ಸಖತ್ತಾಗಿತ್ತು ಯುವ ರಾಜ್ ಕುಮಾರ್ - ಶ್ರೀ ದೇವಿ ಎಂಗೇಜ್ ಮೆಂಟ್ ಪಾರ್ಟಿ

By Naveen

Recommended Video

ಎಂಗೇಜ್ಮೆಂಟ್ ಪಾರ್ಟಿಯಲ್ಲಿ ಯುವ-ಶ್ರೀದೇವಿ ಮಸ್ತಿ...!! | Filmibeat Kannada

ದೊಡ್ಮನೆಯಲ್ಲಿ ಈಗ ಮತ್ತೊಂದು ಶುಭ ಕಾರ್ಯ ನಡೆದಿದೆ. ಡಾ.ರಾಜ್ ಕುಮಾರ್ ಅವರ ಮೊಮ್ಮಗ ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಕಳೆದ ಗುರುವಾರ ನೆರವೇರಿದೆ. ಜುಲೈ 5 ರಂದು ಶ್ರೀ ದೇವಿ ಭೈರಪ್ಪ ಹಾಗೂ ಯುವರಾಜ್ ಕುಮಾರ್ ಉಂಗುರ ಬದಲಿಸಿಕೊಂಡಿದ್ದಾರೆ.

ನಿಶ್ಚಿತಾರ್ಥದ ಬಳಿಕ ಈಗ ಎಂಗೇಜ್ ಮೆಂಟ್ ಪಾರ್ಟಿ ಸಹ ನೆರವೇರಿದ್ದು, ಈ ಪಾರ್ಟಿ ಕುಟುಂಬದವರಿಗೆ ಮಾತ್ರ ಸೀಮಿತವಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್, ಶ್ರೀ ಮುರಳಿ ದಂಪತಿ, ವಿನಯ್ ರಾಜ್ ಕುಮಾರ್ ಸೇರಿದಂತೆ ಎಲ್ಲರೂ ಸಂತೋಷದಿಂದ ಕಾಲಕಳೆದರು.

ಅಂದಹಾಗೆ, ಯುವರಾಜ್ ಕುಮಾರ್ ಹಾಗೂ ಶ್ರೀ ದೇವಿ ಭೈರಪ್ಪ ಅವರ ಎಂಗೇಜ್ ಮೆಂಟ್ ಪಾರ್ಟಿಯ ಫೋಟೋಗಳು 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿವೆ. ಮುಂದೆ ಓದಿ...

ಎಂಗೇಜ್ ಮೆಂಟ್ ಪಾರ್ಟಿ

ಎಂಗೇಜ್ ಮೆಂಟ್ ಪಾರ್ಟಿ

ಜುಲೈ 5 ರಂದು ಯುವರಾಜ್ ಕುಮಾರ್ ಹಾಗೂ ಶ್ರೀ ದೇವಿ ಭೈರಪ್ಪ ನಿಶ್ಚಿತಾರ್ಥ ನಡೆದಿತ್ತು, ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ಅದರ ಬಳಿಕ ಇದೀಗ ಕುಟುಂಬದವರಿಗಾಗಿ ಮಾತ್ರ ಎಂಗೇಜ್ ಮೆಂಟ್ ಪಾರ್ಟಿಯನ್ನು ಆಯೋಚಿಸಲಾಗಿತ್ತು.

ಶ್ರೀ ಮುರಳಿ ದಂಪತಿ

ಶ್ರೀ ಮುರಳಿ ದಂಪತಿ

ಎಂಗೇಜ್ ಮೆಂಟ್ ಪಾರ್ಟಿಯಲ್ಲಿ ನಟ ಶ್ರೀ ಮುರಳಿ ಹಾಗೂ ಪತ್ನಿ ವಿದ್ಯಾ ಶ್ರೀ ಮುರಳಿ ಸಹ ಭಾಗಿಯಾಗಿದ್ದರು. ತಮ್ಮ ಕುಟುಂಬದಲ್ಲಿ ನಡೆಯುತ್ತಿರುವ ಸಂತೋಷದ ಕ್ಷಣವನ್ನು ಎಲ್ಲರೂ ಸೇರಿ ಸಂಭ್ರಮಿಸಿದರು.

ಸಹೋದರನ ಸಂಭ್ರಮ

ಸಹೋದರನ ಸಂಭ್ರಮ

ತಮ್ಮ ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಅಣ್ಣ ವಿನಯ್ ಮುಖದಲ್ಲಿಯೂ ಸಂತಸ ಮೂಡಿಸಿದೆ. ನೂತನ ಜೀವನಕ್ಕೆ ಕಾಲಿಡುತ್ತಿರುವ ಯುವರಾಜ್ ಕುಮಾರ್ ಹಾಗೂ ಶ್ರೀ ದೇವಿ ಭೈರಪ್ಪ ಜೊತೆ ವಿನಯ್ ರಾಜ್ ಕುಮಾರ್ ಫೋಟೋ ತೆಗೆದುಕೊಂಡಿದ್ದಾರೆ. ಈ ವೇಳೆ 'ರನ್ ಅಂಟೋನಿ' ಚಿತ್ರದ ನಟಿ ರುಕ್ಸಾರ್ ಸಹ ಭಾಗಿಯಾಗಿದ್ದಾರೆ.

ಮಾವ ಅಳಿಯನ ಸೆಲ್ಫಿ

ಮಾವ ಅಳಿಯನ ಸೆಲ್ಫಿ

ಎಂಗೇಜ್ ಮೆಂಟ್ ಪಾರ್ಟಿಯಲ್ಲಿ ನಟ ಪುನೀತ್ ರಾಜ್ ಕುಮಾರ್ ಸಹ ಭಾಗಿಯಾಗಿದ್ದರು. ಈ ವೇಳೆ ನಟ ಶ್ರೀ ಮುರಳಿ ತಮ್ಮ ಪ್ರೀತಿಯ ಅಪ್ಪು ಮಾಮ ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ನಿಶ್ಚಿತಾರ್ಥದ ವಿಡಿಯೋ

ಯುವರಾಜ್ ಕುಮಾರ್ ಹಾಗೂ ಶ್ರೀ ದೇವಿ ಭೈರಪ್ಪ ಅವರ ನಿಶ್ಚಿತಾರ್ಥ ಕಾರ್ಯಕ್ರಮ ವಿಡಿಯೋವನ್ನು ಇದೀಗ ನಿಮ್ಮ 'ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಿಸಬಹುದಾಗಿದೆ.

ಶ್ರೀದೇವಿ ಭೈರಪ್ಪ ಬಗ್ಗೆ

ಶ್ರೀದೇವಿ ಭೈರಪ್ಪ ಬಗ್ಗೆ

ಏಳು ವರ್ಷಗಳಿಂದ ಯುವ ರಾಜ್ ಕುಮಾರ್ ಗೆ ಗೆಳತಿ ಆಗಿರುವಾಕೆ ಶ್ರೀದೇವಿ ಭೈರಪ್ಪ. ಮೈಸೂರು ಮೂಲದ ಶ್ರೀದೇವಿ ಭೈರಪ್ಪ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ' ಉಸ್ತುವಾರಿ ವಹಿಸಿಕೊಂಡಿದ್ದಾರೆ. ಯುವ ರಾಜ್ ಕುಮಾರ್ ಸ್ನೇಹಿತೆ ಆಗಿ ದೊಡ್ಮನೆಯವರ ಪ್ರೀತಿ ಗಳಿಸಿರುವ ಶ್ರೀದೇವಿ ಈಗ ಅಧಿಕೃತವಾಗಿ ದೊಡ್ಮನೆ ಭಾವಿ ಸೊಸೆ ಆಗುತ್ತಿದ್ದಾರೆ.

More from Filmibeat

English summary
In pics: Yuva Rajkumar and Sridevi Byrappa engagement party. Kannada Actor Dr.Rajkumar grandson Yuva Rajkumar get engaged with Sridevi Byrappa at Mysore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X