ಫೋಟೋ ಆಲ್ಬಂ: ಕ್ಯಾಂಡಿ 'ವಂಡರ್ ಲ್ಯಾಂಡ್'ನಲ್ಲಿ ಆಯ್ರಾ ಬರ್ತಡೇ ಪಾರ್ಟಿ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬದಲ್ಲಿ ನಿನ್ನೆ ಸಂಭ್ರಮವೋ, ಸಂಭ್ರಮ. ಅದಕ್ಕೆಲ್ಲಾ ಕಾರಣ ಆಯ್ರಾ ಮೊದಲ ಹುಟ್ಟುಹಬ್ಬ.

ಹೌದು, ರಾಕಿಂಗ್ ದಂಪತಿ ಬಾಳಲ್ಲಿ ಪುಟ್ಟ ದೇವತೆ ಆಯ್ರಾ ಎಂಟ್ರಿಕೊಟ್ಟು ನಿನ್ನೆಗೆ ಸರಿಯಾಗಿ ಒಂದು ವರ್ಷ. ಈ ಸಡಗರವನ್ನು ಸೆಲೆಬ್ರೇಟ್ ಮಾಡಲು ನಿನ್ನೆ ಸಂಜೆ ದೊಡ್ಡ ಪಾರ್ಟಿ ಅರೇಂಜ್ ಮಾಡಲಾಗಿತ್ತು.

ಬೆಂಗಳೂರಿನ ಫನ್ ವರ್ಲ್ಡ್ ನಲ್ಲಿ ನಿನ್ನೆ ಸಂಜೆ ಆಯ್ರಾ ಬರ್ತಡೇ ಪಾರ್ಟಿ ನೆರವೇರಿತು. ಆಯ್ರಾ ಜನ್ಮದಿನಕ್ಕಾಗಿ ಫನ್ ವರ್ಲ್ಡ್ ನಲ್ಲಿ ನಿನ್ನೆ ವಂಡರ್ ಲ್ಯಾಂಡ್ ಕ್ರಿಯೇಟ್ ಮಾಡಲಾಗಿತ್ತು. 'ಕ್ಯಾಂಡಿ ಲ್ಯಾಂಡ್' ಥೀಮ್ ನಲ್ಲಿ ನಡೆದ ಆಯ್ರಾ ಜನುಮದಿನದ ಸೆಲೆಬ್ರೇಷನ್ ಫೋಟೋಗಳು ಇಲ್ಲಿವೆ, ನೋಡಿ..

ಸ್ಪೆಷಲ್ ಕೇಕ್

ಸ್ಪೆಷಲ್ ಕೇಕ್

ಹೇಳಿ ಕೇಳಿ ಇದು ಆಯ್ರಾ ಬರ್ತಡೇ.. ಅಂದ್ಮೇಲೆ, ದೊಡ್ಡ ಸೆಲೆಬ್ರೇಷನ್ ಇರಲೇಬೇಕು. ಸೆಲೆಬ್ರೇಷನ್ ನಲ್ಲಿ ಕೇಕ್ ಬೇಕೇ ಬೇಕು.. ಆಯ್ರಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ಆಗಿ ಬೃಹತ್ ಕೇಕ್ ಸಿದ್ಧಪಡಿಸಲಾಗಿತ್ತು. 'ಕರೂಸೆಲ್ ರೈಡ್' (Carousel ride) ಥೀಮ್ ನಲ್ಲಿ ರೆಡಿಯಾಗಿದ್ದ ಎಂಟು ಅಂತಸ್ತುಗಳ ಕೇಕ್ ನ ತನ್ನ ಮೊದಲು ಹುಟ್ಟುಹಬ್ಬದಂದು ಆಯ್ರಾ ಕಟ್ ಮಾಡಿದಳು.

