For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ಅಮೃತ ಮಹೋತ್ಸವ; ತಾರೆಯರ ಧ್ವಜಾರೋಹಣ ಹೇಗಿತ್ತು?

  |

  ದೇಶಾದ್ಯಂತ ಬಹಳ ಸಡಗರ ಸಂಭ್ರಮದಿಂದ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದೆ. ಇಡೀ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಸಿನಿಮಾ ತಾರೆಯರು ಕೂಡ ಧ್ವಜಾರೋಹಣ ಮಾಡಿ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ನೆನೆದಿದ್ದಾರೆ.

  ಸಿನಿಮಾ ತಾರೆಯರು ಕೂಡ 'ಹರ್‌ ಘರ್‌ ತಿರಂಗಾ' ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ. ಕಳೆದೊಂದು ವಾರದಿಂದ ತಾರೆಯ ಮನೆಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ. ಸೋಶಿಯಲ್ ಮೀಡಿಯಾ ಖಾತೆಗಳ ಡಿಪಿಯಲ್ಲೂ ರಾಷ್ಟ್ರಧ್ಬಜ ನಳನಳಿಸುತ್ತಿದೆ. ಇನ್ನು ಇಂದು(ಆಗಸ್ಟ್ 15) ಸ್ವಾತಂತ್ರ್ಯ ದಿನೋತ್ಸವದ ಸಂಭ್ರಮದಲ್ಲಿ ಮನೆಗಳಲ್ಲಿ ಧ್ವಜಾರೋಹಣ ಮಾಡಿ ತಾರೆಯರು ಗಮನ ಸೆಳೆದಿದ್ದಾರೆ.

  ತಾರೆಯರ 'ವಂದೇ ಮಾತರಂ' ಗೀತೆ ಅದ್ಭುತ: ಉಪ್ಪಿ, ದರ್ಶನ್, ಯಶ್ ಯಾಕಿಲ್ಲ?ತಾರೆಯರ 'ವಂದೇ ಮಾತರಂ' ಗೀತೆ ಅದ್ಭುತ: ಉಪ್ಪಿ, ದರ್ಶನ್, ಯಶ್ ಯಾಕಿಲ್ಲ?

  ಬಾಲಿವುಡ್ ತಾರೆಯರು ಸಹ ಮನೆಗಳ ಮೇಲೆ ಧ್ವಜಾರೋಹಣ ಮಾಡಿದ್ದಾರೆ. ಶಾರುಖ್‌ ಖಾನ್, ಚಿರಂಜೀವಿ, ಅರ್ಜುನ್ ಸರ್ಜಾ, ಯಶ್‌ ಸೇರಿದಂತೆ ಸೂಪರ್ ಸ್ಟಾರ್‌ಗಳೆಲ್ಲಾ ಧ್ವಜಾರೋಹಣ ಮಾಡಿ, ರಾಷ್ಟ್ರ ಧ್ವಜ ಹಿಡಿದು ಗೌರವ ಸಲ್ಲಿಸಲಿದ್ದಾರೆ. ಮೈಸೂರಿನ ಶಕ್ತಿಧಾಮದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಟ ಶಿವರಾಜ್‌ಕುಮಾರ್ ದಂಪತಿ ಭಾಗಿ ಆಗಿದ್ದರು.

   ರಾತ್ರಿ 12 ಗಂಟೆಗೆ ಜಗ್ಗೇಶ್ ಧ್ವಜಾರೋಹಣ

  ರಾತ್ರಿ 12 ಗಂಟೆಗೆ ಜಗ್ಗೇಶ್ ಧ್ವಜಾರೋಹಣ

  ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ 'ಹರ್ ಘರ್ ತಿರಂಗಾ' ಅಭಿಯಾನದ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ದಿನಗಳಿಂದ ಈ ಬಗ್ಗೆ ಜಾಗೃತಿ ಮೂಡಿಸುತ್ತಾ ಬಂದಿದ್ದರು. ರಾತ್ರಿ 12 ಗಂಟೆಗೆ ರಾಜಾಜಿನಗರದಲ್ಲಿ ಅಭಿಮಾನಿ ಲೋಕೇಶ್ ನೇತೃತ್ವದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  ತಾರೆಯರ ಮನೆಮನಗಳಲ್ಲಿ ತ್ರಿವರ್ಣ ಧ್ವಜ: 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ತಾರೆಯರ ಸಾಥ್!ತಾರೆಯರ ಮನೆಮನಗಳಲ್ಲಿ ತ್ರಿವರ್ಣ ಧ್ವಜ: 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ತಾರೆಯರ ಸಾಥ್!

   ಯಶ್‌ ಮನೆ ಮೇಲೆ ರಾಷ್ಟ್ರಧ್ವಜ ಹಾರಾಟ!

  ಯಶ್‌ ಮನೆ ಮೇಲೆ ರಾಷ್ಟ್ರಧ್ವಜ ಹಾರಾಟ!

  ರಾಕಿಂಗ್ ಸ್ಟಾರ್ ಯಶ್‌ ತಮ್ಮ ಅಪಾರ್ಟ್‌ಮೆಂಟ್‌ ಮಹಡಿ ಮೇಲೆ ಕುಟುಂಬ ಸಮೇತ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಪತ್ನಿ ರಾಧಿಕಾ ಹಾಗೂ ಮಗಳು ಐರಾ, ಪುತ್ರ ಯಥರ್ವ್‌ ಸಾಥ್‌ ನೀಡಿದ್ದು, ಧ್ವಜ ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೊವನ್ನು ಶೇರ್ ಮಾಡಿರುವ ನಟ ಯಶ್‌, ಎಲ್ಲರಿಗೂ 75 ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಶುಭಾಶಯ ಕೋರಿದ್ದಾರೆ.

