»   » ಪ್ರವೀಣ್-ಮೇಘನಾ ಗಾಂವ್ಕರ್ ಜೊತೆ ಡಿನ್ನರ್ ಮಾಡುವ ಆಸೆ ಇದ್ಯಾ?

ಪ್ರವೀಣ್-ಮೇಘನಾ ಗಾಂವ್ಕರ್ ಜೊತೆ ಡಿನ್ನರ್ ಮಾಡುವ ಆಸೆ ಇದ್ಯಾ?

Posted By:
Subscribe to Filmibeat Kannada

ಕಳೆದ ವರ್ಷ ನಿರ್ದೇಶಕ ಸಿಂಪಲ್ ಸುನಿ ಅವರ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಅಂತ ಬಂದಾಗ ಅವರ ಡೈಲಾಗ್ ಗೆ ಹಾಗೂ ಅವರದೇ ಸ್ಟೈಲ್ ಗೆ ಎಲ್ಲರೂ ಬಹುಪರಾಕ್ ಎಂದರು.

ಇದೀಗ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಅಂತ ಮತ್ತೆ ಎರಡನೇ ಡೇಟಿಂಗ್ ಶುರು ಹಚ್ಚಿಕೊಂಡಿರುವ ಸುನಿ ಅವರು ಚಿತ್ರದ ಪ್ರೊಮೋಷನ್ ಮಾತ್ರ ಡಿಫರೆಂಟಾಗಿ ಮಾಡ್ತಾ ಇದ್ದಾರೆ.['ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ರಿಲೀಸ್ ಯಾವಾಗ?]


ಈಗಾಗಲೇ ಚಿತ್ರದ ಎಲ್ಲಾ ಕೆಲಸಗಳನ್ನು ಮುಗಿಸಿ ಉಸ್ಸಪ್ಪಾ ಅಂತ ನಿಟ್ಟುಸಿರು ಬಿಟ್ಟಿರುವ ನಿರ್ದೇಶಕ ಸುನಿ ಅವರು ಚಿತ್ರದ ಬಿಡುಗಡೆಯ ತಯಾರಿಯಲ್ಲಿ ಭಯಂಕರ ಬ್ಯುಸಿಯಾಗಿದ್ದಾರೆ.


ಅಂದಹಾಗೆ ಬಿಡುಗಡೆ ಕೆಲಸದ ಜೊತೆ ಜೊತೆಗೆ ಹೊಸದಾಗಿ ಹೀರೋ ಮತ್ತು ಹೀರೊಯಿನ್ ನ ಫೋಟೋ ಶೂಟ್ ಬೇರೆ ಮಾಡಿದ್ದಾರೆ. ಇದೇನಪ್ಪಾ ಚಿತ್ರ ಬಿಡುಗಡೆ ಹಂತದಲ್ಲಿರುವಾಗ ಹೊಸದಾಗಿ ಫೊಟೋ ಶೂಟ್ ಅಂತ ತಲೆ ಕೆರ್ಕೋತಾ ಇದ್ದೀರಾ?.


ಹೌದು ಚಿತ್ರದ ನಾಯಕ ಪ್ರವೀಣ್ ತೇಜ್ ಮತ್ತು ನಾಯಕಿ ಮೇಘನಾ ಗಾಂವ್ಕರ್ ಅವರು 'ಮೈ ಗಿಫ್ಟ್ ಮಾರ್ಟ್' ಎಂಬ ಆನ್ ಲೈನ್ ಪ್ರಾಡಕ್ಟ್ಸ್ ಗೆ ಪಾರ್ಟ್ನರ್ ಶಿಪ್ ಆಗಿದ್ದು ಅದಕ್ಕಾಗಿ ಈ ಫೊಟೋ ಶೂಟ್ ನಡೆಸಲಾಗಿದೆ.['ಸಿಂಪಲ್ಲಾಗಿ ಇನ್ನೊಂದು ಲವ್ ಸ್ಟೋರಿ' ಟ್ರೈಲರ್ ಸೂಪರ್ ಕಣ್ರೀ]


