ಮಹಾರಾಷ್ಟ್ರ ಸರ್ಕಾರ ಕೊಟ್ಟ ಹೊಡೆತ: ಮಲ್ಟಿಪ್ಲೆಕ್ಸ್ ಆದಾಯಕ್ಕೆ ಬೀಳಲಿದೆ ಗುನ್ನ.!

By Harshitha

ರಾಜ್ಯದಲ್ಲಿ ಇರುವ ಮಲ್ಟಿಪ್ಲೆಕ್ಸ್ ಗಳಲ್ಲಿ ಮನೆ ಆಹಾರಕ್ಕೆ ಪ್ರವೇಶ ನೀಡಬೇಕು ಎಂಬ ನಿಯಮ ಜಾರಿಗೆ ತರುವ ಆಲೋಚನೆ ಇದೆ ಅಂತ ಕಳೆದ ಶುಕ್ರವಾರವಷ್ಟೇ ಮಹಾರಾಷ್ಟ್ರ ಸರ್ಕಾರ ಘೋಷಿಸಿತು. ಇದರಿಂದ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ನಡುಕ ಶುರುವಾಗಿದೆ. ಯಾಕಂದ್ರೆ, ಹೊರಗಿನ ಆಹಾರಕ್ಕೆ ಪ್ರವೇಶ ನೀಡಿದ್ರೆ ಮಲ್ಟಿಪ್ಲೆಕ್ಸ್ ನವರಿಗೆ ದೊಡ್ಡ ಪ್ರಮಾಣದ ನಷ್ಟ ಆಗುವುದು ಖಚಿತ.

ಹೌದು, ಮಲ್ಟಿಪ್ಲೆಕ್ಸ್ ನವರಿಗೆ ಟಿಕೆಟ್ ಬೆಲೆಗಳಿಂದ ಎಷ್ಟು ಲಾಭ ಇದ್ಯೋ... ಆಹಾರ ಹಾಗೂ ಪಾನೀಯ ಪದಾರ್ಥಗಳಿಂದಲೂ ಅಷ್ಟೇ ಲಾಭ ಇದೆ. ಎಷ್ಟೇ ಆಗಲಿ, ಟಿಕೆಟ್ ಗಿಂತ ಪಾಪ್ ಕಾರ್ನ್ ಹಾಗೂ ಕೂಲ್ ಡ್ರಿಂಕ್ಸ್ ಕಾಂಬೋ ಎಷ್ಟೋ ಕಡೆ ದುಬಾರಿ ಅಲ್ಲವೇ.?

ಕೇವಲ ತಿಂಡಿ ಪದಾರ್ಥಗಳಿಂದ ಪಿ.ವಿ.ಆರ್ ಹಾಗೂ ಐನಾಕ್ಸ್ ಲೀಷರ್ ಮಾಡಿರುವ ಲಾಭ ನೋಡಿದ್ರೆ ನೀವೇ ಬೆಚ್ಚಿ ಬೀಳ್ತೀರಾ. ವಿವರ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ದೇಶದಲ್ಲಿ ಇರುವ ಸ್ಕ್ರೀನ್ ಗಳು ಎಷ್ಟು.?

ದೇಶದಲ್ಲಿ ಇರುವ ಸ್ಕ್ರೀನ್ ಗಳು ಎಷ್ಟು.?

ಇಡೀ ಭಾರತದಲ್ಲಿ 625 ಪಿ.ವಿ.ಆರ್ ಸ್ಕ್ರೀನ್ ಗಳಿವೆ. ಅದರಲ್ಲಿ 157 ಸ್ಕ್ರೀನ್ ಗಳು ಮಹಾರಾಷ್ಟ್ರ ರಾಜ್ಯದಲ್ಲಿದೆ. ಇನ್ನೂ ದೇಶದಲ್ಲಿ 492 ಐನಾಕ್ಸ್ ಸ್ಕ್ರೀನ್ ಗಳಿವೆ. ಅದರಲ್ಲಿ 118 ಸ್ಕ್ರೀನ್ ಗಳು ಮಹಾರಾಷ್ಟ್ರದಲ್ಲಿದೆ.

ತಿಂಡಿ ಪದಾರ್ಥಗಳಿಂದ ಪಿ.ವಿ.ಆರ್ ಮಾಡುತ್ತಿರುವ ಲಾಭ ಎಷ್ಟು.?

ತಿಂಡಿ ಪದಾರ್ಥಗಳಿಂದ ಪಿ.ವಿ.ಆರ್ ಮಾಡುತ್ತಿರುವ ಲಾಭ ಎಷ್ಟು.?

2018 ರ ಮಾರ್ಚ್ ವರೆಗಿನ ಅಂಕಿ-ಅಂಶಗಳ ಪ್ರಕಾರ, ಪಿ.ವಿ.ಆರ್ ನ ಒಟ್ಟು ಆದಾಯ 2,265.43 ಕೋಟಿ. ಅದರಲ್ಲಿ 26.8% ರಷ್ಟು ಆದಾಯ (607.7 ಕೋಟಿ) ಆಹಾರ ಪದಾರ್ಥಗಳ ಮಾರಾಟದಿಂದ ಲಭಿಸಿದೆ.

ಪಿವಿಆರ್, ಐನಾಕ್ಸ್ ಗೆ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್ ಲಾಭವೆಷ್ಟು?

ಐನಾಕ್ಸ್ ಗೆ ಬರುತ್ತಿರುವ ಆದಾಯ ಎಷ್ಟು.?

ಐನಾಕ್ಸ್ ಗೆ ಬರುತ್ತಿರುವ ಆದಾಯ ಎಷ್ಟು.?

ಐನಾಕ್ಸ್ ಲೀಷರ್ ಒಟ್ಟು ಆದಾಯ 1,348.1 ಕೋಟಿ. ಅದರಲ್ಲಿ ಪಾಪ್ ಕಾರ್ನ್, ಕೂಲ್ ಡ್ರಿಂಕ್ಸ್, ಸ್ವೀಟ್ ಕಾರ್ನ್... ಅಂತಹ ಕುರುಕು ತಿಂಡಿಗಳನ್ನ ಮಾರಾಟ ಮಾಡಿ ಐನಾಕ್ಸ್ ಗೆ ಬಂದಿರುವ ಆದಾಯ 306 ಕೋಟಿ (22.7%).

ಮಲ್ಟಿಪ್ಲೆಕ್ಸ್ ಗಳ ಆದಾಯಕ್ಕೆ ಗುನ್ನ.!

ಮಲ್ಟಿಪ್ಲೆಕ್ಸ್ ಗಳ ಆದಾಯಕ್ಕೆ ಗುನ್ನ.!

ಮಲ್ಟಿಪ್ಲೆಕ್ಸ್ ಗಳಲ್ಲಿ ಹೊರಗಿನ ಆಹಾರಕ್ಕೆ ಪ್ರವೇಶ ನೀಡಬೇಕು ಎಂಬ ನಿಯಮ ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ಮುಂದಾಗುತ್ತಿದ್ದಂತೆಯೇ, ಷೇರು ಮಾರುಕಟ್ಟೆಯಲ್ಲಿ ಪಿವಿಆರ್ ಹಾಗೂ ಐನಾಕ್ಸ್ ಷೇರು ಕುಸಿತ ಕಂಡಿತು. ಇದು ಆರಂಭಿಕ ಹೊಡೆತ ಅಷ್ಟೇ. ಒಂದು ವೇಳೆ ನಿಯಮ ಜಾರಿಗೆ ಬಂದೇ ಬಿಟ್ಟರೆ, ಮಲ್ಟಿಪ್ಲೆಕ್ಸ್ ನವರ ಆದಾಯಕ್ಕೆ ಗುನ್ನ ಬೀಳುವುದು ಖಚಿತ.

ಎಂ.ಆರ್.ಪಿಗಿಂತ ಹೆಚ್ಚು ಬೆಲೆಗೆ ಮಾರುವ ಹಾಗಿಲ್ಲ.!

ಎಂ.ಆರ್.ಪಿಗಿಂತ ಹೆಚ್ಚು ಬೆಲೆಗೆ ಮಾರುವ ಹಾಗಿಲ್ಲ.!

ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಮಾರಾಟ ಬೆಲೆಗಿಂತ ಹೆಚ್ಚು ಬೆಲೆಗೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಾರದು ಎಂದು ಮಹಾರಾಷ್ಟ್ರ ಸಚಿವ ರವೀಂದ್ರ ಚವಾಣ್ ಹೇಳಿದ್ದಾರೆ. ಇದೂ ಜಾರಿಯಾದರೆ, ಮಲ್ಟಿಪ್ಲೆಕ್ಸ್ ಗಳ ಆದಾಯಕ್ಕೆ ಕನ್ನ ಬಿದ್ದ ಹಾಗೆ.

ಟಿಕೆಟ್ ಬೆಲೆ ಜಾಸ್ತಿ ಆದರೆ...

ಟಿಕೆಟ್ ಬೆಲೆ ಜಾಸ್ತಿ ಆದರೆ...

ಆಹಾರ ಪದಾರ್ಥಗಳಿಂದ ಬರುವ ಆದಾಯಕ್ಕೆ ಕತ್ತಿ ಬಿದ್ದರೆ, ಅದರಿಂದ ತಪ್ಪಿಸಿಕೊಳ್ಳಲು ಮಲ್ಟಿಪ್ಲೆಕ್ಸ್ ನವರು ಟಿಕೆಟ್ ಬೆಲೆ ಜಾಸ್ತಿ ಮಾಡಬಹುದು. ಇದರಿಂದ ಸಿನಿಮಾ ನೋಡಲು ಬರುವವರ ಸಂಖ್ಯೆ ಕಮ್ಮಿ ಆಗಬಹುದು ಎಂಬ ಆತಂಕ ಕೂಡ ಎದುರಾಗಿದೆ.

ಹೈಕೋರ್ಟ್ ನಲ್ಲಿ ಪಿ.ಐ.ಎಲ್

ಹೈಕೋರ್ಟ್ ನಲ್ಲಿ ಪಿ.ಐ.ಎಲ್

ಮಲ್ಟಿಪ್ಲೆಕ್ಸ್ ಗಳಲ್ಲಿ ಸಿಗುವ ಪಾನೀಯ ಹಾಗೂ ಆಹಾರ ಪದಾರ್ಥಗಳ ಬೆಲೆ ದುಬಾರಿ ಎಂದು ಬಾಂಬೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿತ್ತು. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೋರ್ಟ್ ಸೂಚಿಸಿತ್ತು. ಇದಕ್ಕೆ ಅನುಗುಣವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಮನೆ ಆಹಾರಕ್ಕೆ ತಡೆಯೊಡ್ಡಬಾರದು ಎಂಬ ಆದೇಶ ಜಾರಿ ಮಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿತ್ತು. ಕೋರ್ಟ್ ನಲ್ಲಿ ಈ ಕುರಿತು ವಿಚಾರಣೆ ಜುಲೈ 25ಕ್ಕಿದೆ.

More from Filmibeat

English summary
Here is the detailed report on the Income from food and beverages to PVR and INOX in 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X