For Quick Alerts
  ALLOW NOTIFICATIONS  
  For Daily Alerts

  ಫೋಟೋ ನೋಡಿ: ಯುವ ರಾಜ್ ಕುಮಾರ್ ನಿಶ್ಚಿತಾರ್ಥದಲ್ಲಿ ವಿದ್ವತ್ ಮಿಂಚಿಂಗ್.!

  By Harshitha
  |
  ಯುವ ರಾಜ್‌ಕುಮಾರ್ ನಿಶ್ಚಿತಾರ್ಥದಲ್ಲಿ ವಿದ್ವತ್...!! | Filmibeat Kannada

  ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ವಿದ್ವತ್ ಹಾಗೂ ಯುವ ರಾಜ್ ಕುಮಾರ್ (ಗುರು ರಾಜ್ ಕುಮಾರ್) ಆತ್ಮೀಯ ಸ್ನೇಹಿತರು. ಚಿಕ್ಕವಯಸ್ಸಿನಿಂದ ಒಟ್ಟಿಗೆ ಬೆಳೆದವರು.

  ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನ ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ಮೊಹಮ್ಮದ್ ನಲಪಾಡ್ ಹಾಗೂ ಸ್ನೇಹಿತರು ವಿದ್ವತ್ ಹಲ್ಲೆ ನಡೆಸಿದ್ದರು. ಬಳಿಕ ಹತ್ತಿರದಲ್ಲೇ ಇದ್ದ ಮಲ್ಯ ಆಸ್ಪತ್ರೆಗೆ ವಿದ್ವತ್ ದಾಖಲಾದರು. ಹಲ್ಲೆಗೊಳಗಾಗಿದ್ದ ವಿದ್ವತ್ ರನ್ನ ನೋಡಲು ಅಂದು ಯುವ ರಾಜ್ ಕುಮಾರ್ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.

  ಆಗ, ಮಲ್ಯ ಆಸ್ಪತ್ರೆಯಲ್ಲಿಯೂ ನಲಪಾಡ್ ಅಂಡ್ ಗ್ಯಾಂಗ್ ದಾಂಧಲೆ ನಡೆಸುತ್ತಿದ್ದರು. ಯುವ ರಾಜ್ ಕುಮಾರ್ ಮೇಲೂ ಹಲ್ಲೆ ನಡೆಸಲು ಮುಂದಾದರು. ನಂತರ ಯುವ ರಾಜ್ ಕುಮಾರ್, ಡಾ.ರಾಜ್ ಮೊಮ್ಮಗ ಅಂತ ಗೊತ್ತಾದ್ಮೇಲೆ ಅಲ್ಲಿದ್ದವರೆಲ್ಲಾ ಜಾಗ ಖಾಲಿ ಮಾಡಿದರು.

  ಅಂದು ವಿದ್ವತ್ ಸಹಾಯಕ್ಕೆ ಮುಂದಾಗಿದ್ದ ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಸಮಾರಂಭ ಇಂದು ಮೈಸೂರಿನಲ್ಲಿ ನಡೆಯುತ್ತಿದೆ. ಬಾಲ್ಯ ಸ್ನೇಹಿತನ ಎಂಗೇಜ್ ಮೆಂಟ್ ಫಂಕ್ಷನ್ ಗೆ ವಿದ್ವತ್ ಕೂಡ ಆಗಮಿಸಿದ್ದಾರೆ. ಮುಂದೆ ಓದಿರಿ....

  ಫಿಟ್ ಅಂಡ್ ಫೈನ್ ಆಗಿರುವ ವಿದ್ವತ್

  ಫಿಟ್ ಅಂಡ್ ಫೈನ್ ಆಗಿರುವ ವಿದ್ವತ್

  ಹಲ್ಲೆಗೊಳಗಾಗಿದ್ದ ವಿದ್ವತ್ ಇದೀಗ ಫುಲ್ ಫಿಟ್ ಅಂಡ್ ಫೈನ್ ಆಗಿದ್ದಾರೆ. ಮೊದಲಿನಂತೆ ಲವಲವಿಕೆಯಿಂದ ಇರುವ ವಿದ್ವತ್ ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಸಮಾರಂಭದಲ್ಲಿ ಹೇಗೆ ಕಾಣಿಸಿಕೊಂಡಿದ್ದಾರೆ ಅಂತ ನೀವೇ ನೋಡಿ...

