For Quick Alerts
  ALLOW NOTIFICATIONS  
  For Daily Alerts

  ರಾಕ್ ಲೈನ್ ಮನೆ ಮೇಲೆ ಐಟಿ ದಾಳಿಯ ವೇಳೆ ಚಿನ್ನ, ಬೆಳ್ಳಿ ಪತ್ತೆ

  |

  ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ 2 ಕೆಜಿಯಷ್ಟು ಚಿನ್ನಾಭರಣ ಹಾಗೂ 20 ಕೆಜಿಗೂ ಹೆಚ್ಚು ಬೆಳ್ಳಿಯ ಸಾಮಾಗ್ರಿಗಳು ಪತ್ತೆಯಾಗಿವೆ. ಇವುಗಳ ವಿವರವನ್ನು ರಾಕ್ ಲೈನ್ ನೀಡಬೇಕಾಗುತ್ತದೆ.

  ಮಹಾಲಕ್ಷ್ಮಿ ಲೇ ಔಟ್ ನಲ್ಲಿರುವ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಐಟಿ ದಾಳಿ ಮಾಡಲಾಗಿದ್ದು, ನೆಲಮಂಗಲ, ದೇವನಹಳ್ಳಿ, ಪೀಣ್ಯ ಬಳಿಯ ಎಕರೆಗಟ್ಟಲೆ ಜಾಗದ ದಾಖಲೆಗಳ ಪರಿಶೀಲನೆ ಮಾಡಲಾಗಿದೆ.

  ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಐಟಿ ದಾಳಿ

  2016, 2017 ಹಾಗೂ 20118ರ ಆದಾಯ ತೆರಿಗೆಯನ್ನ ಪರಿಶೀಲನೆ ನಡೆಸ್ತಿರೋ ಐಟಿ ಅಧಿಕಾರಿಗಳು, ಎಸ್ ಬಿ ಐ, ಎಚ್ ಎಸ್ ಬಿ ಸಿ, ಐಸಿಐಸಿಐ ಬ್ಯಾಂಕ್ ನ ಖಾತೆಗಳ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಮೊದಲು 8 ಆದಾಯ ತೆರಿಗೆ ಅಧಿಕಾರಿಗಳು ದಾಳಿಯಲ್ಲಿ ಭಾಗಿಯಾಗಿದ್ದು, ಬಳಿಕ ಇಬ್ಬರು ಐಟಿ ಅಧಿಕಾರಿಗಳ ಬಂದು ಪರಿಶೀಲನೆ ನಡೆಸಿದ್ದಾರೆ.

  ನಟ ಸುದೀಪ್, ಯಶ್ ರಿಗೂ ಶಾಕ್ ನೀಡಿದ ಐಟಿ ಅಧಿಕಾರಿಗಳು

  'ನಟ ಸಾರ್ವಭೌಮ' ದೊಡ್ಡ ಬಜೆಟ್ ಸಿನಿಮಾಕ್ಕೆ ಹಣ ಬಂದಿದ್ದೆಲ್ಲಿ ಅನ್ನೋದರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದು ಪುನೀತ್ ರಾಜ್ ಕುಮಾರ್, ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟನೆಯ ಸಿನಿಮಾವಾಗಿದೆ.

  English summary
  Income tax officers raid Kannada producer-actor Rockline Venkatesh house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X