ನಟ ಸುದೀಪ್, ಯಶ್ ರಿಗೂ ಶಾಕ್ ನೀಡಿದ ಐಟಿ ಅಧಿಕಾರಿಗಳು
ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ನಟ ಹಾಗೂ ನಿರ್ಮಾಪಕರ ಮನೆ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಬಳಿಕ ಯಶ್ ಹಾಗೂ ಸುದೀಪ್ ಮನೆಗಳ ಮೇಲೆಯೂ ಆದಾಯ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಜಿ ಪಿ ನಗರದಲ್ಲಿರುವ ನಟ ಸುದೀಪ್ ಅವರ ನಿವಾಸ ಹಾಗೂ ಕತ್ರಿಗುಪ್ಪೆಯಲ್ಲಿರುವ ಯಶ್ ಮನೆಗೂ ಐಟಿ ಅಧಿಕಾರಿಗಳು ಧಾವಿಸಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ನಟ ಸುದೀಪ್ ಅವರ 'ಹೆಬ್ಬುಲಿ' ಸಿನಿಮಾ 2017ರ ದೊಡ್ಡ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ 50+ ಕೋಟಿ ಹಣವನ್ನು ಗಳಿಕೆ ಮಾಡಿದೆ ಎಂಬ ಸುದ್ದಿ ಇತ್ತು. ಜೊತೆಗೆ ಕಳೆದ ತಿಂಗಳು ಬಿಡುಗಡೆಯಾದ 'ಕೆಜಿಎಫ್' ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆದಿತ್ತು.

ಈ ನಟರ ಜೊತೆಗೆ ನಿರ್ಮಾಪಕ ವಿಜಯ್ ಕಿರಂಗಂದೂರರು, ಜಯಣ್ಣ, ಸಿ ಆರ್ ಮನೋಹರ್ ಅವರ ನಿವಾಸದ ಮೇಲೆಯೂ ಐಟಿ ರೇಟ್ ಆಗಿದೆ ಎಂಬ ಸುದ್ದಿ ಇದೆ.
English summary
Income tax officers raid Kannada actors Yash and Sudeep houses.


Click it and Unblock the Notifications