For Quick Alerts
  ALLOW NOTIFICATIONS  
  For Daily Alerts

  ಫೋಟೋ ಗ್ಯಾಲರಿ: ರಿಯಲ್ ಉಪ್ಪಿ 'ಕಲ್ಪನಾ 2' ಶೂಟಿಂಗ್ ಸ್ಟಿಲ್ಸ್

  By Suneetha
  |

  ರಿಯಲ್ ಸ್ಟಾರ್ ಉಪೇಂದ್ರ ಅವರು ತಮಿಳು ಚಿತ್ರ 'ಕಾಂಚನಾ 2' ರೀಮೆಕ್ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ ಅಲ್ವಾ?. ಕನ್ನಡದಲ್ಲಿ 'ಕಲ್ಪನಾ 2' ಎಂಬ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಶೂಟಿಂಗ್ ವಿವಿಧೆಡೆ ಭರದಿಂದ ಸಾಗುತ್ತಿದೆ.

  ಹಾರರ್-ಥ್ರಿಲ್ಲರ್ 'ಕಲ್ಪನಾ 2' ಚಿತ್ರದಲ್ಲಿ ರಿಯಲ್ ಸ್ಟಾರ್ ಉಪ್ಪಿ ಅವರಿಗೆ ನಟಿ ಪ್ರಿಯಾಮಣಿ ಮತ್ತು 'ರಂಗಿತರಂಗ' ಬೆಡಗಿ ಅವಂತಿಕಾ ಶೆಟ್ಟಿ ಅವರು ಸಾಥ್ ನೀಡುತ್ತಿದ್ದಾರೆ.[ಉಪ್ಪಿ ಜೊತೆ 'ರಂಗಿ' ಬೆಡಗಿ ಅವಂತಿಕಾ ಶೆಟ್ಟಿ ಡ್ಯುಯೆಟ್ ಹಾಡ್ತಾರಾ?]

  ಚಿತ್ರದಲ್ಲಿ ಪ್ರಿಯಾಮಣಿ ಅವರು ಪಕ್ಕಾ ಸಂಪ್ರದಾಯಸ್ಥೆಯಾಗಿ ಲಂಗ-ದಾವಣಿ ಹಾಕಿ ಕಾಣಿಸಿಕೊಂಡರೆ, ಅವಂತಿಕಾ ಶೆಟ್ಟಿ ಅವರು ಪತ್ರಕರ್ತೆಯಾಗಿ ಕ್ಯಾಮರಾಮೆನ್ ಉಪ್ಪಿ ಅವರ ಜೊತೆ ರೋಮ್ಯಾನ್ಸ್ ಮಾಡಿದ್ದಾರೆ.

  ಈ ಚಿತ್ರದಲ್ಲಿ ಉಪ್ಪಿ ಅವರಿಗೆ ಎರಡು ಜನ್ಮವಿದ್ದು, ಕಳೆದ ಜನ್ಮದಲ್ಲಿ ಇವರಿಗೆ ಜೋಡಿಯಾಗಿ ಪ್ರಿಯಾಮಣಿ ಕಾಣಿಸಿಕೊಂಡರೆ, ಮರು ಜನ್ಮದಲ್ಲಿ ಇವರಿಗೆ ನಾಯಕಿಯಾಗಿ ಅವಂತಿಕಾ ಶೆಟ್ಟಿ ಅವರು ಜೋಡಿಯಾಗಿದ್ದಾರೆ.['ಕಲ್ಪನಾ 2' ಸಿನಿಮಾ ಉಪ್ಪಿಗೆ, ಬಿಗ್ ಚಾಲೆಂಜ್ ಅಂತೆ..!]

  ನಿರ್ದೇಶಕ ಆರ್.ಅನಂತ ರಾಜು ಆಕ್ಷನ್-ಕಟ್ ಹೇಳಿರುವ 'ಕಲ್ಪನಾ 2' ಚಿತ್ರತಂಡ ಸದ್ಯಕ್ಕೆ ಮಂಗಳೂರು ಬೀಚ್ ನಲ್ಲಿ ಶೂಟಿಂಗ್ ಗಾಗಿ ಬೀಡು ಬಿಟ್ಟಿದೆ. ಈಗಾಗಲೇ ಚಿತ್ರಕ್ಕೆ ಹಿನ್ನಲೆ ಸಂಗೀತ ಕೊಡಿಸಿರುವ ನಿರ್ದೇಶಕರು ಅದಷ್ಟು ಬೇಗ ಚಿತ್ರೀಕರಣ ಮುಗಿಸುವ ತವಕದಲ್ಲಿದ್ದಾರೆ.

  ನಿರ್ಮಾಪಕ ಕೆ.ಎಂ ರಾಜೇಂದ್ರ ಬಂಡವಾಳ ಹೂಡಿರುವ 'ಕಲ್ಪನಾ 2' ಚಿತ್ರದ ಶೂಟಿಂಗ್ ಸ್ಟಿಲ್ಸ್ ಫಿಲ್ಮಿಬೀಟ್ ಗೆ ಲಭ್ಯವಾಗಿದೆ, ನೋಡಲು ಸ್ಲೈಡ್ಸ್ ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ...

  ಫೋಟೋ ಗ್ಯಾಲರಿ: ರಿಯಲ್ ಉಪ್ಪಿ 'ಕಲ್ಪನಾ 2' ಶೂಟಿಂಗ್ ಸ್ಟಿಲ್ಸ್

  English summary
  Kannada Actor Upendra, Actress Priyamani and Actress Avanthika Shetty has started to shoot for 'Kalpana 2'. The Actor's pics from the sets of 'Kalpana 2' is here. Check out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X