ಶಿವಣ್ಣ ಮಗಳ ಮದುವೆಯ 'ರಾಜ' ವೈಭೋಗ
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮುದ್ದಿನ ಮಗಳು ಡಾ.ನಿರುಪಮ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ದೀರ್ಘ ಕಾಲದ ಗೆಳೆಯ ಡಾ.ದಿಲೀಪ್ ಅವರೊಂದಿಗೆ ಡಾ.ನಿರುಪಮ ಇಂದು ಹಸೆಮಣೆ ಏರಿದರು. [ಶಿವರಾಜ್ ಕುಮಾರ್ ಮಗಳ ಮದುವೆ ನೋಡಿ LIVE]
ಇಬ್ಬರ ಕಲ್ಯಾಣ ಮಹೋತ್ಸವಕ್ಕೆ ಬೆಂಗಳೂರಿನ ಅರಮನೆ ಮೈದಾನ ಸಾಕ್ಷಿಯಾಯ್ತು. ಇಂದು ಬೆಳಗ್ಗೆ 9.30-10 ಗಂಟೆವರೆಗೆ ಇದ್ದ ಮುಹೂರ್ತದಲ್ಲಿ ಡಾ.ನಿರುಪಮ-ಡಾ.ದಿಲೀಪ್ ವಿವಾಹ ನೆರವೇರಿತು. [ಸಪ್ತಪದಿ ತುಳಿದ ಶಿವರಾಜ್ ಕುಮಾರ್ ಪುತ್ರಿ ನಿರುಪಮ]
ಇಂದ್ರಲೋಕವೇ ಧರೆಗಿಳಿದಷ್ಟು ಅದ್ದೂರಿಯಾಗಿ, ಅಷ್ಟೇ ಸಾಂಪ್ರದಾಯಿಕವಾಗಿ ಡಾ.ನಿರುಪಮ-ಡಾ.ದಿಲೀಪ್ ಮದುವೆ ನಡೆಯಿತು. ಶಿವಣ್ಣನ ಮಗಳ ಮದುವೆ ಮುಹೂರ್ತ ಸಂಭ್ರಮದ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ. 'ರಾಜ' ವೈಭೋಗದಲ್ಲಿ ಕೈ ಹಿಡಿದ ನವವಧು-ವರ ಚಿತ್ರಗಳು ನಿಮ್ಮ ಮುಂದೆ....

ವರನ ಕಾಶಿ ಯಾತ್ರೆ
ಮುಹೂರ್ತಕ್ಕೂ ಮುನ್ನ ಡಾ.ದಿಲೀಪ್ ಸಾಂಪ್ರದಾಯಿಕವಾಗಿ ಕಾಶಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಹೀಗೆ. [ಡಾ.ಶಿವರಾಜ್ ಕುಮಾರ್ ಅಳಿಯ ಡಾ.ದಿಲೀಪ್ ಕುರಿತು...]

ವರನನ್ನ ಬರಮಾಡಿಕೊಂಡ ಅತ್ತೆ-ಮಾವ
ಕಾಶಿ ಯಾತ್ರೆ ಮುಗಿಸಿಕೊಂಡು ಬರುವ ಅಳಿಯ ದಿಲೀಪ್ ರನ್ನ ಬರಮಾಡಿಕೊಳ್ಳುವುದಕ್ಕೆ ಸಿದ್ದವಾಗಿರುವ ಶಿವಣ್ಣ-ಗೀತಾ ಮತ್ತು ಕಿರಿಯ ಪುತ್ರಿ ನಿವೇದಿತಾ. [ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದ ಚಿತ್ರಗಳು]

ವರನಿಗೆ ಅದ್ದೂರಿ ಉಡುಗೊರೆ
ಅಳಿಯ ಡಾ.ದಿಲೀಪ್ ಅವರಿಗೆ ಅರ್ಧ ಕೋಟಿ ಬೆಲೆಬಾಳುವ BMW 3 ಸೀರೀಸ್ ಕಾರ್ ನ ಉಡುಗೊರೆಯಾಗಿ ನೀಡಿದ್ದಾರೆ ಶಿವರಾಜ್ ಕುಮಾರ್. ['ದೊಡ್ಮನೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ]

ಕಲ್ಯಾಣ ಮಂಟಪಕ್ಕೆ ಆಗಮನ
ವರ ದಿಲೀಪ್ ಅವರನ್ನ ಕಲ್ಯಾಣ ಮಂಟಪಕ್ಕೆ ಸ್ವತಃ ಶಿವಣ್ಣ ಕೈಹಿಡಿದು ಕರೆದುಕೊಂಡು ಬಂದರು.

ಪೂಜಾ ಕಾರ್ಯಗಳು
ತಂದೆ-ತಾಯಿಯೊಂದಿಗೆ ಡಾ.ದಿಲೀಪ್ ಪೂಜಾ ಕಾರ್ಯಗಳನ್ನ ನೆರವೇರಿಸಿದರು.

ಸಿಂಗಾರಗೊಂಡಿದ್ದ ಡಾ.ನಿರುಪಮ
ರೇಶ್ಮೆ ಸೀರೆಯಲ್ಲಿ ನವವಧು ಡಾ.ನಿರುಪಮ ಕಂಗೊಳಿಸಿದ್ದು ಹೀಗೆ.

