ನಟ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ
ಇಂದು ಬೆಳ್ಳಂಬೆಳಗ್ಗೆಯೇ ಸ್ಯಾಂಡಲ್ ವುಡ್ ಗೆ ಐಟಿ ಶಾಕ್ ನೀಡಿದೆ. ಕನ್ನಡದ ನಟರ ಹಾಗೂ ನಿರ್ಮಾಪಕರ ಮನೆಗಳ ಮೇಲೆ ಐಟಿ ದಾಳಿ ಮಾಡಿದೆ.
ನಟ ಪುನೀತ್ ರಾಜ್ ಕುಮಾರ್ ಅವರ ಸದಾಶಿವನಗರದ ನಿವಾಸ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದಾರಾ ಎಂದು ಪರೀಕ್ಷೆ ಮಾಡುತ್ತಿದ್ದಾರೆ.
ಪುನೀತ್ ರಾಜ್ ಕುಮಾರ್ ತಮ್ಮದೆ ಆದ ನಿರ್ಮಾಣ ಸಂಸ್ಥೆಯನ್ನು ಕೂಡ ಹೊಂದಿದ್ದಾರೆ. ಪಿ ಆರ್ ಕೆ ಪ್ರೊಡಕ್ಷನ್ಸ್ ಹಾಗೂ ಪಿ ಆರ್ ಕೆ ಆಡಿಯೋ ಸಂಸ್ಥೆಯ ಒಡೆತನ ಹೊಂದಿದ್ದಾರೆ.

ಪುನೀತ್ ರಾಜ್ ಕುಮಾರ್ ಮಾತ್ರವಲ್ಲದೆ ನಟ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು, ರಾಕ್ ಲೈನ್ ವೆಂಕಟೇಶ್ ಹಾಗೂ ಸಿ ಆರ್ ಮನೋಹರ್ ಅವರ ಮನೆ ಮೇಲೆ ಕೂಡ ಐಟಿ ದಾಳೆ ಆಗಿದೆ ಎಂಬ ಸುದ್ದಿ ಇದೆ.
English summary
Income tax officers raid Kannada actor Puneeth Rajkumar house.


Click it and Unblock the Notifications