Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಯಶ್-ರಾಧಿಕಾ ಫ್ಯಾನ್ಸ್ ಗೆ ಔತಣ: ಹೌಸ್ ಫುಲ್ ಆದ ಅರಮನೆ ಮೈದಾನ
ಅರಮನೆ ರಸ್ತೆ, ಬಳ್ಳಾರಿ ರಸ್ತೆ, ಸ್ಯಾಂಕಿ ರಸ್ತೆಯಲ್ಲಿ ನಿನ್ನೆ (ಡಿಸೆಂಬರ್ 11) ಮಧ್ಯಾಹ್ನ ಫುಲ್ ಟ್ರಾಫಿಕ್ ಜಾಮ್. ಹೆಬ್ಬಾಳದಿಂದ ಬಿಡಿಎ ಜಂಕ್ಷನ್ ವರೆಗೂ ಗಂಟೆಗಳ ಕಾಲ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಇದಕ್ಕೆಲ್ಲ ಕಾರಣವಾಗಿದ್ದು, ಅರಮನೆ ಮೈದಾನಕ್ಕೆ ಹರಿದು ಬರುತ್ತಿದ್ದ ಜನ ಸಾಗರ.!
ಹೌದು, ಅರಮನೆ ಮೈದಾನದ ತ್ರಿಪುರ ವಾಸಿನಿ ನಿನ್ನೆ ಅಕ್ಷರಶಃ ಹೌಸ್ ಫುಲ್ ಆಗಿತ್ತು. ಪ್ರೀತಿಯ ಅಭಿಮಾನಿಗಳಿಗಾಗಿ 'ಮಿಸ್ಟರ್ ಅಂಡ್ ಮಿಸಸ್ ಯಶ್' ಆಯೋಜಿಸಿದ್ದ ವಿಶೇಷ ಔತಣಕೂಟಕ್ಕೆ ಸಾಗರೋಪಾದಿಯಲ್ಲಿ ಆಗಮಿಸಿದ ಅಭಿಮಾನಿಗಳು ನವ ದಂಪತಿ ಯಶ್-ರಾಧಿಕಾ ಪಂಡಿತ್ ಗೆ ಶುಭ ಹಾರೈಸಿದರು.

ಅರಮನೆ ಮೈದಾನದಲ್ಲಿ ಜನ ಜಾತ್ರೆ
ನವ ಜೋಡಿ ಯಶ್-ರಾಧಿಕಾ ಪಂಡಿತ್ ಗೆ ಶುಭ ಹಾರೈಸಲು ರಾಜ್ಯ ಹಲವೆಡೆಯಿಂದ ಅಭಿಮಾನಿಗಳು ಆಗಮಿಸಿದ್ದರು. ಹೀಗಾಗಿ, ತ್ರಿಪುರ ವಾಸಿನಿ 'ಜನ ಜಾತ್ರೆ'ಗೆ ಸಾಕ್ಷಿ ಆಗಿತ್ತು. [ಚಿತ್ರಗಳು: 'ಯಶೋರಾಧೆ' ಅದ್ಧೂರಿ ರಿಸೆಪ್ಷನ್ ನಲ್ಲಿ ಗಣ್ಯಾತಿಗಣ್ಯರ ದಂಡು]

ಇಡೀ ದಿನ ಅಭಿಮಾನಿಗಳಿಗೆ ಮೀಸಲು
ಡಿಸೆಂಬರ್ 9 ರಂದು ಧಾರೆ-ಮುಹೂರ್ತ, 10 ರಂದು ಗಣ್ಯರಿಗೆ ಆರತಕ್ಷತೆ ಏರ್ಪಡಿಸಿದ್ದ ಮಿಸ್ಟರ್ ಅಂಡ್ ಮಿಸಸ್ ಯಶ್, 11 ರಂದು ಇಡೀ ದಿನವನ್ನ ಅಭಿಮಾನಿಗಳಿಗಾಗಿ ಮೀಸಲಿಟ್ಟಿದ್ದರು. [ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಯಶ್-ರಾಧಿಕಾ ಧಾರೆ ಮುಹೂರ್ತ]

ವಿಶೇಷ ಔತಣಕೂಟ
ತಮ್ಮ ಅಭಿಮಾನಿಗಳು ಮತ್ತು ಕನ್ನಡ ಚಿತ್ರರಂಗದ ಒಕ್ಕೂಟದ ಕಾರ್ಮಿಕರಿಗೆ ಮಾತ್ರ ಡಿಸೆಂಬರ್ 11 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ವಿಶೇಷ ಔತಣಕೂಟ ವ್ಯವಸ್ಥೆ ಮಾಡಲಾಗಿತ್ತು. [ಯಶ್-ರಾಧಿಕಾ ಪಂಡಿತ್ ಮದುವೆಯ ಆಕರ್ಷಕ ಫೋಟೋ ಆಲ್ಬಂ]

ಅಭಿಮಾನಿಗಳ ಮುಂದೆ ಮಿಸ್ಟರ್ ಅಂಡ್ ಮಿಸಸ್ ಯಶ್
ಅಭಿಮಾನಿಗಳ ಮುಂದೆ ಯಶ್-ರಾಧಿಕಾ ಪಂಡಿತ್ ಕೈ ಬೀಸಿದ ಕ್ಷಣ ['ಯಶೋರಾಧೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ]

ಅಭಿಮಾನಿಗಳ ಕೂಗು
'ತ್ರಿಪುರ ವಾಸಿನಿ'ಯ ಮೂಲೆ ಮೂಲೆಯಲ್ಲೂ ನಿನ್ನೆ (ಡಿಸೆಂಬರ್ 11) 'ಯಶ್...ರಾಧಿಕಾ...ಹ್ಯಾಪಿ ಮ್ಯಾರೀಡ್ ಲೈಫ್' ಎಂಬ ಅಭಿಮಾನಿಗಳ ಕೂಗು ಕೇಳಿ ಬರುತ್ತಿತ್ತು. [ಹ್ಯಾಪಿ ಮ್ಯಾರೀಡ್ ಲೈಫ್ ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್]

ಲೆಕ್ಕವಿಲ್ಲದಷ್ಟು ಜನ
ಯಶ್-ರಾಧಿಕಾ ಏರ್ಪಿಡಿಸಿದ್ದ ಔತಣಕೂಟಕ್ಕೆ ಸಾವಿರಾರು ಅಭಿಮಾನಿಗಳು ಸಾಕ್ಷಿಯಾದರು.

ಲಘು ಲಾಠಿ ಚಾರ್ಚ್ ಕೂಡ ಆಯ್ತು
ಯಶ್ ರವರ ಸಾವಿರಾರು ಅಭಿಮಾನಿಗಳನ್ನ ನಿಯಂತ್ರಿಸುವಲ್ಲಿ ಪೊಲೀಸರು ಹರ ಸಾಹಸ ಪಟ್ಟರು. ಲಘು ಲಾಠಿ ಪ್ರಹಾರ ಕೂಡ ಮಾಡಿದರು.

ಅಭಿಮಾನಿಗಳ ಮುಂದೆ ಯಶ್ ಕುಟುಂಬ
ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದ ಜನ ಸಾಗರವನ್ನ ಯಶ್ ಕುಟುಂಬ ಕಣ್ತುಂಬಿಕೊಂಡರು.

ಸೆಲ್ಫಿ ಕ್ರೇಜ್
ಇಷ್ಟು ದಿನ ತೆರೆಮೇಲೆ ಮಾತ್ರ ಕಂಡಿದ್ದ ಯಶ್-ರಾಧಿಕಾ ರವರನ್ನ ಪ್ರತ್ಯಕ್ಷವಾಗಿ ಕಂಡ ಖುಷಿಯಲ್ಲಿ ಹಲವು ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಅಭಿಮಾನಿಗಳ ಉಡುಗೊರೆ
ಅಭಿಮಾನಿಯೊಬ್ಬರು ನೀಡಿದ್ದ ಉಡುಗೊರೆಯನ್ನು ಕಂಡು ಯಶ್-ರಾಧಿಕಾ ಪಂಡಿತ್ ಸಂತಸದಲ್ಲಿ ಇರುವ ಕ್ಷಣ.

ನವ ಜೋಡಿ ಮೊಗದಲ್ಲಿ ಮಂದಹಾಸ
ಅಭಿಮಾನಿಗಳು ಪ್ರೀತಿಯಿಂದ ತಂದಿದ್ದ ಗಿಫ್ಟ್ ಗಳನ್ನ ನೋಡಿ 'ಮಿಸ್ಟರ್ ಅಂಡ್ ಮಿಸಸ್ ಯಶ್' ಮೊಗದಲ್ಲಿ ಮಂದಹಾಸ ಮೂಡಿತ್ತು.

ಮಂಡ್ಯ ಸ್ಟೈಲ್ ನಲ್ಲಿ ನವ ಜೋಡಿ
ಅಪ್ಪಟ ಮಂಡ್ಯ ಸ್ಟೈಲ್ ನಲ್ಲಿ ನವ ಜೋಡಿ ರಾಧಿಕಾ ಪಂಡಿತ್-ಯಶ್ ಕಂಗೊಳಿಸಿದ್ದು ಹೀಗೆ...

ಅಭಿಮಾನಿಗಳ ಮುಂದೆ ಪೋಸ್
ಸಾವಿರಾರು ಅಭಿಮಾನಿಗಳ ಮುಂದೆ 'ಯಶೋರಾಧೆ' ಕ್ಯಾಮರಾ ಕಣ್ಣುಗಳಿಗೆ ಪೋಸ್ ನೀಡಿದ್ದು ಹೀಗೆ....

ಟೆಂಪೋ-ಜೀಪುಗಳಲ್ಲಿ ಆಗಮನ
ಯಶ್-ರಾಧಿಕಾ ಪಂಡಿತ್ ರವರಿಗೆ ಹರಸಲು ರಾಜ್ಯದ ಹಲವು ಭಾಗಗಳಿಂದ ಟೆಂಪೋ-ಜೀಪುಗಳಲ್ಲಿ ಅಭಿಮಾನಿಗಳು ಆಗಮಿಸಿದ್ರು.

ಒಮ್ಮೆಲೆ 2000 ಜನಕ್ಕೆ ಊಟ
ತ್ರಿಪುರ ವಾಸಿನಿಯಲ್ಲಿ ಒಮ್ಮೆಲೆ 2000 ಸಾವಿರ ಜನಕ್ಕೆ ಬಾಳೆ ಎಲೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಭಿಮಾನಿಗಳಿಗಾಗಿ ಒಟ್ಟು 20 ಬಫೆ ಕೌಂಟರ್ ತೆರೆಯಲಾಗಿತ್ತು.

30 ಸಾವಿರಕ್ಕೂ ಅಧಿಕ ಜನ
ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ದೇಸಿ ಶೈಲಿಯ ಊಟ ಸವಿದರು.

ಭೋಜನದ ಮೆನ್ಯೂ ಏನು.?
ಅಭಿಮಾನಿಗಳಿಗಾಗಿ ಪೂರಿ-ಸಾಗು, ಪಲಾವ್, ಮುದ್ದೆ, ಅನ್ನ ಸಾಂಬರ್, ಪಾಯಸ, ಬೂಂದಿ ಮತ್ತು ಜಿಲೇಬಿಯನ್ನ ಮಿಸ್ಟರ್ ಅಂಡ್ ಮಿಸಸ್ ಯಶ್ ಮಾಡಿಸಿದ್ದರು.

ಇಡೀ ದಿನ ಜನಸ್ತೋಮ
ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೂ ತ್ರಿಪುರ ವಾಸಿನಿಯಲ್ಲಿ ಜನಸ್ತೋಮ ಇತ್ತು. ಹೀಗಾಗಿ ಅಕ್ಕ-ಪಕ್ಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

ರಾಕಿಂಗ್ ಜೋಡಿಗೆ ನೀವಿನ್ನೂ ವಿಶ್ ಮಾಡಿಲ್ವಾ?
ರಾಕಿಂಗ್ ಜೋಡಿ ಯಶ್-ರಾಧಿಕಾ ಪಂಡಿತ್ ಗೆ ನೀವಿನ್ನೂ ವಿಶ್ ಮಾಡಿಲ್ಲ ಅಂದ್ರೆ, ಈಗಲೇ ಮಾಡಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.