ಅಂದಹಾಗೆ ಇದು ಬರಿ ಫೊಟೋ ಶೂಟ್ ಅಲ್ಲ ಬದ್ಲಾಗಿ ಇನ್ನೇನೋ ಇದೆ. ಇದು ನಿಮಗೂ ಖುಷಿ ಕೊಡುವ ವಿಚಾರ. ಅದೇನೆಂದು ತಿಳಿಯಬೇಕೇ ಹಾಗಿದ್ರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


'ಮೈ ಗಿಫ್ಟ್ ಮಾರ್ಟ್' ಗೆ ಲಾಗಿನ್ ಆಗಿ

www.mygiftmart.com ಗೆ ಲಾಗಿನ್ ಆಗಿ ಅದರಿಂದ ಏನಾದ್ರೂ ನೀವು ಗಿಫ್ಟ್ ಖರೀದಿ ಮಾಡಿ ನೀವೇನಾದ್ರೂ ಲಕ್ಕಿ ವಿನ್ನರ್ ಆದರೆ ನಿಮಗೆ ಫ್ರೀ ಕಪಲ್ ಟಿಕೆಟ್ ಕೊಡ್ತಾರೆ. ಜೊತೆಗೆ ನೀವು ನಿಮ್ಮ ಲವರ್ ಜೊತೆ ಅದೂ ಚಿತ್ರದ ಹೀರೋ ಮತ್ತು ಹೀರೊಯಿನ್ ಜೊತೆ ಕುಳಿತು ಸಿನಿಮಾ ನೋಡಬಹುದು. ಆಹಾ..! ಎಂತಹ ಅವಕಾಶ ಸದುಪಯೋಗಪಡಿಸಿಕೊಳ್ಳಿ.[ಮುಂದಿನ ತಿಂಗಳು 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ರಿಲೀಸ್]


ಬರೀ ಟಿಕೆಟ್ ಮಾತ್ರ ಅಲ್ಲ ಜೊತೆಗೆ.....

ಇನ್ನು ನೀವು ವಿನ್ನರ್ ಆದ್ರೆ ಬರಿ ಟಿಕೆಟ್, ಸಿನಿಮಾ ಮಾತ್ರ ಅಲ್ಲ ಚಿತ್ರದ ನಾಯಕ ಪ್ರವೀಣ್ ತೇಜ್ ಮತ್ತು ಚಿತ್ರದ ನಾಯಕಿ ಮೇಘನಾ ಗಾಂವ್ಕರ್ ಜೊತೆ ರಾತ್ರಿ ಒಟ್ಟಿಗೆ ಒಂದೇ ಟೇಬಲ್ ನಲ್ಲಿ ಕುಳಿತು ಡಿನ್ನರ್ ಮಾಡುವ ಅವಕಾಶ ಕೂಡ ಇದೆ.


ಮಾರ್ಚ್ ಗೆ ಲವ್ ಸ್ಟೋರಿ ಸೇಲ್

ನಿರ್ದೇಶಕ ಸಿಂಪಲ್ ಸುನಿ ಅವರು ಆಕ್ಷನ್-ಕಟ್ ಹೇಳಿರುವ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಸಿನಿಮಾ ಮಾರ್ಚ್ 4ಕ್ಕೆ ತೆರೆ ಮೇಲೆ ಬರುತ್ತೆ ಅಂತ ಈ ಮೊದಲು ಸುದ್ದಿಯಾಗಿತ್ತು. ಆದರೆ ಅದೇ ಡೇಟ್ ಗೆ ಸಿನಿಮಾ ರಿಲೀಸ್ ಆಗುತ್ತೋ ಇಲ್ವೋ ಅನ್ನೋದು ಇನ್ನೂ ಪಕ್ಕಾ ಆಗಿಲ್ಲ.


ಸುನಿ ಸೆಂಟಿಮೆಂಟ್

ಮೂರು ವರ್ಷಗಳ (2013) ಹಿಂದೆ ಇದೇ ಸುನಿ ಅವರ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿನಿಮಾ ಮಾರ್ಚ್ 8ಕ್ಕೆ ಬಿಡುಗಡೆ ಆಗಿತ್ತು. ಅದಕ್ಕೆ ಈ ಬಾರಿ ಕೂಡ ಆ ದಿನಾಂಕದ ಹಿಂದೆ ಮುಂದೆ ಸಿನಿಮಾ ತೆರೆಗೆ ತರಬೇಕು ಅನ್ನೋದು ಸುನಿ ಅವರ ಸಿಂಪಲ್ ಸೆಂಟಿಮೆಂಟ್.


