For Quick Alerts
  ALLOW NOTIFICATIONS  
  For Daily Alerts

  ಫೋಟೋ ಆಲ್ಬಂ; 'ಜಿಗರ್ ಥಂಡ' ಆಡಿಯೋ ರಿಲೀಸ್ ನಲ್ಲಿ ತಾರೆಗಳ ಸಂಗಮ

  By Harshitha
  |

  ಸಿದ್ಧಾರ್ಥ್ ಹಾಗೂ ಲಕ್ಷ್ಮಿ ಮೆನನ್ ಅಭಿನಯಿಸಿದ ಕಾಲಿವುಡ್ ನ ಸೂಪರ್ ಹಿಟ್ ಸಿನಿಮಾ 'ಜಿಗರ್ ಥಂಡ', ಅದೇ ಹೆಸರಿನಲ್ಲಿ ಕನ್ನಡಕ್ಕೆ ರೀಮೇಕ್ ಆಗುತ್ತಿದೆ. ಕಿಚ್ಚ ಸುದೀಪ್ ಹಾಗೂ ಎಸ್.ಆರ್.ವಿ ನಿರ್ಮಾಣದಲ್ಲಿ 'ಜಿಗರ್ ಥಂಡ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಅದ್ಧೂರಿಯಾಗಿ ತಯಾರಾಗುತ್ತಿದೆ.

  ಕನ್ನಡದ 'ಜಿಗರ್ ಥಂಡ' ಚಿತ್ರಕ್ಕೆ ರಾಹುಲ್ ನಾಯಕ ನಟರಾದರೆ, ರವಿಶಂಕರ್ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ.

  ಅರ್ಜುನ್ ಜನ್ಯ ಸಂಗೀತ ನಿರ್ದೇಶನದ 'ಜಿಗರ್ ಥಂಡ' ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ಬೆಂಗಳೂರಿನ ರಿಟ್ಜ್ ಕಾರ್ಲ್ಟನ್ ಹೊಟೇಲ್ ನಲ್ಲಿ ನಡೆಯಿತು. ಮುಖ್ಯ ಅತಿಥಿ ಆಗಿ ಆಗಮಿಸಿದ ಕ್ರೇಜಿ ಸ್ಟಾರ್ ರವಿಚಂದ್ರನ್ 'ಜಿಗರ್ ಥಂಡ' ಆಡಿಯೋ ರಿಲೀಸ್ ಮಾಡಿದರು.

  'ಜಿಗರ್ ಥಂಡ' ಆಡಿಯೋ ರಿಲೀಸ್ ಆದ ಸಂಭ್ರಮದಲ್ಲಿ ಇಡೀ ಚಿತ್ರತಂಡ ಕೇಕ್ ಕಟ್ ಮಾಡಿ ಸಂಭ್ರಮಿಸಿತು. [ಅಚ್ಚರಿ.! ಮನಸ್ತಾಪ ಮರೆತು ಒಂದಾದ್ರಾ ಸುದೀಪ್ ಮತ್ತು ಪತ್ನಿ ಪ್ರಿಯಾ?]

  ನಾಯಕ ನಟ ರಾಹುಲ್ ಗೆ ಕಿಚ್ಚ ಸುದೀಪ್ ಶುಭ ಹಾರೈಸಿದರು. ಇದೇ ಸಮಾರಂಭದಲ್ಲಿ ಕಿಚ್ಚ ಸುದೀಪ್ ಪತ್ನಿ ಪ್ರಿಯಾ, ಪುತ್ರಿ ಸಾನ್ವಿ, ನಟಿ ಪ್ರಿಯಾಂಕಾ ಉಪೇಂದ್ರ, ತಮಿಳು ನಟ ಶ್ಯಾಮ್, ನಟ ರವಿಶಂಕರ್, ಚಿಕ್ಕಣ್ಣ ಭಾಗವಹಿಸಿ ತಾರಾ ಮೆರುಗು ನೀಡಿದರು. [ಚಿತ್ರಗಳು; ಹುಟ್ಟುಹಬ್ಬದಂದು ಮಗಳನ್ನು ಕಂಡು ಅಪ್ಪಿ ಮುದ್ದಾಡಿದ ಸುದೀಪ್.!]

  ನಟ ರಾಹುಲ್ ಡ್ಯಾನ್ಸ್ ಮಾಡಿ ಸಂತಸ ಪಟ್ಟರೆ, ನಟ ರವಿಶಂಕರ್ ಹಾಡು ಹಾಡಿ ಎಲ್ಲರನ್ನ ರಂಜಿಸಿದರು. 'ಜಿಗರ್ ಥಂಡ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದ ಫೋಟೋ ಗ್ಯಾಲರಿ ಇಲ್ಲಿದೆ, ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

  English summary
  Kannada Actor Kiccha Sudeep, Crazy Star V.Ravichandran, Priyanka Upendra, Ravishankar were present at the Audio Release of Kannada Movie 'Jigar Thanda'. Take a look at the pics.
  Monday, May 16, 2016, 13:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X