ನಟ ಶಿವರಾಜ್ ಕುಮಾರ್ ಮನೆ ಮೇಲೆಯೂ ಐಟಿ ರೇಡ್
ಕನ್ನಡ ಚಿತ್ರರಂಗಕ್ಕೆ ಇಂದು ಐಟಿ ಅಧಿಕಾರಿಗಳು ದಾಳಿ ದೊಡ್ಡ ಶಾಕ್ ನೀಡಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆ ಮೇಲೆಯೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನಾಗಾವರದ ಮಾನ್ಯತಾ ಟೆಕ್ ಪಾರ್ಟ್ ಬಳಿಕ ಶಿವರಾಜ್ ಕುಮಾರ್ ನಿವಾಸ ಮೇಲೆ ಐಳಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಶಿವಣ್ಣನ ಶ್ರೀಮುತ್ತು ಮನೆಯಲ್ಲಿರುವ ದಾಖಲೆಗಳನ್ನ ಪರಿಶೀಲನೆ ಮಾಡಲಾಗುತ್ತಿದೆ. ಶಿವರಾಜ್ ಕುಮಾರ್ ತಮ್ಮದೆ ಒಡೆತನದ ಶ್ರೀಮುತ್ತು ಸಿನಿ ಸರ್ವಿಸ್ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ.
ನಟ ಶಿವರಾಜ್ ಕುಮಾರ್ ಮಾತ್ರವಲ್ಲದೆ ಪುನೀತ್ ರಾಕ್ ಕುಮಾರ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆ ಮೇಲೆಯೂ ಐಟಿ ದಾಳಿ ನಡೆದಿದೆ.

ಜೊತೆಗೆ ನಟ ಯಶ್, ನಿರ್ಮಾಪಕ ವಿಜಯ್ ಕಿರಂಗಂದೂರರು, ಜಯಣ್ಣ, ಸಿ ಆರ್ ಮನೋಹರ್ ಅವರ ನಿವಾಸದ ಮೇಲೆಯೂ ಐಟಿ ರೇಟ್ ಆಗಿದೆ ಎಂಬ ಸುದ್ದಿ ಇದೆ.
More from Filmibeat
English summary
Income tax officers raid Kannada actor Shivaraj Kumar house.


Click it and Unblock the Notifications











