twitter
    For Quick Alerts
    ALLOW NOTIFICATIONS  
    For Daily Alerts

    ದೇಶಭಕ್ತಿ ಸಾರುವ ಈ ಕನ್ನಡ ಚಿತ್ರಗಳನ್ನು ನೋಡಲು ಮರೆಯದಿರಿ

    |

    ದೇಶಭಕ್ತಿ ಸಾರುವ ಸಿನಿಮಾಗಳಿಗೆ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನವಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ವೀರಾ ಸೇನಾನಿಗಳ ಜೀವನ ಚರಿತ್ರೆಯನ್ನು ತಿಳಿಯುವ ಆಸಕ್ತಿ ಪ್ರತಿಯೊಬ್ಬ ಭಾರತೀಯರಿಗೂ ಇರುತ್ತದೆ. ಇಂಗ್ಲೀಷರ ಮುಷ್ಠಿಯಿಂದ ಸ್ವಾತಂತ್ರ್ಯ ಪಡೆಯಲು ನಡೆದ ಹೋರಾಟ, ಬಲಿದಾನಗಳ ಬಗ್ಗೆಯೂ ತಿಳಿಯಲು ಅಷ್ಟೇ ಒಲವು ಇದೆ.

    Recommended Video

    Superstar : Upendra ಪರಿವಾರದಿಂದ ಹೊಸ ಹೀರೋ , ಸಿನಿಮಾ ಹೆಸರು ಸೂಪರ್ ಸ್ಟಾರ್ | Filmibeat Kannada

    ಕನ್ನಡದಲ್ಲಿ ಅಂತಹ ಸಿನಿಮಾಗಳು ಯಾವುದಿದೆ. ಯಾವ ಸಿನಿಮಾವನ್ನು ನಾವು ನೋಡಬೇಕು ಎಂಬ ಗೊಂದಲ ನಿಮಗಿದ್ದರೆ ಚಿಂತೆ ಬೇಡ. ದೇಶಭಕ್ತಿಯ ಕಿಚ್ಚು ಹೆಚ್ಚಿಸುವ ಹತ್ತು ಹಲವು ಚಿತ್ರಗಳು ಕನ್ನಡದಲ್ಲಿ ಬಂದಿದೆ. ಅದರಲ್ಲಿ ಒಂದಿಷ್ಟು ಪಟ್ಟಿ ಮಾಡಿದ್ದೇವೆ. ಈ ಪೈಕಿ ಎಲ್ಲ ಚಿತ್ರಗಳನ್ನು ನೀವು ನೋಡಲೇಬೇಕು. ಇದನ್ನು ಹೊರತು ಪಡಿಸಿ ಬೇರೆ ಸಿನಿಮಾಗಳು ಇದ್ದರೂ ಕಾಮೆಂಟ್ ಮೂಲಕ ತಿಳಿಸಿ. ಮುಂದೆ ಓದಿ....

    ಸ್ವಾತಂತ್ರ್ಯ ದಿನಾಚರಣೆ ವಿಶೇಷ: ದೇಶಪ್ರೇಮ ಮೆರೆವ ಟಾಪ್ 7 ಸಿನಿಮಾಗಳುಸ್ವಾತಂತ್ರ್ಯ ದಿನಾಚರಣೆ ವಿಶೇಷ: ದೇಶಪ್ರೇಮ ಮೆರೆವ ಟಾಪ್ 7 ಸಿನಿಮಾಗಳು

    ಕಿತ್ತೂರು ಚೆನ್ನಮ್ಮ

    ಕಿತ್ತೂರು ಚೆನ್ನಮ್ಮ

    1961ರಲ್ಲಿ ಮೂಡಿ ಬಂದಿದ್ದ ಐತಿಹಾಸಿಕ ಸಿನಿಮಾ ಕಿತ್ತೂರು ಚೆನ್ನಮ್ಮ. ಬಿ ಸರೋಜಾ ದೇವಿ ಕಿತ್ತೂರು ರಾಣಿ ಚೆನ್ನಮ್ಮನಾಗಿ ನಟಿಸಿದ್ದ ಈ ಚಿತ್ರದಲ್ಲಿ ಲೀಲಾವತಿ, ಎಂವಿ ರಾಜಮ್ಮ, ರಾಜ್ ಕುಮಾರ್, ನರಸಿಂಹರಾಜು ಸೇರಿದಂತೆ ಹಲವರು ಕಾಣಿಸಿಕೊಂಡಿದ್ದರು. ಬಿ ಆರ್ ಪಂತಲು ನಿರ್ದೇಶನ ಮಾಡಿದ್ದರು.

    ಮುತ್ತಿನಹಾರ

    ಮುತ್ತಿನಹಾರ

    ಡಾ ರಾಜ್ ಕುಮಾರ್, ಸುಹಾಸಿನಿ, ಕೆಎಸ್ ಅಶ್ವಥ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮುತ್ತಿನ ಹಾರ ಚಿತ್ರ. ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡುವ ಯೋಧನೊಬ್ಬನ ವೀರ ಕಥೆ. ಎಸ್ ವಿ ರಾಜೇಂದ್ರ ಸಿಂಗ್ ಬಾಬು ಈ ಚಿತ್ರ ನಿರ್ದೇಶಿಸಿದ್ದರು. 1990ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು.

    ಸ್ವಾತಂತ್ರ್ಯ ದಿನಾಚರಣೆ ವಿಶೇಷ: ಕೇಳಲೇಬೇಕಾದ ಐದು ಕನ್ನಡ ಗೀತೆಗಳುಸ್ವಾತಂತ್ರ್ಯ ದಿನಾಚರಣೆ ವಿಶೇಷ: ಕೇಳಲೇಬೇಕಾದ ಐದು ಕನ್ನಡ ಗೀತೆಗಳು

    ವೀರಪ್ಪ ನಾಯಕ

    ವೀರಪ್ಪ ನಾಯಕ

    1999ರಲ್ಲಿ ತೆರೆಕಂಡ ಅದ್ಭುತ ಸಿನಿಮಾ ವೀರಪ್ಪ ನಾಯಕ. ಟಿಎಸ್ ನಾಗಾಭರಣ ನಿರ್ದೇಶನ ಈ ಚಿತ್ರದಲ್ಲಿ ಡಾ ವಿಷ್ಣುವರ್ಧನ್, ಶ್ರುತಿ ಸೇರಿದಂತೆ ಹಲವರು ನಟಿಸಿದ್ದರು. ಭಾರತದ ತ್ರಿವರ್ಣ ಧ್ವಜದ ಕುರಿತು ಬಹಳ ಸುಂದರವಾಗಿ ಈ ಸಿನಿಮಾ ಪ್ರತಿಬಿಂಬಿಸಿದೆ.

    ಹಗಲು ವೇಷ

    ಹಗಲು ವೇಷ

    ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹಗಲು ವೇಷ ಸಿನಿಮಾ. 2000ನೇ ಇಸವಿಯಲ್ಲಿ ಈ ಸಿನಿಮಾ ತೆರೆಕಂಡಿತ್ತು. ಬ್ರಿಟಿಷರ ವಿರುದ್ಧ ದಂಗೆ ಏಳುವ ಹೋರಾಟಗಾರನ ಪಾತ್ರದಲ್ಲಿ ಶಿವರಾಜ್ ಕುಮಾರ್ ನಟಿಸಿದ್ದಾರೆ.

    ವಂದೇ ಮಾತರಂ

    ವಂದೇ ಮಾತರಂ

    2001ರಲ್ಲಿ ತೆರೆಕಂಡ ವಂದೇ ಮಾತರಂ ಸಿನಿಮಾ. ವಿಜಯಶಾಂತಿ, ಅಂಬರೀಶ್, ರವಿತೇಜ, ವಿನೋದ್ ರಾಜ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ದೇಶದ್ರೋಹಿಗಳ ವಿರುದ್ಧ ಹೋರಾಡವ ಪೊಲೀಸ್ ಹಾಗು ಯೋಧರ ಕಥೆ ಇದಾಗಿದೆ. ಓಂ ಪ್ರಕಾಶ್ ರಾವ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

    ಸೈನಿಕ

    ಸೈನಿಕ

    ನಟ-ರಾಜಕಾರಣಿ ಸಿಪಿ ಯೋಗೇಶ್ವರ್ ನಟಿಸಿರುವ ಸೈನಿಕ ಸಿನಿಮಾ ಸಹ ಇದೇ ಸಾಲಿನಲ್ಲಿ ಬರುತ್ತದೆ. 2002ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಯೋಗೇಶ್ವರ್ ಯೋಧನಾಗಿ ಕಾಣಿಸಿಕೊಂಡಿದ್ದಾರೆ.

    ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

    ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ

    2012ರಲ್ಲಿ ತೆರೆಕಂಡ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ. ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ, ಸ್ವಾತಂತ್ರ್ಯಹೋರಾಟಗಾರ ಸಂಗೊಳ್ಳಿ ರಾಯಣ್ಣನ ಕಥೆ. ದರ್ಶನ್ ರಾಯಣ್ಣನಾಗಿ ಕಾಣಿಸಿಕೊಂಡಿದ್ದರು. ನಾಗಣ್ಣ ಈ ಚಿತ್ರ ನಿರ್ದೇಶಿಸಿದ್ದರು.

    ಎಕೆ 47

    ಎಕೆ 47

    ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದ್ದರು ದೇಶಪ್ರೇಮದ ಸುತ್ತ ಮೂಡಿಬಂದಿರುವ ಚಿತ್ರ ಎಕೆ 47. ಶಿವರಾಜ್ ಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು.

    English summary
    Independence day 2020: The best patriotic kannada movies to watch.
    Saturday, August 15, 2020, 15:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X