ದೊಡ್ಮನೆ ಮೊಮ್ಮಗಳಿಗೆ ಬಳೆ ತೊಡಿಸುವ ಶಾಸ್ತ್ರದ ಚಿತ್ರಗಳು
ಅಂತೂ 'ದೊಡ್ಮನೆ ಕುಟುಂಬ' ಕಾಯುತ್ತಿದ್ದ ಘಳಿಗೆ ಬಂದೇಬಿಟ್ಟಿದೆ. ಅಣ್ಣಾವ್ರ ಹಿರಿಯ ಪುತ್ರ ಶಿವರಾಜ್ ಕುಮಾರ್ ಅವರ ಮಗಳು ಡಾ.ನಿರುಪಮ ವಿವಾಹ ಮಹೋತ್ಸವ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ.
ಇಂದು (ಆಗಸ್ಟ್ 31) ಬೆಳಗ್ಗೆ 9.30ಕ್ಕೆ ಡಾ.ನಿರುಪಮ, ಡಾ.ದಿಲೀಪ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ವಿವಾಹ ಪೂರ್ವ ಶಾಸ್ತ್ರಗಳಿಗೆ ನಿನ್ನೆ ಚಾಲನೆ ಸಿಕ್ಕಿದ್ದು, ಅರಮನೆ ಮೈದಾನದ ತ್ರಿಪುರ ವಾಸಿನಿ ಹಾಲ್ ನಲ್ಲಿ ವರಪೂಜೆ ಕಾರ್ಯಕ್ರಮ ನೆರವೇರಿದೆ. ['ದೊಡ್ಮನೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ]
ಅದಕ್ಕೂ ಮುನ್ನ, ಬೆಂಗಳೂರಿನ ನಾಗವಾರದಲ್ಲಿರುವ ಶಿವಣ್ಣ ಮನೆಯಲ್ಲಿ ಮದುಮಗಳು ಡಾ.ನಿರುಪಮ ಅವರಿಗೆ ಕೆಲ ಶಾಸ್ತ್ರಗಳನ್ನ ನೆರವೇರಿಸಲಾಯ್ತು. ನಂತರ ಅಳಿಯ ಡಾ.ದಿಲೀಪ್ ಅವರಿಗೆ ಶಿವಣ್ಣ ಉಡುಗೊರೆಯಾಗಿ ನೀಡುತ್ತಿರುವ BMW ಕಾರ್ ನಲ್ಲಿ ಶಿವಣ್ಣ ದಂಪತಿ ಪುತ್ರಿ ಡಾ.ನಿರುಪಮ ಸಮೇತ ಅರಮನೆ ಮೈದಾನಕ್ಕೆ ಆಗಮಿಸಿದರು. [ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದ ಚಿತ್ರಗಳು]
ಪ್ಯಾಲೇಸ್ ಗ್ರೌಂಡ್ ನ ತ್ರಿಪುರ ವಾಸಿನಿ ಹಾಲ್ ನಲ್ಲಿ ವಧು ಡಾ.ನಿರುಪಮ ಅವರಿಗೆ ಬಳೆ ತೊಡಿಸುವ ಶಾಸ್ತ್ರ ನಡೆಯಿತು. ಆ ಚಿತ್ರಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

ಸಿಂಗಾರಗೊಂಡಿರುವ ನವ ವಧು ಡಾ.ನಿರುಪಮ
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಪುತ್ರಿ ಡಾ.ನಿರುಪಮ ವಧುವಾಗಿ ಸಿಂಗಾರಗೊಂಡಿರುವ ಪರಿ ಇದು. ಸಾಕ್ಷಾತ್ ದೇವತೆಯಂತೆ ಕಂಗೊಳಿಸುತ್ತಿರುವ ಡಾ.ನಿರುಪಮ ಅವರನ್ನ ಸ್ವತಃ ಶಿವಣ್ಣ ಕೈಹಿಡಿದು ಕರೆದುಕೊಂಡು ಬರುತ್ತಿರುವುದು.

ನಿರುಪಮ ಬಾಯಿಗೆ ಸಿಹಿ
ಪುತ್ರಿ ಡಾ.ನಿರುಪಮ ಅವರಿಗೆ ಸಿಹಿ ತಿನ್ನಿಸುತ್ತಿರುವ ತಾಯಿ ಗೀತಾ ಶಿವರಾಜ್ ಕುಮಾರ್.

ಶಿವರಾಜ್ ಕುಮಾರ್ ಮನೆಯಲ್ಲಿ ಶಾಸ್ತ್ರ
ಅರಮನೆ ಮೈದಾನಕ್ಕೆ ತೆರಳುವ ಮುನ್ನ ಡಾ.ಶಿವರಾಜ್ ಕುಮಾರ್ ಅವರ ಮನೆಯಲ್ಲಿ ವಿವಾಹ ಪೂರ್ವ ಶಾಸ್ತ್ರಗಳು ನೆರವೇರಿತು.

ಮಂಗಳ ರಾಘವೇಂದ್ರ ರಾಜ್ ಕುಮಾರ್ ಭಾಗಿ
ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಪತ್ನಿ ಮಂಗಳ ರಾಘವೇಂದ್ರ ರಾಜ್ ಕುಮಾರ್ ಮತ್ತು ವಿನಯ್ ರಾಜ್ ಕುಮಾರ್ ರನ್ನ ಕಾಣಬಹುದು.

ಆರತಿ ಬೆಳಗಿದ ಶಿವಣ್ಣ
ಮುದ್ದಿನ ಮಗಳಿಗೆ ಶಿವಣ್ಣ ಆರತಿ ಬೆಳಗಿದರು.

ವಿನಯ್ ಮತ್ತು ಗುರು
ವಿನಯ್ ಮತ್ತು ಗುರು ರಾಘವೇಂದ್ರ ರಾಜ್ ಕುಮಾರ್ ಕೂಡ ಡಾ.ನಿರುಪಮ ಅವರಿಗೆ ಶುಭ ಹಾರೈಸಿದರು.

ತ್ರಿಪುರ ವಾಸಿನಿಯಲ್ಲಿ ವೇದಿಕೆ
ಡಾ.ನಿರುಪಮ ಅವರಿಗೆ ಬಳೆ ತೊಡಿಸುವ ಶಾಸ್ತ್ರಕ್ಕೆ ಸಜ್ಜಾಗಿರುವ ವೇದಿಕೆ. ['ದೊಡ್ಮನೆ ಅಳಿಯ'ನಿಗೆ ಶಿವಣ್ಣ ಬಂಪರ್ ಉಡುಗೊರೆ]

ಕಂಗೊಳಿಸುತ್ತಿರುವ ತ್ರಿಪುರ ವಾಸಿನಿ
ಡಾ.ನಿರುಪಮ ಅವರ ವಿವಾಹಕ್ಕೆ ಅರಮನೆ ಮೈದಾನದ ತ್ರಿಪುರ ವಾಸಿನಿ ಅದ್ದೂರಿಯಾಗಿ ಸಿಂಗಾರಗೊಂಡಿದೆ.

ಮದುವೆ ಮಂಟಪಕ್ಕೆ ಅಗಮಿಸಿದ ನಿರುಪಮ
ನೀಲಿ ಬಣ್ಣದ ರೇಶ್ಮೆ ಸೀರೆಯಲ್ಲಿ, ಮಿರ ಮಿರ ಮಿಂಚುವ ಆಭರಣಗಳೊಂದಿಗೆ ಡಾ.ನಿರುಪಮ ಮದುವೆ ಮಂಟಪಕ್ಕೆ ಆಗಮಿಸಿದರು.

ಮುಂದಾಳತ್ವ ವಹಿಸಿದ ವಿನಯ್-ಗುರು
ವಧುವಿನ ಶಾಸ್ತ್ರಗಳಲ್ಲಿ ವಿನಯ್ ಮತ್ತು ಗುರು ಮುಂದಾಳತ್ವ ವಹಿಸಿದರು.

ಟೆಂಪಲ್ ಜ್ಯೂವೆಲರಿ ಡಿಸೈನ್
ಮದುವೆಗಾಗಿಯೇ ವಿಶೇಷವಾಗಿ ತಯಾರಿಸಲಾದ ಬ್ರೈಡಲ್ ಟೆಂಪಲ್ ಜ್ಯುವೆಲರಿಯನ್ನ ತೊಟ್ಟು ಡಾ.ನಿರುಪಮ ಮಿಂಚಿದರು. [ಮಗಳ ಮದುವೆಗೆ ಶಿವಣ್ಣ ಭರ್ಜರಿ ಶಾಪಿಂಗ್.!]

ಹೊಸ ಜೀವನದ ಹೊಸ್ತಿಲಲ್ಲಿ...
ಹೊಸ ಬಾಳಿಗೆ ಅಡಿಯಿಡುತ್ತಿರುವ ಡಾ.ನಿರುಪಮ ಹರ್ಷದಿಂದ ಇರುವ ಪರಿ ಇದು.

ನಿರುಪಮ ಜೊತೆ ನಿವೇದಿತಾ
ಅಕ್ಕ ನಿರುಪಮ ಜೊತೆ ತಂಗಿ ನಿವೇದಿತಾ ಕಾಣಿಸಿಕೊಂಡಿದ್ದು ಹೀಗೆ.

ವಧು ಜೊತೆ ಸೆಲ್ಫಿ
ಅಕ್ಕ ನಿರುಪಮ ಪಕ್ಕ ಕೂತು ತಂಗಿ ನಿವೇದಿತಾ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟರು.

