For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಕೊಡಗಿನ ಕುವರಿ ಸಿಂಧು ಲೋಕನಾಥ್ ಮದುವೆಯ ಅಮೂಲ್ಯ ಕ್ಷಣಗಳು

  By Naveen
  |

  ಕೊಡಗಿನ ಕುವರಿ ಸಿಂಧು ಲೋಕನಾಥ್ ಮದುವೆ ಆಗಿದ್ದಾರೆ. ಮಂಗಳೂರು ಮೂಲದ ಶ್ರೇಯಸ್ ಎಂಬುವರನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಸಿಂಧು ಈಗ ವಿವಾಹವಾಗಿದ್ದಾರೆ.

  ನಾಲ್ಕು ದಿನಗಳ ಹಿಂದೆ ಅಂದ್ರೆ ಆಗಸ್ಟ್ 27 ರಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಸಿಂಧು ಲೋಕನಾಥ್-ಶ್ರೇಯಸ್ ಮದುವೆ ನಡೆದಿದೆ.

  ಅಂದಹಾಗೆ, ಸಿಂಧು ಮತ್ತು ಶ್ರೇಯಸ್ ಮದುವೆಯ ಫೋಟೋಗಳು ನಿಮ್ಮ ಫಿಲ್ಮಿ ಬೀಟ್ ಕನ್ನಡಕ್ಕೆ ಲಭ್ಯವಾಗಿದೆ. ನೋಡಿ...

  ಸಿಂಧು ವಿವಾಹ

  ಸಿಂಧು ವಿವಾಹ

  ನಟಿ ಸಿಂಧು ಲೋಕನಾಥ್ ಮತ್ತು ಶ್ರೇಯಸ್ ವಿವಾಹ ಆಗಸ್ಟ್ 27 ರಂದು ಮಡಿಕೇರಿಯಲ್ಲಿ ನಡೆದಿದೆ. ವಿವಾಹ ಕಾರ್ಯಕ್ರಮಕ್ಕೆ ಹತ್ತಿರದ ಸಂಬಂಧಿ ಹಾಗೂ ಕುಟುಂಬದವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

  ಸಾಂಪ್ರದಾಯಿಕ ಉಡುಗೆ

  ಸಾಂಪ್ರದಾಯಿಕ ಉಡುಗೆ

  ಅಪ್ಪಟ ಕೊಡಗಿನ ಶೈಲಿಯಲ್ಲಿ ಸಿಂಧು ಲೋಕನಾಥ್-ಶ್ರೇಯಸ್ ವಿವಾಹ ನಡೆದಿದ್ದು, ಕೆಂಪು ಬಣ್ಣದ ಸೀರೆಯಲ್ಲಿ ಮಿರಮಿರ ಮಿಂಚಿದ್ದರು ಮದುಮಗಳು ಸಿಂಧು.

  ಸಿಂಪಲ್ ಆಮಂತ್ರಣ ಪತ್ರಿಕೆ

  ಸಿಂಪಲ್ ಆಮಂತ್ರಣ ಪತ್ರಿಕೆ

  ಸಿಂಧು ಲೋಕನಾಥ್ ಮತ್ತು ಶ್ರೇಯಸ್ ಮದುವೆಯ ಆಮಂತ್ರಣ ಪತ್ರಿಕೆ ಸಖತ್ ಸಿಂಪಲ್ ಆಗಿದೆ.

  ಶ್ರೇಯಸ್ ಬಗ್ಗೆ

  ಶ್ರೇಯಸ್ ಬಗ್ಗೆ

  ಮಂಗಳೂರು ಮೂಲದ ಸಂಜೀವ್ ಕೊಡಿಯಾಲ್ ಮತ್ತು ಸಬಿತಾ ಕೊಡಿಯಾಲ್ ರವರ ಪುತ್ರ ಶ್ರೇಯಸ್. ಪ್ರತಿಷ್ಟಿತ ಪೂಮಾ ಕಂಪನಿಯಲ್ಲಿ ಉದ್ಯೋಗಿ ಆಗಿರುವ ಶ್ರೇಯಸ್ ಜೊತೆ ಸಿಂಧು ಲೋಕನಾಥ್ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ.

  ಸದ್ದು ಮಾಡದೆ, ಸುದ್ದಿ ಆಗದೆ ಮದುವೆ ಆದ ನಟಿ ಸಿಂಧು ಲೋಕನಾಥ್ಸದ್ದು ಮಾಡದೆ, ಸುದ್ದಿ ಆಗದೆ ಮದುವೆ ಆದ ನಟಿ ಸಿಂಧು ಲೋಕನಾಥ್

  ಅನೇಕ ಚಿತ್ರದಲ್ಲಿ ನಟನೆ

  ಅನೇಕ ಚಿತ್ರದಲ್ಲಿ ನಟನೆ

  ಕನ್ನಡದ ಅನೇಕ ಚಿತ್ರದಲ್ಲಿ ಸಿಂಧು ನಾಯಕಿಯಾಗಿ ನಟಿಸಿದ್ದಾರೆ. ಅವುಗಳಲ್ಲಿ 'ಪರಿಚಯ', 'ಡ್ರಾಮಾ', 'ಯಾರೇ ಕೂಗಾಡಲಿ', 'ಲವ್ ಇನ್ ಮಂಡ್ಯ' ಪ್ರಮುಖವಾಗಿದೆ.

  English summary
  Kannada Actress Sindhu Lokanath got married to Shreyas on August 27th in Madikeri. Check out the pictures

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X