   ಕಾಶ್ಮೀರದಿಂದ ಮಾರ್ಟಿನ್ ಟೀಂ ಶುಭಾಶಯ

  ಕಾಶ್ಮೀರದಿಂದ ಮಾರ್ಟಿನ್ ಟೀಂ ಶುಭಾಶಯ

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ 'ಮಾರ್ಟಿನ್' ಸಿನಿಮಾ ಚಿತ್ರೀಕರಣಕ್ಕಾಗಿ ಕಾಶ್ಮೀರದಲ್ಲಿದ್ದಾರೆ. ಚಿತ್ರತಂಡ ಜೊತೆ ಸೇರಿ ಅಲ್ಲಿಂದಲೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಇನ್ನು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಅರ್ಜುನ್ ಸರ್ಜಾ ಮನೆ ಬಳಿ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

   ಕಿಂಗ್‌ ಖಾನ್ ಮನೆ ಮೇಲೆ ಧ್ವಜಾರೋಹಣ

  ಕಿಂಗ್‌ ಖಾನ್ ಮನೆ ಮೇಲೆ ಧ್ವಜಾರೋಹಣ

  ನಿನ್ನೆಯೇ(ಆಗಸ್ಟ್ 14) ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಮಕ್ಕಳ ಜೊತೆ ಸೇರಿ ಮನೆಯ ಮೇಲೆ ಧ್ವಜಾರೋಹಣ ಮಾಡಿದ್ದರು. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇತ್ತೀಚೆಗೆ ಸಲ್ಮಾನ್ ಖಾನ್ ನೌಕಾ ಪಡೆಯ ಅಧಿಕಾರಿಗಳ ಜೊತೆ ಕಾಣಿಸಿಕೊಂಡಿದ್ದರು. ಸೈನಿಕರ ಜೊತೆ ರಾಷ್ಟ್ರಧ್ವಜ ಹಿಡಿದು ಬೀಸಿದ್ದರು. ಆಮಿರ್ ಖಾನ್ ಮನೆಯ ಬಾಲ್ಕನಿಯಲ್ಲೂ ತ್ರಿವರ್ಣ ಧ್ವಜ ಹಾರಾಡುತ್ತಿದೆ. ವಿರಾಟ್ ಕೊಹ್ಲಿ ದಂಪತಿ, ಪ್ರೀತಿ ಜಿಂಟಾ, ಅನುಪಮ್ ಕೇರ್ ಸೇರಿದಂತೆ ಸಾಕಷ್ಟು ಜನ ಬಿಟೌನ್ ತಾರೆಯರು ಸೋಶಿಯಲ್ ಮೀಡಿಯಾದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

   ಧ್ವಜ ಹಿಡಿದು ಹಿಗ್ಗಿದ ಕನ್ನಡ ತಾರೆಯರು

  ಧ್ವಜ ಹಿಡಿದು ಹಿಗ್ಗಿದ ಕನ್ನಡ ತಾರೆಯರು

  ನಟಿ ಹರ್ಷಿಕಾ ಪೂಣಚ್ಚ ವಿಧಾನಸೌಧ ಎದುರು ತ್ರಿವರ್ಣ ಧ್ವಜ ಬೀಸಿ ಸಂಭ್ರಮಿಸಿದ್ದಾರೆ. ಆ ವಿಡಿಯೋ ಶೇರ್‌ ಮಾಡಿದ್ದಾರೆ. ಹಿರಿಯ ನಟಿ ತಾರಾ ಕೇಸರಿ ಬಿಳಿ ಹಸಿರು ಬಣ್ಣದ ಕಾಸ್ಟ್ಯೂಮ್‌ನಲ್ಲಿ ಧ್ವಜ ಹಿಡಿದು ಮಿಂಚಿದ್ದಾರೆ. ನೀನಾಸಂ ಸತೀಶ್, ಡಾಲಿ ಧನಂಜಯ, ನಿರ್ದೇಶಕ ಜೋಗಿ ಪ್ರೇಮ್, ನಟಿಯರಾದ ಆಶಾ ಭಟ್, ಕಾರುಣ್ಯಾರಾಮ್ ಸೇರಿದಂತೆ ಸಾಕಷ್ಟು ಕಲಾವಿದರು ರಾಷ್ಟ್ರಧ್ವಜ ಹಿಡಿದು ಶುಭಾಶಯ ಕೋರಿದ್ದಾರೆ.

   ಶುಭಾಶಯ ಕೋರಿದ ತಾರೆಯರು

  ಶುಭಾಶಯ ಕೋರಿದ ತಾರೆಯರು

  ಮೆಗಾಸ್ಟಾರ್‌ ಚಿರಂಜೀವಿ ಮನೆ ಮೇಲೆ ಧ್ವಜ ಕಟ್ಟಿ ಸೆಲ್ಯೂಟ್ ಮಾಡಿದರೆ, ಬಾಲಕೃಷ್ಣ ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿರುವ ಬಸವತಾರಕಂ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿ ಧ್ಜಜಾರೋಹಣ ಮಾಡಿದರು. ಇನ್ನು ಸಾಕಷ್ಟು ತೆಲುಗು ಕಲಾವಿದರು ಸೋಶಿಯಲ್‌ ಮೀಡಿಯಾದಲ್ಲಿ ದೇಶದ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ.

  Recommended Video

  ಸ್ಟಾರ್ ಆದ ಉಪೇಂದ್ರ , ದರ್ಶನ್ , ದುನಿಯಾ ವಿಜಯ್ ಸಾಥ್ ಕೊಡಲಿಲ್ಲ ಯಾಕೆ.? | Filmibeat Kannada
  English summary
  Independence Day 2022: Indian Cinema Celebrities Flag Hoisting. Know More.
  Monday, August 15, 2022, 16:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X