ಮಾರ್ಚ್ 4 ಇಲ್ಲಾಂದ್ರೆ 11

ಇದೀಗ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರದ ಸೆನ್ಸಾರ್ ಇನ್ನೂ ಆಗಿಲ್ಲ ಎಂದು ಮಾರ್ಚ್ 11 ಕ್ಕಾದ್ರೂ ಸಿನಿಮಾ ಬಿಡುಗಡೆ ಮಾಡಬೇಕು ಅನ್ನೋದು ಸುನಿ ಅವರ ಹಠ. ಇನ್ನೇನು ನಾಳೆ ನಾಡಿದ್ದರಲ್ಲಿ ಸಿನಿಮಾ ಸೆನ್ಸಾರ್ ಆಗುತ್ತೆ.


ಚ್ಯೂಸಿ ಮೇಘನಾ ಗಾಂವ್ಕರ್

ಆರ್.ಚಂದ್ರು ಅವರ ಹಿಟ್ ಸಿನಿಮಾ 'ಚಾರ್ ಮಿನಾರ್' ಚಿತ್ರದ ನಂತರ ಸಖತ್ ಚ್ಯೂಸಿಯಾಗಿದ್ದ ನಟಿ ಮೇಘನಾ ಗಾಂವ್ಕರ್ ಅವರು ಸಿಂಪಲ್ ಸುನಿ ಅವರ 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಸಿನಿಮಾದಲ್ಲಿ ಮಿಂಚುತ್ತಿದ್ದಾರೆ.


ನಟ ಪ್ರವೀಣ್ ತೇಜ್

'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ಮಿಂಚಿದ್ದ ನಟ ಪ್ರವೀಣ್ ತೇಜ್ ಅವರು ಬಹುನಿರೀಕ್ಷಿತ ಸುನಿ ಅವರ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕ ನಟರಾಗಿ ಮಿಂಚುತ್ತಿದ್ದಾರೆ.


ನಿರ್ದೇಶಕ ಸಿಂಪಲ್ ಸುನಿ

ಈ ಮೊದಲು ಹೊಸಬರನ್ನು ಹಾಕಿಕೊಂಡು ಮಾಡಿದ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿನಿಮಾ ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಆಗಿತ್ತು. ತದನಂತರ 'ಬಹುಪರಾಕ್' ಅಷ್ಟಾಗಿ ಹಿಟ್ ಆಗಲಿಲ್ಲ. ನಂತರ ಇದೀಗ ಮತ್ತೆ ಮೊದಲ ಭಾಗ ಒಂದ್ ಲವ್ ಸ್ಟೋರಿ ರೀತಿಯ ಡೈಲಾಗ್ ಗಳ ಥರಾನೇ ಇರುವ ಇನ್ನೊಂದು ಲವ್ ಸ್ಟೋರಿ ಹೊತ್ತು ಬಂದಿದ್ದಾರೆ.


ಮ್ಯೂಸಿಕ್-ಟ್ರೈಲರ್ ಹಿಟ್

ಸಂಗೀತ ನಿರ್ದೇಶಕರಾದ ಬಿ.ಜೆ ಭರತ್ ಮತ್ತು ಸಾಯಿ ಕಿರಣ್ ಅವರು 'ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ' ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಹಾಡುಗಳು ಈಗಾಗಲೇ ಹಿಟ್ ಆಗಿವೆ. ಜೊತೆಗೆ ಈಗಾಗಲೇ ಬಿಡುಗಡೆ ಆಗಿರುವ ಟ್ರೈಲರ್ ಕೂಡ ಎಲ್ಲರ ಮೆಚ್ಚುಗೆ ಗಳಿಸಿದೆ.


English summary
Suni Directorial Kannada Movie 'Simplag Innond Love Story' releasing on March 11th. Kannada Actor Praveen, Kannada Actress Meghana Gaonkar in the lead role. Here is the new pics of new photo shoot. Check out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada