ಸತತ 24 ಗಂಟೆಗಳಿಂದ ಮುಂದುವರೆದ ಐಟಿ ಶೋಧ ಕಾರ್ಯ
ಕನ್ನಡದ ನಟ, ನಿರ್ಮಾಪಕರ ಮನೆ ಮೇಲೆ ನಿನ್ನೆ ಶುರುವಾದ ಐಟಿ ಅಧಿಕಾರಿಗಳು ಶೋಧ ಇಂದೂ ಸಹ ಮುಂದುವರೆದಿದೆ. ನಟ ಶಿವರಾಜ್ ಕುಮಾರ್, ಪುನೀತ್ ಕುಮಾರ್, ಸುದೀಪ್, ಯಶ್, ನಿರ್ಮಾಪಕರಾದ ಜಯಣ್ಣ, ವಿಜಯ್ ಕಿರಗಂದೂರು, ಸಿ ಆರ್ ಮನೋಹರ್, ರಾಕ್ ಲೈನ್ ವೆಂಕಟೇಶ್ ಅವರ ಮನೆಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ನಿನ್ನೆ ಬೆಳಗ್ಗೆ 6.30 ರಿಂದ ರಾತ್ರಿ 11.30 ವರೆಗೆ ನಡೆದ ಐಟಿ ಅಧಿಕಾರಿಗಳ ಕೆಲಸ ಈ ದಿನವೂ ಮುಂದುವರೆದಿದೆ. ಅಲ್ಲದೆ, ನಾಳೆಯವರೆಗೆ ಸಹ ಐ ಟಿ ಅಧಿಕಾರಿಗಳ ಶೋಧ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ದಾಳಿಯ ವೇಳೆ ಕಡತಗಳು, ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ಪರಿಶೀಲನೆಯನ್ನು ಮಾಡಲಾಗುತ್ತಿದೆ. ಮನೆಯ ಸದಸ್ಯರನ್ನು ಪ್ರಶ್ನೆ ಮಾಡಿ ಮಾಹಿತಿಯನ್ನು ಪಡೆಯಲಾಗುತ್ತಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದ್ದು ತಿಳಿದರೆ ನೋಟಿಸ್ ನೀಡಲಾಗುತ್ತದೆ. ಇದಕ್ಕೆ ಅವರು ಉತ್ತರ ನೀಡಬೆಕಾಗುತ್ತದೆ.

ನಟ, ನಿರ್ಮಾಪಕರು ಹಾಗೂ ಮನೆಯವರ ಹೆಸರಿನಲ್ಲಿ ಇರುವ ಆಸ್ತಿಗಳ ಬಗ್ಗೆ ಸಂಪೂರ್ಣ ವಿವರ ಪಡೆಯುತ್ತಿದ್ದಾರೆ. ಮನೆಯ ಒಳಗೆ ಇರುವವರನ್ನು ಹೊರಗೆ ಬಿಡುವುದಾಗಲಿ ಹಾಗೂ ಫೋನ್ ಮಾಡಲು ಅವಕಾಶ ನೀಡಿಲ್ಲ. ಸ್ಟಾರ್ ನಟರ ಮನೆ ಮುಂದೆ ಅಭಿಮಾನಿಗಳು ಬರುತ್ತಿದ್ದು, ಪೊಲೀಸರು ಬಿಗಿ ಬಂದೊಬಸ್ತ್ ಮಾಡಿದ್ದಾರೆ.


Click it and Unblock the Notifications