ಹೊಸ ಬಾಳಿಗೆ ಅಡಿಯಿಟ್ಟರು
ಬೆಳಗ್ಗೆ 9.30-10 ಗಂಟೆ ವರೆಗೆ ಇದ್ದ ಶುಭ ಮುಹೂರ್ತದಲ್ಲಿ ಡಾ.ನಿರುಪಮ-ಡಾ.ದಿಲೀಪ್ ಹೊಸ ಬಾಳಿಗೆ ಅಡಿಯಿಟ್ಟರು.

ಸ್ಟೆಪ್ ಹಾಕಿದ ವಿನಯ್-ಗುರು
ದೊಡ್ಡಪ್ಪನ ಮಗಳ ಮದುವೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಪುತ್ರರಾದ ವಿನಯ್ ಮತ್ತು ಗುರು ರಾಜ್ ಕುಮಾರ್ ಸಖತ್ತಾಗಿ ಡ್ಯಾನ್ಸ್ ಮಾಡಿದರು.

ಮಧು ಬಂಗಾರಪ್ಪ-ಗೀತಾ
ಮಗಳ ಮದುವೆಯಲ್ಲಿ ಗೀತಾ ಶಿವರಾಜ್ ಕುಮಾರ್ ಮತ್ತು ಮಧು ಬಂಗಾರಪ್ಪ.

ನವ ಜೋಡಿಗೆ ಶುಭ ಹಾರೈಸಲು ಜನಜಂಗುಳಿ
ನವ ಜೋಡಿಗೆ ಶುಭ ಹಾರೈಸಲು ಖ್ಯಾತ ನಾಮರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಆಗಮಿಸಿದರು.

ಶುಭ ಕೋರಿದ ಜಗ್ಗೇಶ್ ಕುಟುಂಬ
ಡಾ.ನಿರುಪಮ ಮತ್ತು ಡಾ.ದಿಲೀಪ್ ಅವರಿಗೆ ನವರಸ ನಾಯಕ ಜಗ್ಗೇಶ್ ಶುಭಕೋರಿದರು.

ಎಸ್.ಎಂ.ಕೃಷ್ಣ ಆಗಮನ
ಶಿವಣ್ಣನ ಮಗಳಿಗೆ ಆಶೀರ್ವಾದ ಮಾಡಲು ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆಗಮಿಸಿದ್ದರು.

ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್
ಕಾಲಿವುಡ್ ನ ಖ್ಯಾತ ನಿರ್ದೇಶಕ ಕೆ.ಎಸ್.ರವಿಕುಮಾರ್ ನವಜೋಡಿಗೆ ಶುಭ ಕೋರಿದರು.

ರಾಘವೇಂದ್ರ ರಾಜ್ ಕುಮಾರ್ ದಂಪತಿ
ಅಣ್ಣನ ಮಗಳ ಮದುವೆಯಲ್ಲಿ ರಾಘವೇಂದ್ರ ರಾಜ್ ಕುಮಾರ್ ಮತ್ತು ಪತ್ನಿ ಮಂಗಳ ಕಾಣಿಸಿಕೊಂಡಿದ್ದು ಹೀಗೆ.

ಶಿವಣ್ಣ ಜೊತೆ ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಕೂಡ ಆಗಮಿಸಿ ಡಾ.ನಿರುಪಮ ಮತ್ತು ಡಾ.ದಿಲೀಪ್ ಅವರಿಗೆ ಶುಭ ಹಾರೈಸಿದರು.

ಕುಟುಂಬದೊಂದಿಗೆ ಡಾ.ದಿಲೀಪ್
ಮುಹೂರ್ತಕ್ಕೂ ಮುನ್ನ ಡಾ.ದಿಲೀಪ್ ಕುಟುಂಬದವರೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.

ವಿನಯ್-ಗುರು ಜೊತೆ ದಿಲೀಪ್
ಮುಹೂರ್ತಕ್ಕೂ ಮೊದಲು ಡಾ.ದಿಲೀಪ್ ಜೊತೆ ಫೋಟೋ ಕ್ಲಿಕ್ ಮಾಡಿಸಿಕೊಂಡು ವಿನಯ್ ಮತ್ತು ಗುರು ರಾಜ್ ಕುಮಾರ್ ಸಂಭ್ರಮಿಸಿದರು.

ಹೊನ್ನವಳ್ಳಿ ಕೃಷ್ಣ
ಡಾ.ರಾಜ್ ಕುಮಾರ್ ಅವರಿಗೆ ಅತ್ಯಾಪ್ತರಾಗಿದ್ದ ಹೊನ್ನವಳ್ಳಿ ಕೃಷ್ಣ ಕೂಡ ಕುಟುಂಬ ಸಮೇತ ಆಗಮಿಸಿ ನವ ಜೋಡಿಗೆ ಶುಭ ಕೋರಿದರು.

ಪುನೀತ್ ಜೊತೆ ಸೆಲ್ಫಿ
ಶಿವಣ್ಣನ ಮಗಳ ಮದುವೆಗೆ ಆಗಮಿಸಿದ ಅಭಿಮಾನಿಯೊಬ್ಬರು ಪುನೀತ್ ರಾಜ್ ಕುಮಾರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು. {Photo Courtesy: shivannamagalamaduve.com}


Click it and Unblock the Notifications











