಯ್ ಮಾಡುತ್ತಿದ್ದಾರೆ.

ಮೊನ್ನೆಯಷ್ಟೇ ಸುದೀಪ್ ರವರು ಚಿತ್ರೀಕರಣ ಬಿಡುವಿನ ವೇಳೆ ಹತ್ತು ವರ್ಷಗಳ ನಂತರ ಮರವೊಂದನ್ನು ಏರಿ ಸಂತೋಷ ಪಟ್ಟಿದ್ದರು. ಈಗ ಚಿತ್ರೀಕರಣ ಬಿಡುವಿನ ವೇಳೆ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಇಬ್ಬರು ಜೊತೆಯಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದ್ದಾರೆ. ಆ ಸುಂದರ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಿವರಾಜ್ ಕುಮಾರ್ ಮತ್ತು ಸುದೀಪ್ 'ಡವ್'ಗಳಿಗೆ ಕಾಳು ಹಾಕಿದ ಕ್ಷಣದ ಫೋಟೋಗಳು ಈ ಕೆಳಗಿನಂತಿವೆ.

ಕರುನಾಡ ಚಕ್ರವರ್ತಿ

ಕರುನಾಡ ಚಕ್ರವರ್ತಿ ಎಷ್ಟು ಸರಳ ವ್ಯಕ್ತಿತ್ವದವರು ಎಂಬುದು ಕರ್ನಾಟಕ ಜನತೆಗೆ ಮಾತ್ರವಲ್ಲದೇ ಇತರೆ ಚಿತ್ರರಂಗದ ಗಣ್ಯರಿಗೂ ತಿಳಿದಿರುವ ವಿಷಯ. ಅವರು ಪಕ್ಷಿ ಪ್ರೇಮಿಯೂ ಸಹ ಆಗಿದ್ದು ಸಾಮಾನ್ಯರಂತೆ ಲಂಡನ್ ನಲ್ಲಿ ಪಾರಿವಾಳಗಳಿಗೆ ಆಹಾರ ನೀಡುತ್ತಿರುವ ಈ ದೃಶ್ಯ ಅವರ ಸರಳತೆಗೆ ಕನ್ನಡಿ ಆಗಿದೆ.

'ದಿ ವಿಲನ್' ಗ್ಯಾಂಗ್ ಗೆ ಎಂಟ್ರಿ ಕೊಟ್ಟ ಮಾಸ್ ಕಿಂಗ್ ಶಿವಣ್ಣ..!

'ದಿ ವಿಲನ್' ಲುಕ್ ಇದೇ ಇರಬಹುದಾ?

ಶಿವಣ್ಣ 'ದಿ ವಿಲನ್' ಚಿತ್ರದ ಶೂಟಿಂಗ್ ನಡುವೆ ಈ ರೀತಿ ಪಾರಿವಾಳಗಳ ಜೊತೆ ಸಮಯ ಕಳೆದಿದ್ದು, ಈ ಫೋಟೋದಲ್ಲಿ ಕಾಣುತ್ತಿರುವ ಶಿವಣ್ಣನ ಲುಕ್ ಚಿತ್ರದಲ್ಲೂ ಇರಲಿದೆಯೇ ಎಂಬ ಕುತೂಹಲ ಅಭಿಮಾನಿ ವಲಯದಲ್ಲಿ ಹುಟ್ಟಿದೆ.

'ಡವ್'ಗಳಿಗೆ ಕಾಳು ಹಾಕಿದ ಕಿಚ್ಚ ಸುದೀಪ್

ಇನ್ನು ಕಿಚ್ಚ ಸುದೀಪ್ ರವರು ಸಹ ಶಿವಣ್ಣನ ಜೊತೆ ಶೂಟಿಂಗ್ ಬಿಡುವಿನ ವೇಳೆ ಡವ್ ಗಳ ಮುಂದೆ ಕುಳಿತು ಅವುಗಳಿಗೆ ಆಹಾರ ನೀಡಿದ್ದಾರೆ. ಪ್ರಕೃತಿ ಪ್ರಿಯರಾಗಿ ಮರವೇರಿದ್ದ 'ಹೆಬ್ಬುಲಿ' ಸುದೀಪ್ ಪಾರಿವಾಳಗಳ ಜೊತೆ ಸಮಯ ಕಳೆದಿದ್ದಾರೆ.

ದಶಕಗಳ ಆಸೆ ಕೊನೆಗೂ ಈಡೇರಿಸಿಕೊಂಡ ಕಿಚ್ಚ ಸುದೀಪ್!

ವಿಡಿಯೋ ನೋಡಿ

ಕಿಚ್ಚ ಸುದೀಪ್ ರವರು ಪಾರಿವಾಳಗಳಿಗೆ ಆಹಾರ ತಿನ್ನಿಸುತ್ತಿರುವ ವಿಡಿಯೋ ನೋಡಿ.

ಲಂಡನ್ ನಗರದಲ್ಲಿ ಹ್ಯಾಟ್ರಿಕ್ ಹೀರೋ

ಶಿವರಾಜ್ ಕುಮಾರ್ 'ದಿ ವಿಲನ್' ಶೂಟಿಂಗ್ ನಲ್ಲಿ ತೊಡಗಿಕೊಂಡಿರುವ ವೇಳೆ ಸೆರೆಹಿಡಿದ ಫೋಟೋ ಇದು.

ಚಿತ್ರ ಕೃಪೆ: ಶಿವಣ್ಣ ಫ್ಯಾನ್ಸ್

English summary
In Pics: Shivarajkumar and Sudeep feeding food to Pigeons in middle of 'The Villain' Movie Shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada