ಚಿತ್ರಗಳು: ಧಾಂ ಧೂಂ ಆಗಿ ನಡೆಯಿತು ಸೌಂದರ್ಯ ರಜನಿಕಾಂತ್ ಎರಡನೇ ವಿವಾಹ.!
ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ರವರ ಎರಡನೇ ವಿವಾಹ ಮಹೋತ್ಸವ ಇಂದು ಚೆನ್ನೈನಲ್ಲಿ ಧಾಂ ಧೂಂ ಆಗಿ ನಡೆಯಿತು. ದಕ್ಷಿಣ ಭಾರತದ ಸಂಪ್ರದಾಯದಂತೆ ನಟ ಕಮ್ ಬಿಸಿನೆಸ್ ಮ್ಯಾನ್ ಆಗಿರುವ ವಿಷಗನ್ ವನಂಗಮುಡಿ ರವರ ಕೈಹಿಡಿದರು ಸೌಂದರ್ಯ ರಜನಿಕಾಂತ್.
ಚೆನ್ನೈನಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಸೌಂದರ್ಯ ರಜನಿಕಾಂತ್-ವಿಷಗನ್ ವನಂಗಮುಡಿ ಮದುವೆ ನಡೆದಿದ್ದು, ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ, ನಟ ಕಮಲ್ ಹಾಸನ್ ಸೇರಿದಂತೆ ಹಲವು ಗಣ್ಯರು ಸಾಕ್ಷಿ ಆದರು.
ಅದ್ಧೂರಿಯಾಗಿ ನಡೆದ ಸೌಂದರ್ಯ ರಜನಿಕಾಂತ್-ವಿಷಗನ್ ವನಂಗಮುಡಿ ಮದುವೆಯ ಚಿತ್ರಗಳು ನಿಮ್ಮ ಫಿಲ್ಮಿಬೀಟ್ ಗೆ ಲಭ್ಯವಾಗಿದೆ. ಫೋಟೋ ಸ್ಲೈಡ್ ಗಳಲ್ಲಿ ನೋಡಿರಿ...

ಗ್ರ್ಯಾಂಡ್ ಆಗಿ ನಡೆಯಿತು ಸೌಂದರ್ಯ ರಜನಿಕಾಂತ್ ಎರಡನೇ ವಿವಾಹ
ರಜನಿಕಾಂತ್ ಪುತ್ರಿ ಸೌಂದರ್ಯ ರಜನಿಕಾಂತ್ ಗಿದು ಎರಡನೇ ಮದುವೆ. ಉದ್ಯಮಿ ಅಶ್ವಿನ್ ರಾಮ್ ಕುಮಾರ್ ಜೊತೆಗಿನ ಏಳು ವರ್ಷಗಳ ದಾಂಪತ್ಯವನ್ನ ಮುರಿದುಕೊಂಡಿದ್ದ ಸೌಂದರ್ಯ ರಜನಿಕಾಂತ್ ಇಂದು ನಟ ಮತ್ತು ಉದ್ಯಮಿ ವಿಷಗನ್ ವನಂಗಮುಡಿ ಜೊತೆಗೆ ಹೊಸ ಜೀವನ ಆರಂಭಿಸಿದರು.

ಅಂದು ಪ್ರೀತಿಸಿ ಮದುವೆ ಆಗಿದ್ದ ಸೌಂದರ್ಯ ರಜನಿಕಾಂತ್
ಉದ್ಯಮಿ ಅಶ್ವಿನ್ ರಾಮ್ ಕುಮಾರ್ ರನ್ನ ಸೌಂದರ್ಯ ರಜನಿಕಾಂತ್ ನಾಲ್ಕು ವರ್ಷಗಳ ಕಾಲ ಪ್ರೀತಿಸಿ ಮದುವೆ ಆಗಿದ್ದರು. 2010 ರಲ್ಲಿ ಸೌಂದರ್ಯ ರಜನಿಕಾಂತ್-ಅಶ್ವಿನ್ ಕಲ್ಯಾಣ ನಡೆದಿತ್ತು. 2017 ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಸೌಂದರ್ಯ-ಅಶ್ವಿನ್ ವಿಚ್ಛೇದನ ಪಡೆದಿದ್ದರು.

ವಿಷಗನ್-ಸೌಂದರ್ಯ ಲವ್ ಸ್ಟೋರಿ
ಮೊದಲ ಪತಿಯಿಂದ ವಿಚ್ಛೇದನ ಪಡೆದ ಸೌಂದರ್ಯ ನಟ ವಿಷಗನ್ ಜೊತೆ ಪ್ರೀತಿಯಲ್ಲಿ ಬಿದ್ದರು. ಇವರಿಬ್ಬರ ಪ್ರೀತಿಗೆ ಇಂದು ಮದುವೆ ಎಂಬ ಅಧಿಕೃತ ಮುದ್ರೆ ಬಿದ್ದಿದೆ.

ತಾಯಿ ಮದುವೆಗೆ ಪುತ್ರ ಸಾಕ್ಷಿ.!
ಅಶ್ವಿನ್-ಸೌಂದರ್ಯ ದಂಪತಿಗೆ ವೇದ್ ಎಂಬ ಪುತ್ರನಿದ್ದಾನೆ. ಪುಟ್ಟ ಹುಡುಗ ವೇದ್ ಇಂದು ತಾಯಿ ಸೌಂದರ್ಯ ಎರಡನೇ ಮದುವೆಗೆ ಸಾಕ್ಷಿಯಾದನು.

ವಿಷಗನ್ ಗೂ ಇದು ಎರಡನೇ ಮದುವೆ.!
ಅಂದ್ಹಾಗೆ, ವಿಷಗನ್ ವನಂಗಮುಡಿ ರವರಿಗೂ ಇದು ಎರಡನೇ ಮದುವೆ. ಮ್ಯಾಗಝೀನ್ ಎಡಿಟರ್ ಕನ್ನಿಕಾ ಕುಮಾರನ್ ಎಂಬುವರನ್ನ ವಿಷಗನ್ ಮದುವೆ ಆಗಿದ್ದರು. ಆದರೆ ಆ ಮದುವೆ ಹೆಚ್ಚು ದಿನ ಉಳಿಯಲಿಲ್ಲ.

ಸಂಪ್ರದಾಯ ಬದ್ಧವಾಗಿ ಮದುವೆ
ಪುತ್ರಿ ಸೌಂದರ್ಯ ವಿವಾಹ ಮಹೋತ್ಸವವನ್ನು ರಜನಿಕಾಂತ್ ಸಂಪ್ರದಾಯ ಬದ್ಧವಾಗಿ ನೆರವೇರಿಸಿಕೊಟ್ಟಿದ್ದಾರೆ. ತಮಿಳುನಾಡಿನ ಗಣ್ಯಾತಿಗಣ್ಯರೇ ಸೌಂದರ್ಯ-ವಿಷಗನ್ ಮದುವೆಗೆ ಸಾಕ್ಷಿ ಆದರು.

ಮೆಹಂದಿ ಸಂಭ್ರಮ
ಮದುವೆಗೂ ಮುನ್ನ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಸೌಂದರ್ಯ ರಜನಿಕಾಂತ್ ಅವರ ಮೆಹಂದಿ ಶಾಸ್ತ್ರ ನಡೆದಿತ್ತು.

ಚಿತ್ರರಂಗದ ಜೊತೆಗೆ ಸೌಂದರ್ಯ ನಂಟು
ಸೌಂದರ್ಯ ರಜನಿಕಾಂತ್ ಗ್ರಾಫಿಕ್ ಡಿಸೈನರ್ ಮತ್ತು ಫಿಲ್ಮ್ ಮೇಕರ್. ರಜನಿಕಾಂತ್ ಅಭಿನಯದ 'ಕೊಚ್ಚಾಡಿಯನ್' ಮತ್ತು ಧನುಷ್ ನಟನೆಯ 'ವೇಲೆಯಿಲ್ಲ ಪಟ್ಟಧಾರಿ 2' ಚಿತ್ರಗಳಿಗೆ ಸೌಂದರ್ಯ ಆಕ್ಷನ್ ಕಟ್ ಹೇಳಿದ್ದರು.

ಯಾರು ಈ ವಿಷಗನ್.?
ವಿಷಗನ್ ಉದ್ಯಮಿ ಮತ್ತು ಚಲನಚಿತ್ರ ನಟ. ಫಾರ್ಮಸ್ಯುಟಿಕಲ್ ಕಂಪನಿಯ ಮಾಲೀಕನಾಗಿರುವ ವಿಷಗನ್, ಇತ್ತೀಚೆಗಷ್ಟೇ 'ವಂಜಗರ್ ಉಳಗಮ್' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು.

ಮದುವೆಗೆ ಯಾರೆಲ್ಲಾ ಬಂದಿದ್ದರು.?
ಸೌಂದರ್ಯ-ವಿಷಗನ್ ವಿವಾಹ ಮಹೋತ್ಸವಕ್ಕೆ ತಮಿಳು ನಟ ಕಮಲ್ ಹಾಸನ್, ಧನುಷ್ ಸೇರಿದಂತೆ ಕಾಲಿವುಡ್ ಗಣ್ಯರು ಹಾಜರಿದ್ದರು. ಇನ್ನೂ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಕೂಡ ನವ ಜೋಡಿಗೆ ಶುಭ ಹಾರೈಸಿದರು.


Click it and Unblock the Notifications











