For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನಿಂದ ಬಾಲಿವುಡ್ ವರೆಗೆ ರಾಖಿ ಸಂಭ್ರಮ

  By ಸೋನು ಗೌಡ
  |

  ದೇಶದೆಲ್ಲೆಡೆ ಇಂದು (ಆಗಸ್ಟ್ 29) ಅಣ್ಣ ತಂಗಿಯರ ಸಂಬಂಧ ಬೆಸೆಯುವ ರಾಖಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ನಮ್ಮ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗ ಕ್ಷೇತ್ರದ ಸ್ಟಾರ್ ಗಳು ತಮ್ಮ ತಮ್ಮ ತಂಗಿ-ಅಣ್ಣಂದಿರೊಂದಿಗೆ ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.

  ನಾಡಿನಾದ್ಯಂತ ರಕ್ಷಾ ಬಂಧನ ಹಬ್ಬದ ಸಂಭ್ರಮ ಸಡಗರ ಮುಗಿಲು ಮುಟ್ಟಿದ್ದು, ಸಹೋದರಿಯರು ಸಹೋದರರಿಗೆ ಅವರ ಪ್ರೀತಿ, ನಂಬಿಕೆ ಮತ್ತು ಉನ್ನತಿಗಾಗಿ ಪ್ರಾರ್ಥಿಸಿದ್ದಾರೆ.

  ಅಂದಹಾಗೆ ನಮ್ಮ ಸಿನಿ ತಾರೆಯರಾದ ಸ್ಯಾಂಡಲ್ ವುಡ್ ನಟಿ ರಾಧಿಕಾ ಪಂಡಿತ್, ನಟಿ ಹರಿಪ್ರೀಯಾ, ಸ್ಯಾಂಡಲ್ ವುಡ್ ನಟ ಯಶ್, ಬಾಲಿವುಡ್ ನಟಿ ಜೆನಿಲಿಯಾ, ಬಾಲಿವುಡ್ ನಟ ರಣವೀರ್ ಸಿಂಗ್, ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ, ತೆಲುಗು ನಟ ನಾನಿ ಮುಂತಾದವರು ತಮ್ಮ ಪ್ರೀತಿಯ ಸಹೋದರ ಹಾಗೂ ಸಹೋದರಿಯರಿಗೆ ರಾಖಿ ಕಟ್ಟುವ ಮೂಲಕ ಸಂಭ್ರಮವನ್ನು ಹಂಚಿಕೊಂಡರು. ಮುಂದೆ ಓದಿ.....

  ಸ್ಯಾಂಡಲ್ ವುಡ್ ಸ್ಟಾರ್ ಯಶ್

  ಸ್ಯಾಂಡಲ್ ವುಡ್ ಸ್ಟಾರ್ ಯಶ್

  ಸ್ಯಾಂಡಲ್ ವುಡ್ ನ ಫೇಮಸ್ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಪ್ರೀತಿಯ ಸಹೋದರಿಯ ಜೊತೆ ರಕ್ಷಾಬಂಧನ ಹಬ್ಬವನ್ನು ಆಚರಿಸುವ ಮೂಲಕ ನಾಡಿನ ಸಮಸ್ತ ಜನತೆಗೆ ಹಾಗೂ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ರಾಖಿ ಹಬ್ಬದ ಶುಭಾಶಯ ಕೋರಿದ್ದಾರೆ.

  ಚಂದನವನದ ತಾರೆ ರಾಧಿಕಾ ಪಂಡಿತ್

  ಚಂದನವನದ ತಾರೆ ರಾಧಿಕಾ ಪಂಡಿತ್

  ಸ್ಯಾಂಡಲ್ ವುಡ್ ನ ಪ್ರಿನ್ಸ್‌ಸಸ್ ಅಂತಾನೇ ಖ್ಯಾತಿ ಗಳಿಸಿರುವ ರಾಧಿಕಾ ಪಂಡಿತ್ ಅವರು ತಮ್ಮ ಸಹೋದರನಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನವನ್ನು ಸಂಭ್ರಮದಿಂದ ಆಚರಿಸಿಕೊಂಡರು.

  ಸ್ಯಾಂಡಲ್ ವುಡ್ ತಾರೆ ಹರಿಪ್ರೀಯ

  ಸ್ಯಾಂಡಲ್ ವುಡ್ ನ ಮತ್ತೋರ್ವ ತಾರೆ 'ಉಗ್ರಂ' ಖ್ಯಾತಿಯ ಹರಿಪ್ರೀಯಾ ಅವರು ತಮ್ಮ ಪ್ರೀತಿಯ ಸಹೋದರನಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನದ ಸಂಭ್ರಮವನ್ನು ಹಂಚಿಕೊಂಡರು.

  ಬಾಲಿವುಡ್ ತಾರೆ ಪ್ರೀಯಾಂಕ ಚೋಪ್ರಾ

  ಬಾಲಿವುಡ್ ತಾರೆ ಪಿಗ್ಗಿ, ಪ್ರೀಯಾಂಕ ಚೋಪ್ರಾ ಅವರು ರಕ್ಷಾಬಂಧನ ಹಬ್ಬವನ್ನು ಆಚರಿಸಿಕೊಂಡ ಬಗೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಶುಭಾಶಯ ಕೋರಿದ್ದಾರೆ

  ಬಾಲಿವುಡ್ ತಾರೆ ಜೆನಿಲಿಯಾ ದೇಶ್ ಮುಖ್

  ಬಾಲಿವುಡ್-ಟಾಲಿವುಡ್-ಕಾಲಿವುಡ್ ನಟಿ ಜೆನಿಲಿಯಾ ರಿತೇಶ್ ದೇಶ್ ಮುಖ್ ಅವರು ತಮ್ಮ ಸಹೋದರನಿಗೆ ಆರತಿ ಬೆಳಗಿ ರಾಖಿ ಕಟ್ಟುವ ಮೂಲಕ ಸಂಭ್ರಮದಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಿಕೊಂಡರು.

  ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್

  ಬಾಲಿವುಡ್ ನಟ ರಣವೀರ್ ಸಿಂಗ್ ತನ್ನ ಪ್ರೀತಿಯ ಸಹೋದರಿಯಿಂದ ರಾಖಿ ಕಟ್ಟಿಸಿಕೊಳ್ಳುವ ಮೂಲಕ ರಕ್ಷಾಬಂಧನ ಹಬ್ಬವನ್ನು ಸಂಭ್ರಮದಿಂಧ ಆಚರಿಸಿಕೊಂಡಿರುವುದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  ಟಾಲಿವುಡ್ ನಟ ನಾನಿ

  ಟಾಲಿವುಡ್ ನಟ ನಾನಿ ಅವರು ತಮ್ಮ ಪ್ರೀತಿಯ ತಂಗಿಯಿಂದ ರಕ್ಷಾಬಂಧನವನ್ನು ಕಟ್ಟಿಸಿಕೊಳ್ಳುವ ಮೂಲಕ ಹಬ್ಬದ ಸಂಭ್ರಮ ಆಚರಿಸಿಕೊಂಡರು

  English summary
  In Pictures: Check How Celebrities celebrate the festival of Raksha Bandhan. Raksha Bandhan is a Hindu festival, wherein a sister ties a knot around her brother's wrist, who pledges to protect her in all circumstances. Sandalwood Actress Haripriya, Radhika Pandit, Actor Yash, Bollywood Actor Ranveer Singh, Actress Priyanka Chopra, Actress Genelie d'souza, Telugu Actor Nani Celebrated Raksha Bhandan (August 29)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X