ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಐಟಿ ದಾಳಿ
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಾಕ್ ಲೈನ್ ವೆಂಕಟೇಶ್ ಮನೆ ಮೇಲೆ ಐಟಿ ದಾಳಿ..! | FILMIBEAT KANNADA
ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಅವರಿಗೆ ಐಟಿ ಶಾಕ್ ನೀಡಿದೆ. ರಾಕ್ ಲೈನ್ ಮನೆ ಮೇಲೆ ಇಂದು ಬೆಳಗ್ಗೆ ಐಟಿ ದಾಳಿ ನಡೆದಿದೆ.
10 ಹೆಚ್ಚು ಆದಾಯ ತೆರೆಗೆ ಅಧಿಕಾರಿಗಳಿಂದ ದಾಟಿ ದಾಳಿ ನೆಡೆದಿದ್ದು, ಮಹಾಲಕ್ಷ್ಮಿ ಲೇಟ್ ಔಟ್ ನಲ್ಲಿರುವ ರಾಕ್ ಲೈನ್ ವೆಂಕಟೇಶ್ ಅವರ ನಿವಾಸದಲ್ಲಿನ ದಾಖಲೆಗಳನ್ನು ಪರೀಶೀಲನೆ ಮಾಡಲಾಗಿದೆ.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕನ್ನಡ ಪಾತ್ರವಲ್ಲದೆ ಇತರ ಭಾಷೆಯ ದೊಡ್ಡ ದೊಡ್ಡ ಸಿನಿಮಾಗಳನ್ನು ಸಹ ನಿರ್ಮಾಣ ಹಾಗೂ ಹಂಚಿಕೆ ಮಾಡಿದ್ದರು. ರಜನಿಕಾಂತ್ ಅವರ 'ಲಿಂಗ' ಹಾಗೂ ಸಲ್ಮಾನ್ ಖಾನ್ ಅವರ 'ಭಜರಂಗಿ ಭಾಯಿಜಾನ್' ಸಿನಿಮಾಗಳಿಗೆ ಸಹ ಬಂಡವಾಳ ಹಾಕಿದ್ದರು.

ಸದ್ಯಕ್ಕೆ ಕನ್ನಡದಲ್ಲಿ ರಾಕ್ ಲೈನ್ ವೆಂಕಟೇಶ್ 'ನಟ ಸಾರ್ವಭೌಮ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಪುನೀತ್ ರಾಜ್ ಕುಮಾರ್, ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ನಟನೆಯ ಸಿನಿಮಾವಾಗಿದೆ. ಪವನ್ ಒಡೆಯರ್ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ.
More from Filmibeat
English summary
Income tax officers raid kannada producer-actor Rockline Venkatesh house.


Click it and Unblock the Notifications











