»   » 'ಮಾಸ್ಟರ್ ಪೀಸ್'ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಾಸ್ ಸಾಂಗ್

'ಮಾಸ್ಟರ್ ಪೀಸ್'ನಲ್ಲಿ ರಾಕಿಂಗ್ ಸ್ಟಾರ್ ಯಶ್ ಮಾಸ್ ಸಾಂಗ್

Posted By:
Subscribe to Filmibeat Kannada

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಧೂಳೆಬ್ಬಿಸಿದ ಯಶ್ ಸದ್ಯದಲ್ಲೇ 'ಮಾಸ್ಟರ್ ಪೀಸ್' ಆಗಿ ಬೆಳ್ಳಿತೆರೆ ಮೇಲೆ ಅಬ್ಬರಿಸಲಿದ್ದಾರೆ.

ಸಂಭಾಷಣೆಕಾರ ಮಂಜು ಮಾಂಡವ್ಯ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ 'ಮಾಸ್ಟರ್ ಪೀಸ್' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. 'ಮಾಸ್ಟರ್ ಪೀಸ್' ಚಿತ್ರದಲ್ಲಿ ಯಶ್ ರವರ ಸ್ವತಂತ್ರ ಸೇನಾನಿ ಭಗತ್ ಸಿಂಗ್ ಲುಕ್ ಈಗಾಗಲೇ ಜನಪ್ರಿಯವಾಗಿದೆ.


ಇಡೀ ಸಿನಿಮಾದಲ್ಲಿ ಯಶ್ ಭಗತ್ ಸಿಂಗ್ ಆಗಿ ಮಾತ್ರ ಅಲ್ಲ, ಮಾಸ್ ಹೀರೋ ಆಗೂ ಮಿಂಚಲಿದ್ದಾರೆ. ಮಾಸ್ ಪ್ರಿಯರಿಗೆ ಇಷ್ಟವಾಗುವ ಹಾಗೆ ಸಖತ್ ಸ್ಟೆಪ್ ಹಾಕಿದ್ದಾರೆ. [ಕ್ರಿಸ್ಮಸ್ ಹಬ್ಬಕ್ಕೆ ಯಶ್ 'ಮಾಸ್ಟರ್ ಪೀಸ್' ಗಿಫ್ಟ್]


'ಮಾಸ್ಟರ್ ಪೀಸ್' ಚಿತ್ರದ 'ಮಾಸ್ ಸಾಂಗ್' ಮೇಕಿಂಗ್ ಚಿತ್ರಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....


'ಮಾಸ್ ಲುಕ್'ನಲ್ಲಿ ಯಶ್

'ಮಾಸ್ಟರ್ ಪೀಸ್' ಚಿತ್ರದ ಮಾಸ್ ಸಾಂಗ್ ಗೆ ಯಶ್ ತಾಳಿರುವ ಅವತಾರ ಇದು. ['ಮಾಸ್ಟರ್ ಪೀಸ್' ಯಶ್ ಗೆ ಡೆಡ್ಲಿ ಆದಿತ್ಯ ವಿಲನ್.?]


ನೂರಾರು ಡ್ಯಾನ್ಸರ್ಸ್ ಜೊತೆ ಯಶ್

'ಮಾಸ್ಟರ್ ಪೀಸ್' ಚಿತ್ರದಲ್ಲಿ ಇದು ಸಖತ್ ಸ್ಪೆಷಲ್ ಸಾಂಗ್ ಆಗಿದ್ದು ನೂರಾರು ಡ್ಯಾನ್ಸರ್ ಹಾಡಲ್ಲಿ ಭಾಗಿಯಾಗಿದ್ದಾರೆ.


ಬಸ್ ಡಿಪೋ ನಲ್ಲಿ ಚಿತ್ರೀಕರಣ

'ಮಾಸ್ಟರ್ ಪೀಸ್' ಚಿತ್ರದ ಈ ಹಾಡಿಗಾಗಿ ಬಸ್ ಡಿಪೋನಲ್ಲಿ ಚಿತ್ರೀಕರಣ ಮಾಡಲಾಗಿದೆ.


ಸಂಯೋಜನೆ ಯಾರದ್ದು?

ಟಪ್ಪಾಂಗುಚ್ಚಿ ಸ್ಟೈಲ್ ನಲ್ಲಿ ನೃತ್ಯ ನಿರ್ದೇಶಕ ಮುರುಳಿ ಮಾಸ್ಟರ್ ಈ ಹಾಡನ್ನ ಸಂಯೋಜಿಸಿದ್ದಾರೆ.


'ಮಾಸ್ಟರ್ ಪೀಸ್' ರಿಲೀಸ್ ಯಾವಾಗ?

ಶೂಟಿಂಗ್ ಕೊನೆಯ ಹಂತ ತಲುಪಿರುವ 'ಮಾಸ್ಟರ್ ಪೀಸ್' ಸಿನಿಮಾ ಡಿಸೆಂಬರ್ ಕೊನೆಯ ವಾರ ರಿಲೀಸ್ ಆಗಲಿದೆ.


English summary
Kannada Actor Yash starrer 'Masterpiece' song shooting is in progress. Check out the making stills of 'Masterpiece' Mass song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada