ಸಾಂಸ್ಕೃತಿಕ ನಗರಿಯಲ್ಲಿ ಅಣ್ಣಾವ್ರ ಮೊಮ್ಮಗನ ನಿಶ್ಚಿತಾರ್ಥ

By Harshitha

Recommended Video

ಎಲ್ಲಿ ನಡೀತಿದೆ ಡಾ.ರಾಜ್ ಮೊಮ್ಮಗ ಯುವ ರಾಜ್‌ಕುಮಾರ್ ನಿಶ್ಚಿತಾರ್ಥ..!? | Oneindia Kannada

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡಾ.ರಾಜ್ ಕುಮಾರ್ ಕುಟುಂಬ ಬೀಡುಬಿಟ್ಟಿದೆ. ಅಣ್ಣಾವ್ರ ಫ್ಯಾಮಿಲಿಯಲ್ಲಿ ಮತ್ತೆ ಮದುವೆ ಸಂಭ್ರಮ ಜೋರಾಗಿದೆ. ನಟ ಹಾಗೂ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವ ರಾಜ್ ಕುಮಾರ್ ನಿಶ್ಚಿತಾರ್ಥ ಸಮಾರಂಭ ಇಂದು ನಡೆಯಲಿದೆ.

ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಎಂಬುವರ ಜೊತೆಗೆ ಯುವ ರಾಜ್ ಕುಮಾರ್ ಎಂಗೇಜ್ ಮೆಂಟ್ ಇಂದು ನೆರವೇರಲಿದೆ. ಮೈಸೂರಿನ ಪ್ರತಿಷ್ಟಿತ ಹೋಟೆಲ್ ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದ್ದು, ಆಪ್ತರು ಹಾಗೂ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಯುವ ರಾಜ್ ಕುಮಾರ್ ಎಂಗೇಜ್ ಮೆಂಟ್ ಸಮಾರಂಭದ ಎಕ್ಸ್ ಕ್ಲೂಸಿವ್ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಕ್ಕೆ ಲಭ್ಯವಾಗಿದೆ ನೋಡಿರಿ...

ನಿಶ್ಚಿತಾರ್ಥ ಸಮಾರಂಭ ನಡೆಯುವುದು ಎಲ್ಲಿ.?

ನಿಶ್ಚಿತಾರ್ಥ ಸಮಾರಂಭ ನಡೆಯುವುದು ಎಲ್ಲಿ.?

ಮೈಸೂರಿನ ಪ್ರತಿಷ್ಟಿತ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಯುವ ರಾಜ್ ಕುಮಾರ್ - ಶ್ರೀದೇವಿ ಭೈರಪ್ಪ ನಿಶ್ಚಿತಾರ್ಥ ಸಮಾರಂಭ ಇಂದು ಮಧ್ಯಾಹ್ನ 11.30 ರ ಸುಮಾರಿಗೆ ನಡೆಯಲಿದೆ.

ಸಿದ್ಧವಾಗಿರುವ 'ವರ'

ಸಿದ್ಧವಾಗಿರುವ 'ವರ'

ಬೂದು ಬಣ್ಣದ ಸೂಟು ಧರಿಸಿ ನಿಶ್ಚಿತಾರ್ಥ ಸಮಾರಂಭಕ್ಕೆ ಯುವ ರಾಜ್ ಕುಮಾರ್ ಸಿದ್ಧವಾಗಿದ್ದಾರೆ. ಸಹೋದರನ ಎಂಗೇಜ್ ಮೆಂಟ್ ನಲ್ಲಿ ವಿನಯ್ ರಾಜ್ ಕುಮಾರ್ ಕೂಡ ಮಿಂಚಿದ್ದಾರೆ.

ರೆಡಿ ಆಗಿರುವ 'ವಧು'

ರೆಡಿ ಆಗಿರುವ 'ವಧು'

ಹಸಿರು ಬಣ್ಣದ ಸೀರೆಯುಟ್ಟು, ಚಿನ್ನದ ಒಡವೆಗಳಿಂದ ಸಿಂಗರಿಸಿಕೊಂಡು 'ವಧು' ಶ್ರೀದೇವಿ ಭೈರಪ್ಪ ತಯಾರಾಗಿದ್ದಾರೆ.

ತಯಾರಾಗಿದೆ ಮಂಟಪ

ಯುವ ರಾಜ್ ಕುಮಾರ್ - ಶ್ರೀದೇವಿ ಭೈರಪ್ಪ ನಿಶ್ಚಿತಾರ್ಥಕ್ಕೆ ಬಣ್ಣ ಬಣ್ಣದ ಹೂಗಳಿಂದ ಸದರ್ನ್ ಸ್ಟಾರ್ ಹೋಟೆಲ್ ನಲ್ಲಿ ಮಂಟಪ ಕೂಡ ಸಿದ್ಧವಾಗಿದೆ. ಇಡೀ ಡಾ.ರಾಜ್ ಕುಮಾರ್ ಕುಟುಂಬ ಈ ನಿಶ್ಚಿತಾರ್ಥ ಸಮಾರಂಭಕ್ಕೆ ಸಾಕ್ಷಿ ಆಗಲಿದೆ.

More from Filmibeat

English summary
Kannada matinee Idol Late Actor Dr.Rajkumar grandson Yuva Rajkumar (Raghavendra Rajkumar son) is all set to get engaged today with Sridevi Byrappa at Mysore. ಸಾಂಸ್ಕೃತಿಕ ನಗರಿಯಲ್ಲಿ ಅಣ್ಣಾವ್ರ ಮೊಮ್ಮಗನ ನಿಶ್ಚಿತಾರ್ಥ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X