  ರಾಜ್ ಕುಮಾರ್ ಮೊಮ್ಮಗನ ಮೇಲೆ ಹ್ಯಾರಿಸ್ ಮಗನ ದಬ್ಬಾಳಿಕೆರಾಜ್ ಕುಮಾರ್ ಮೊಮ್ಮಗನ ಮೇಲೆ ಹ್ಯಾರಿಸ್ ಮಗನ ದಬ್ಬಾಳಿಕೆ

  ಬಾಲ್ಯ ಸ್ನೇಹಿತರು

  ಬಾಲ್ಯ ಸ್ನೇಹಿತರು

  ವಿದ್ವತ್ ಹಾಗೂ ಯುವ ರಾಜ್ ಕುಮಾರ್ ಮೂರನೇ ತರಗತಿಯಿಂದ ಕ್ಲೋಸ್ ಫ್ರೆಂಡ್ಸ್. ವಿದ್ವತ್ ತಂದೆ ಲೋಕನಾಥ್, ಡಾ.ರಾಜ್ ಕುಮಾರ್ ಕುಟುಂಬಕ್ಕೆ ಆಪ್ತರು. ಹೀಗಾಗಿ, ವಿದ್ವತ್ ಕಂಡ್ರೆ ಅಣ್ಣಾವ್ರ ಫ್ಯಾಮಿಲಿಗೂ ಅಕ್ಕರೆ.

  ನಿಶ್ಚಿತಾರ್ಥದ ಸಂಭ್ರಮದಲ್ಲಿ ಅಣ್ಣಾವ್ರ ಮೊಮ್ಮಗ ಯುವ ರಾಜ್ ಕುಮಾರ್ನಿಶ್ಚಿತಾರ್ಥದ ಸಂಭ್ರಮದಲ್ಲಿ ಅಣ್ಣಾವ್ರ ಮೊಮ್ಮಗ ಯುವ ರಾಜ್ ಕುಮಾರ್

  ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಎಲ್ಲಿ ನಡೆಯುತ್ತಿದೆ.?

  ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಎಲ್ಲಿ ನಡೆಯುತ್ತಿದೆ.?

  ಮೈಸೂರಿನ ಪ್ರತಿಷ್ಟಿತ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಯುವ ರಾಜ್ ಕುಮಾರ್ - ಶ್ರೀದೇವಿ ಭೈರಪ್ಪ ನಿಶ್ಚಿತಾರ್ಥ ಸಮಾರಂಭ ನಡೆಯುತ್ತಿದೆ.

  ಸಾಂಸ್ಕೃತಿಕ ನಗರಿಯಲ್ಲಿ ಅಣ್ಣಾವ್ರ ಮೊಮ್ಮಗನ ನಿಶ್ಚಿತಾರ್ಥಸಾಂಸ್ಕೃತಿಕ ನಗರಿಯಲ್ಲಿ ಅಣ್ಣಾವ್ರ ಮೊಮ್ಮಗನ ನಿಶ್ಚಿತಾರ್ಥ

  ಯಾರೀ ಶ್ರೀದೇವಿ ಭೈರಪ್ಪ.?

  ಯಾರೀ ಶ್ರೀದೇವಿ ಭೈರಪ್ಪ.?

  ಏಳು ವರ್ಷಗಳಿಂದ ಯುವ ರಾಜ್ ಕುಮಾರ್ ಗೆ ಗೆಳತಿ ಆಗಿರುವಾಕೆ ಶ್ರೀದೇವಿ ಭೈರಪ್ಪ. ಮೈಸೂರು ಮೂಲದ ಶ್ರೀದೇವಿ ಭೈರಪ್ಪ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಉಸ್ತುವಾರಿ ವಹಿಸಿಕೊಂಡಿದ್ದಾರೆ. ಯುವ ರಾಜ್ ಕುಮಾರ್ ಸ್ನೇಹಿತೆ ಆಗಿ ದೊಡ್ಮನೆಯವರ ಪ್ರೀತಿ ಗಳಿಸಿರುವ ಶ್ರೀದೇವಿ ಇಂದು ಅಧಿಕೃತವಾಗಿ ದೊಡ್ಮನೆ ಭಾವಿ ಸೊಸೆ ಆಗುತ್ತಿದ್ದಾರೆ.

  English summary
  Kannada matinee Idol Late Actor Dr.Rajkumar grandson Yuva Rajkumar (Raghavendra Rajkumar son) is all set to get engaged today with Sridevi Byrappa at Mysore. Take a look at the picture where Vidvat is seen along with Yuva Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X