ಐಟಿ ಅಧಿಕಾರಿಗಳ ಪ್ರಕಟಣೆ : 109 ಕೋಟಿ ಮೌಲ್ಯದ ಆಸ್ತಿ ದಾಖಲೆ ಇಲ್ಲ

Recommended Video

ಐಟಿ ಅಧಿಕಾರಿಗಳ ಪ್ರಕಟಣೆ : 109 ಕೋಟಿ ಮೌಲ್ಯದ ಆಸ್ತಿ ದಾಖಲೆ ಇಲ್ಲ..! | Oneindia Kannada

ಸ್ಯಾಂಡಲ್ ವುಡ್ ನಟ ಹಾಗೂ ನಿರ್ಮಾಪಕರ ಮೇಲಾದ ಐಟಿ ದಾಳಿಯ ವಿವರವನ್ನು ಆದಾಯ ತೆರಿಗೆ ಇಲಾಖೆ ಬಹಿರಂಗ ಪಡಿಸಿದೆ. ದಾಳಿಯ ಲೆಕ್ಕಾಚಾರಗಳನ್ನು ಐಟಿ ಅಧಿಕಾರಿಗಳು ಮಾಧ್ಯಮ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಐಟಿ ಇಲಾಖೆಯಿಂದ ಬಂದಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ ಒಟ್ಟು 109 ಕೋಟಿ ಮೌಲ್ಯದ ಆಸ್ತಿಗೆ ಯಾವುದೇ ದಾಖಲೆ ಇಲ್ಲ. ಈ ಆಘೋಷಿತ ಆಸ್ತಿಗೆ ತೆರಿಗೆ ಪಾವತಿ ಆಗಿಲ್ಲ ಎನ್ನುವುದು ತಿಳಿಯುತ್ತಿದೆ. ಇದರಲ್ಲಿ 2.85 ಕೋಟಿ ನಗದು ಹಣ ಹಾಗೂ 25.3 ಕೆಜಿ ಬಂಗಾರ ಸೇರಿಕೊಂಡಿದೆ.

income tax officers reveal it raid on kannada actor producers amount

ನಟರ ಸಂಭಾವನೆಯ ಹೊರತಾಗಿ ಪ್ರಮುಖವಾಗಿ ನಟರ ವ್ಯವಹಾರಗಳ ಕುರಿತು ಐಟಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಅಲ್ಲದೆ, ಸಿನಿಮಾಗಳ ಆಡಿಯೋ ಹಕ್ಕು, ಸೆಟೆಲೈಟ್ ರೈಟ್ಸ್, ಥಿಯೇಟರ್ ಕಲೆಕ್ಷನ್ ಹೀಗೆ ಯಾವುದಕ್ಕೂ ಸರಿಯಾದ ಲೆಕ್ಕ ಪತ್ರಗಳು ಇಲ್ಲ ಎಂದು ತಿಳಿಸಲಾಗಿದೆ.

ನಟರು ಹಾಗೂ ನಿರ್ಮಾಪಕರ 109 ಕೋಟಿ ಮೌಲ್ಯದ ಆಸ್ತಿಯ ಬಗ್ಗೆ ಮತ್ತೆ ವಿಚಾರಣೆ ನಡೆಯಲಿದೆ. ಮತ್ತೊಂದು ಕಡೆ ದಾಳಿಯಿಂದ ಬಂದ ಒಟ್ಟು ಮೊತ್ತವನ್ನು ಅಧಿಕೃತವಾಗಿ ಹೇಳಿರುವ ಐಟಿ ಇಲಾಖೆ ಯಾರ್ಯಾರ ಮೌಲ್ಯ ಎಷ್ಟು ಎನ್ನುವುದನ್ನು ಬಹಿರಂಗ ಪಡಿಸಿಲ್ಲ.

ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್, ನಿರ್ಮಾಪಕರಾದ ಜಯಣ್ಣ, ವಿಜಯ್ ಕಿರಗಂದೂರು, ರಾಕ್ ಲೈನ್ ವೆಂಕಟೇಶ್ ಹಾಗೂ ಸಿ ಆರ್ ಮಹೋಹರ್ ಮನೆ ಮೇಲೆ ಕಳೆದ ಗುರುವಾರ ಐಟಿ ದಾಳಿ ನಡೆದಿತ್ತು.

More from Filmibeat

English summary
Income tax officers reveal it raid on kannada actor producers amount
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X