ಚಿತ್ರಗಳು: ಸೃಜನ್ ಲೋಕೇಶ್ ಬರ್ತಡೇ ಪಾರ್ಟಿಯಲ್ಲಿ ತಾರೆಯರು

By Harshitha

Recommended Video

ಸೃಜನ್ ಲೋಕೇಶ್ ನೈಟ್ ಬರ್ತ್‌ಡೇ ಪಾರ್ಟಿಯಲ್ಲಿ ದರ್ಶನ್...!! | Filmibeat Kannada

ಪಂಚಿಂಗ್ ಡೈಲಾಗ್ ಗಳಿಂದ ಪ್ರೇಕ್ಷಕರಿಗೆ ಮಜಾ ನೀಡಿ 'ಟಾಕಿಂಗ್ ಸ್ಟಾರ್' ಅಂತಲೇ ಖ್ಯಾತಿ ಗಳಿಸಿರುವ ಸೃಜನ್ ಲೋಕೇಶ್ ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡರು.

ಬೆಂಗಳೂರಿನ ಶ್ರೀನಗರದಲ್ಲಿರುವ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಕೇಕ್ ಕಟ್ ಮಾಡಿ ಅಭಿಮಾನಿಗಳ ಸಮ್ಮುಖದಲ್ಲಿ ಬರ್ತಡೇ ಸೆಲೆಬ್ರೇಟ್ ಮಾಡಿಕೊಂಡರು ಸೃಜನ್. ಜೊತೆಗೆ ಬಂಡೆ ಮಹಾಕಾಳಮ್ಮ ದೇವಸ್ಥಾನಕ್ಕೆ ಹೆಬ್ಬಾಗಿಲನ್ನು ನಿರ್ಮಿಸಿ, ಗಿಡಗಳನ್ನು ನೆಟ್ಟು ಅರ್ಥಪೂರ್ಣವಾಗಿ ನಟ ಸೃಜನ್ ಲೋಕೇಶ್ ಜನ್ಮದಿನವನ್ನ ಸಂಭ್ರಮಿಸಿದರು.

ಈ ನಡುವೆ ಕುಟುಂಬಸ್ಥರು ಹಾಗೂ ಸ್ನೇಹಿತರ ಜೊತೆಗೆ ಸೃಜನ್ ಲೋಕೇಶ್ ಪಾರ್ಟಿ ಕೂಡ ಮಾಡಿದರು. ಪಾರ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಬಂದಿದ್ದರು. ಬೇಕಾದ್ರೆ, ನೀವೇ ಈ ಫೋಟೋಗಳನ್ನ ನೋಡಿರಿ...

ಸೃಜನ್ ಬರ್ತಡೇ ಪಾರ್ಟಿಯಲ್ಲಿ 'ಡಿ' ಬಾಸ್

ಸೃಜನ್ ಬರ್ತಡೇ ಪಾರ್ಟಿಯಲ್ಲಿ 'ಡಿ' ಬಾಸ್

ನಿಮ್ಗೆಲ್ಲಾ ಗೊತ್ತಿರುವ ಹಾಗೆ 'ಗಜ' ಹಾಗೂ 'ಸೃಜ' ಕ್ಲೋಸ್ ಫ್ರೆಂಡ್ಸ್. ಹೀಗಾಗಿ ಸೃಜನ್ ಲೋಕೇಶ್ ಜನ್ಮದಿನದ ಸಡಗರದಲ್ಲಿ ದರ್ಶನ್ ಕೂಡ ಪಾಲ್ಗೊಂಡಿದ್ದರು.

ಶ್ವೇತ ಚೆಂಗಪ್ಪ

ಶ್ವೇತ ಚೆಂಗಪ್ಪ

'ಮಜಾ ಟಾಕೀಸ್' ಮನೆಯಲ್ಲಿ ಸೃಜನ್ ಪತ್ನಿ 'ರಾಣಿ' ಪಾತ್ರಧಾರಿ ಶ್ವೇತ ಚೆಂಗಪ್ಪ ಕೂಡ ಸೃಜನ್ ಬರ್ತಡೇ ಪಾರ್ಟಿಗೆ ಬಂದಿದ್ದರು.

ಪತ್ನಿ ಗ್ರೀಷ್ಮ

ಪತ್ನಿ ಗ್ರೀಷ್ಮ

ಸೃಜನ್ ಲೋಕೇಶ್ ಬರ್ತಡೇ ಪಾರ್ಟಿಯಲ್ಲಿ ಪತ್ನಿ ಗ್ರೀಷ್ಮ ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಭಾಗವಹಿಸಿದ್ದರು.

ಹೊಸ ಶೋ ಆರಂಭ ಮಾಡುತ್ತಿರುವ ಸೃಜನ್

ಹೊಸ ಶೋ ಆರಂಭ ಮಾಡುತ್ತಿರುವ ಸೃಜನ್

'ಚೋಟಾ ಚಾಂಪಿಯನ್', 'ಮಜಾ ಟಾಕೀಸ್' ಸೇರಿದಂತೆ ಕಿರುತೆರೆಗೆ ಹಲವಾರು ಶೋಗಳನ್ನು ಕೊಟ್ಟಿರುವ ಸೃಜನ್ ಲೋಕೇಶ್ ಇದೀಗ ಉದಯ ಟಿವಿಗಾಗಿ 'ಸದಾ ನಿಮ್ಮೊಂದಿಗೆ' ಎನ್ನುವ ಸಾಮಾಜಿಕ ಕಳಕಳಿ ಹೊಂದಿರುವ ಕಾರ್ಯಕ್ರಮವನ್ನು ಆರಂಭಿಸುತ್ತಿದ್ದಾರೆ.

More from Filmibeat

English summary
Talking Star Srujan Lokesh celebrates his birthday with Challenging Star Darshan. Have a look at the pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X