ಫೋಟೋ ನೋಡಿ: ಯುವ ರಾಜ್ ಕುಮಾರ್ ನಿಶ್ಚಿತಾರ್ಥದಲ್ಲಿ ವಿದ್ವತ್ ಮಿಂಚಿಂಗ್.!
Recommended Video

ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ವಿದ್ವತ್ ಹಾಗೂ ಯುವ ರಾಜ್ ಕುಮಾರ್ (ಗುರು ರಾಜ್ ಕುಮಾರ್) ಆತ್ಮೀಯ ಸ್ನೇಹಿತರು. ಚಿಕ್ಕವಯಸ್ಸಿನಿಂದ ಒಟ್ಟಿಗೆ ಬೆಳೆದವರು.
ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನ ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ಮೊಹಮ್ಮದ್ ನಲಪಾಡ್ ಹಾಗೂ ಸ್ನೇಹಿತರು ವಿದ್ವತ್ ಹಲ್ಲೆ ನಡೆಸಿದ್ದರು. ಬಳಿಕ ಹತ್ತಿರದಲ್ಲೇ ಇದ್ದ ಮಲ್ಯ ಆಸ್ಪತ್ರೆಗೆ ವಿದ್ವತ್ ದಾಖಲಾದರು. ಹಲ್ಲೆಗೊಳಗಾಗಿದ್ದ ವಿದ್ವತ್ ರನ್ನ ನೋಡಲು ಅಂದು ಯುವ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.
ಆಗ, ಮಲ್ಯ ಆಸ್ಪತ್ರೆಯಲ್ಲಿಯೂ ನಲಪಾಡ್ ಅಂಡ್ ಗ್ಯಾಂಗ್ ದಾಂಧಲೆ ನಡೆಸುತ್ತಿದ್ದರು. ಯುವ ರಾಜ್ ಕುಮಾರ್ ಮೇಲೂ ಹಲ್ಲೆ ನಡೆಸಲು ಮುಂದಾದರು. ನಂತರ ಯುವ ರಾಜ್ ಕುಮಾರ್, ಡಾ.ರಾಜ್ ಮೊಮ್ಮಗ ಅಂತ ಗೊತ್ತಾದ್ಮೇಲೆ ಅಲ್ಲಿದ್ದವರೆಲ್ಲಾ ಜಾಗ ಖಾಲಿ ಮಾಡಿದರು.
ಅಂದು ವಿದ್ವತ್ ಸಹಾಯಕ್ಕೆ ಮುಂದಾಗಿದ್ದ ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಸಮಾರಂಭ ಇಂದು ಮೈಸೂರಿನಲ್ಲಿ ನಡೆಯುತ್ತಿದೆ. ಬಾಲ್ಯ ಸ್ನೇಹಿತನ ಎಂಗೇಜ್ ಮೆಂಟ್ ಫಂಕ್ಷನ್ ಗೆ ವಿದ್ವತ್ ಕೂಡ ಆಗಮಿಸಿದ್ದಾರೆ. ಮುಂದೆ ಓದಿರಿ....

ಫಿಟ್ ಅಂಡ್ ಫೈನ್ ಆಗಿರುವ ವಿದ್ವತ್
ಹಲ್ಲೆಗೊಳಗಾಗಿದ್ದ ವಿದ್ವತ್ ಇದೀಗ ಫುಲ್ ಫಿಟ್ ಅಂಡ್ ಫೈನ್ ಆಗಿದ್ದಾರೆ. ಮೊದಲಿನಂತೆ ಲವಲವಿಕೆಯಿಂದ ಇರುವ ವಿದ್ವತ್ ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಸಮಾರಂಭದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಅಂತ ನೀವೇ ನೋಡಿ...

ಬಾಲ್ಯ ಸ್ನೇಹಿತರು
ವಿದ್ವತ್ ಹಾಗೂ ಯುವ ರಾಜ್ ಕುಮಾರ್ ಮೂರನೇ ತರಗತಿಯಿಂದ ಕ್ಲೋಸ್ ಫ್ರೆಂಡ್ಸ್. ವಿದ್ವತ್ ತಂದೆ ಲೋಕನಾಥ್, ಡಾ.ರಾಜ್ ಕುಮಾರ್ ಕುಟುಂಬಕ್ಕೆ ಆಪ್ತರು. ಹೀಗಾಗಿ, ವಿದ್ವತ್ ಕಂಡ್ರೆ ಅಣ್ಣಾವ್ರ ಫ್ಯಾಮಿಲಿಗೂ ಅಕ್ಕರೆ.

ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಎಲ್ಲಿ ನಡೆಯುತ್ತಿದೆ.?
ಮೈಸೂರಿನ ಪ್ರತಿಷ್ಟಿತ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಯುವ ರಾಜ್ ಕುಮಾರ್ - ಶ್ರೀದೇವಿ ಭೈರಪ್ಪ ನಿಶ್ಚಿತಾರ್ಥ ಸಮಾರಂಭ ನಡೆಯುತ್ತಿದೆ.

ಯಾರೀ ಶ್ರೀದೇವಿ ಭೈರಪ್ಪ.?
ಏಳು ವರ್ಷಗಳಿಂದ ಯುವ ರಾಜ್ ಕುಮಾರ್ ಗೆ ಗೆಳತಿ ಆಗಿರುವಾಕೆ ಶ್ರೀದೇವಿ ಭೈರಪ್ಪ. ಮೈಸೂರು ಮೂಲದ ಶ್ರೀದೇವಿ ಭೈರಪ್ಪ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಉಸ್ತುವಾರಿ ವಹಿಸಿಕೊಂಡಿದ್ದಾರೆ. ಯುವ ರಾಜ್ ಕುಮಾರ್ ಸ್ನೇಹಿತೆ ಆಗಿ ದೊಡ್ಮನೆಯವರ ಪ್ರೀತಿ ಗಳಿಸಿರುವ ಶ್ರೀದೇವಿ ಇಂದು ಅಧಿಕೃತವಾಗಿ ದೊಡ್ಮನೆ ಭಾವಿ ಸೊಸೆ ಆಗುತ್ತಿದ್ದಾರೆ.


Click it and Unblock the Notifications