ಬಳೆ ತೊಡಿಸಿಕೊಂಡ ನಿರುಪಮ
ಸಂಪ್ರದಾಯದ ಪ್ರಕಾರ 'ಭಾಗ್ಯದ ಬಳೆಗಾರ'ನ ಕೈಯಿಂದ ಬಳೆ ತೊಡಿಸಿಕೊಂಡು ನಿರುಪಮ ಸಂತಸ ಪಟ್ಟರು.

ಬಳೆ ಶಾಸ್ತ್ರ
ಸಂಜೆ 7.30ರ ಸುಮಾರಿಗೆ ತ್ರಿಪುರ ವಾಸಿನಿಯಲ್ಲಿ ಡಾ.ನಿರುಪಮ ಅವರಿಗೆ ಬಳೆ ತೊಡಿಸುವ ಶಾಸ್ತ್ರ ನೆರವೇರಿತು.

ಸಂಭ್ರಮದಲ್ಲಿ ಪುನೀತ್ ರಾಜ್ ಕುಮಾರ್
ಅಣ್ಣನ ಮಗಳ ಮದುವೆ ಸಂಭ್ರಮದಲ್ಲಿ ಪುನೀತ್ ರಾಜ್ ಕುಮಾರ್.

ಸಡಗರದಲ್ಲಿ ರಾಘವೇಂದ್ರ ರಾಜ್ ಕುಮಾರ್
ಬರುವ ಅತಿಥಿಗಳನ್ನ ಸ್ವಾಗತಿಸುವುದರಲ್ಲಿ ರಾಘವೇಂದ್ರ ರಾಜ್ ಕುಮಾರ್ ಬಿಜಿಯಾಗಿದ್ದರು.

ಮಗಳಿಗೆ ಆಶೀರ್ವದಿಸಿದ ಶಿವಣ್ಣ-ಗೀತಾ
ಡಾ.ನಿರುಪಮ ಅವರಿಗೆ ಶಿವಣ್ಣ ಮತ್ತು ಗೀತಾ ಅಕ್ಷತೆಕಾಳು ಹಾಕಿ ಆಶೀರ್ವದಿಸಿದರು. [ಶಿವಣ್ಣ ಮಗಳ ಮದುವೆಗೆ ವಿಶೇಷ ವೆಬ್ ಸೈಟ್ ಆರಂಭ]

ವಧುಗೆ ಆಶೀರ್ವದಿಸಿದ ಸದಾನಂದಗೌಡರು
ಡಾ.ನಿರುಪಮ ಅವರಿಗೆ ಶುಭ ಕೋರುವುದಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಆಗಮಿಸಿದರು.

ಶುಭ ಹಾರೈಸಿದ ಅನಂತ್ ಕುಮಾರ್
ಶಿವಣ್ಣ ಪುತ್ರಿಗೆ ಶುಭ ಕೋರುವುದಕ್ಕೆ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ಸಮೇತ ಆಗಮಿಸಿದರು.

ಅನಂತ್ ಕುಮಾರ್ ಜೊತೆ ಪುನೀತ್ ಮಾತು
ಕೇಂದ್ರ ಸಚಿವ, ಬಿಜೆಪಿ ನಾಯಕ ಅನಂತ್ ಕುಮಾರ್ ಅವರನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬರಮಾಡಿಕೊಂಡು ಮಾತುಕತೆ ನಡೆಸಿದರು.

ಎಣ್ಣೆ ಶಾಸ್ತ್ರ
ಸಂಪ್ರದಾಯದಂತೆ ಎಣ್ಣೆ ಶಾಸ್ತ್ರ ಕೂಡ ನೆರವೇರಿತು.

ಖುಷಿ ಪಟ್ಟ ಪಾರ್ವತಮ್ಮ ರಾಜ್ ಕುಮಾರ್
ಮೊಮ್ಮಗಳ ಮದುವೆಯನ್ನ ಕಣ್ತುಂಬಿಕೊಳ್ಳುತ್ತಾ ಅಜ್ಜಿ ಪಾರ್ವತಮ್ಮ ರಾಜ್ ಕುಮಾರ್ ಸಂತಸ ಪಟ್ಟರು. {Photo Courtesy : shivannamagalamadhuve.com}

ಗೆಳೆಯರ ಜೊತೆ ಶಿವರಾಜ್ ಕುಮಾರ್
ಚಿಕ್ಕವಯಸ್ಸಿನಿಂದ ಶಿವಣ್ಣನಿಗೆ ಅತ್ಯಾಪ್ತರಾಗಿರುವ ಎಲ್ಲಾ ಗೆಳೆಯರೂ ಡಾ.ನಿರುಪಮ ಅವರ ವಿವಾಹಕ್ಕೆ ಹಾಜರಾಗಿದ್ದಾರೆ.


Click it and Unblock the Notifications