ಕರೂಸೆಲ್ ರೈಡ್ ಎದುರಿಗೆ ಆಯ್ರಾ ಬರ್ತಡೇ

ಕರೂಸೆಲ್ ರೈಡ್ ಎದುರಿಗೆ ಆಯ್ರಾ ಬರ್ತಡೇ

ಬೆಂಗಳೂರಿನ ಫನ್ ವರ್ಲ್ಡ್ ನಲ್ಲಿ ಮೆರ್ರಿ ಗೋ ರೌಂಡ್ ಕರೂಸೆಲ್ ರೈಡ್ (ಕುದುರೆ ಸವಾರಿ) ಇದೆ. ಇದರ ಮುಂದೆಯೇ, ಅದೇ ರೀತಿಯ ಕೇಕ್ ಕಟ್ ಮಾಡಿ ಆಯ್ರಾ ಫಸ್ಟ್ ಬರ್ತಡೇ ಸೆಲೆಬ್ರೇಟ್ ಮಾಡಲಾಯಿತು.

ಕುದುರೆ ಸವಾರಿ ಮಾಡಿದ ಯಶ್

ಕುದುರೆ ಸವಾರಿ ಮಾಡಿದ ಯಶ್

ಮಗಳ ಮೊದಲ ಹುಟ್ಟುಹಬ್ಬದ ಸಡಗರದಲ್ಲಿ ಮೆರ್ರಿ ಗೋ ರೌಂಡ್ ಕರೂಸೆಲ್ ರೈಡ್ ನ ಯಶ್ ಎಂಜಾಯ್ ಮಾಡಿದರು. ಚಿಕ್ಕ ಮಕ್ಕಳಂತೆ ನಟ ಯಶ್ ಕುದುರೆ ಸವಾರಿ ಮಾಡುತ್ತಿದ್ದರೆ, ಅಲ್ಲಿದ್ದವರಿಗೆ ಖುಷಿಯೋ ಖುಷಿ.

ಜನ ಸಾಗರವೇ ಹರಿದು ಬಂದಿತ್ತು.!

ಜನ ಸಾಗರವೇ ಹರಿದು ಬಂದಿತ್ತು.!

ಆಯ್ರಾ ಮೊದಲ ಹುಟ್ಟುಹಬ್ಬ ಸಂಭ್ರಮಕ್ಕೆ ಇಡೀ ರಾಕಿಂಗ್ ಕುಟುಂಬ ಸಾಕ್ಷಿ ಆಗಿತ್ತು. ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬದ ಸದಸ್ಯರು, ಬಂಧು-ಮಿತ್ರರು ಸೇರಿದಂತೆ ಹಲವರು ಆಗಮಿಸಿ ಆಯ್ರಾಗೆ ಶುಭ ಕೋರಿದರು. ಫನ್ ವರ್ಲ್ಡ್ ನಲ್ಲಿ ನಿನ್ನೆ ಆಯ್ರಾ ಹುಟ್ಟುಹಬ್ಬಕ್ಕೆ ಜನ ಸಾಗರವೇ ಹರಿದುಬಂದಿತ್ತು.

ಪ್ರಿನ್ಸೆಸ್ ಆಗಿದ್ದ ಆಯ್ರಾ.!

ಪ್ರಿನ್ಸೆಸ್ ಆಗಿದ್ದ ಆಯ್ರಾ.!

ಫನ್ ವರ್ಲ್ಡ್ ನಲ್ಲಿ ತಲೆಯೆತ್ತಿದ್ದ 'ಕ್ಯಾಂಡಿ ಲ್ಯಾಂಡ್'ಗೆ ಆಯ್ರಾ ಪ್ರಿನ್ಸೆಸ್ ಆಗಿದ್ದಳು. ಶಿಮ್ಮರಿಂಗ್ ಫ್ರಾಕ್ ನಲ್ಲಿ ಆಯ್ರಾ 'ಸಿಂಡ್ರೆಲ್ಲಾ' ತರಹ ಕಾಣ್ತಿದ್ಳು. ಹಾಗ್ನೋಡಿದ್ರೆ, ಆಯ್ರಾ ತಾಯಿ ರಾಧಿಕಾ ಪಂಡಿತ್ 'ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ' ಅಂತ ಹೆಸರುವಾಸಿ. ಆದ್ರೀಗ, ರಾಧಿಕಾ ಪಂಡಿತ್ ಪಾಲಿಗೆ ಮಗಳೇ ಸಿಂಡ್ರೆಲ್ಲಾ.

ವಿಶ್ ಮಾಡಲು ಬಂದಿದ್ದ ಪುನೀತ್

ವಿಶ್ ಮಾಡಲು ಬಂದಿದ್ದ ಪುನೀತ್

ಆಯ್ರಾ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಂದಿದ್ದರು. ತಮ್ಮ ಬಿಜಿ ಶೆಡ್ಯೂಲ್ ನಡುವೆಯೂ ಆಯ್ರಾ ಬರ್ತಡೇ ಪಾರ್ಟಿಗೆ ಪುನೀತ್ ಹಾಜರ್ ಆದರು.

ಶುಭ ಕೋರಿದ ದರ್ಶನ್, ಸುಮಲತಾ

ಶುಭ ಕೋರಿದ ದರ್ಶನ್, ಸುಮಲತಾ

ಆಯ್ರಾ ಬರ್ತಡೇ ಪಾರ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಮಂಡ್ಯ ಸಂಸದೆ ಸುಮಲತಾ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಟ ಅನಿರುದ್ಧ್, ಕೀರ್ತಿ ಅನಿರುದ್ಧ್ ಸೇರಿದಂತೆ ಹಲವರು ಗಣ್ಯರು ಪಾಲ್ಗೊಂಡು ಪುಟಾಣಿ ಕಂದಮ್ಮನನ್ನು ಹರಸಿದರು.

ಅಭಿಷೇಕ್ ಅಂಬರೀಶ್ ಕೂಡ ಹಾಜರ್

ಅಭಿಷೇಕ್ ಅಂಬರೀಶ್ ಕೂಡ ಹಾಜರ್

ಯಶ್ ಗೆ 'ಬ್ರೋ' ಅಂತ ಪ್ರೀತಿಯಿಂದ ಕರೆಯುವ ಅಭಿಷೇಕ್ ಅಂಬರೀಶ್ ಕೂಡ ನಿನ್ನೆ ಫನ್ ವರ್ಲ್ಡ್ ಗೆ ಬಂದು ಆಯ್ರಾಗೆ ಬರ್ತಡೇ ವಿಶಸ್ ತಿಳಿಸಿದರು.

ಗಣ್ಯರ ದಂಡು

ಗಣ್ಯರ ದಂಡು

ಆಯ್ರಾ ಬರ್ತಡೇ ಪಾರ್ಟಿಯಲ್ಲಿ ಅಶೋಕ್ ಖೇಣಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ರಿಯಲ್ ಸ್ಟಾರ್ ಉಪೇಂದ್ರ-ಪ್ರಿಯಾಂಕಾ ಮಕ್ಕಳಾದ ಆಯುಷ್ ಮತ್ತು ಐಶ್ವರ್ಯ ಕೂಡ ಆಯ್ರಾಗೆ ವಿಶ್ ಮಾಡಲು ಫನ್ ವರ್ಲ್ಡ್ ಗೆ ಬಂದಿದ್ದರು.

ಸ್ಪೆಷಲ್ ಫೋಟೋಶೂಟ್

ಸ್ಪೆಷಲ್ ಫೋಟೋಶೂಟ್

ಆಯ್ರಾ ಮೊದಲ ಹುಟ್ಟುಹಬ್ಬಕ್ಕೂ ಮುನ್ನ ಸ್ಪೆಷಲ್ಲಾಗಿ ಫೋಟೋಶೂಟ್ ನಡೆದಿತ್ತು. ಈ ಫೋಟೋಶೂಟ್ ನಲ್ಲಿ ಪಿಂಕ್ ಫ್ರಾಕ್ ಧರಿಸಿದ್ದ ಆಯ್ರಾ ಕ್ಯಾಮರಾ ಮುಂದೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಳು.

More from Filmibeat

English summary
Kannada Actor Yash-Radhika Pandit's daughter Ayra celebrated her first birthday on December 2nd. Have a look at Birthday party photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X