BREAKING: ದೇಶದಾದ್ಯಂತ ಎಲ್ಲಾ ಸಿನಿಮಾ, ಧಾರವಾಹಿ ಚಿತ್ರೀಕರಣ ಬಂದ್‌

ಕೊರೊನಾ ವೈರಸ್ ಭೀತಿ ವಿಶ್ವದ ಆರ್ಥಿಕತೆಯನ್ನು ಮಖಾಡೆ ಮಗಿಸಿಬಿಟ್ಟಿದೆ. ಷೇರು ಮಾರುಕಟ್ಟೆ ಪಾತಾಳದತ್ತ ಸರಿಯುತ್ತಿದೆ. ಈಗ ಮನೊರಂಜನಾ ಉದ್ಯಮಕ್ಕೂ ಭಾರಿ ಪೆಟ್ಟನ್ನು ಕೊರೊನಾ ನೀಡಿದೆ.

ಕೊರೊನಾ ಭೀತಿಯಿಂದಾಗಿ ಮಾರ್ಚ್ 19 ರಿಂದ ಮಾರ್ಚ್‌ 31 ರ ವರೆಗೂ ಎಲ್ಲಾ ಟಿವಿ ಧಾರವಾಹಿಗಳು, ಸಿನಿಮಾ, ಡಾಕ್ಯುಮೆಂಟರಿಗಳ ಚಿತ್ರೀಕರಣವನ್ನು ರದ್ದು ಮಾಡಲಾಗಿದೆ.

ಐಎಂಪಿಪಿಎ, ಎಫ್‌ಡಬ್ಲುಐಸಿಇ, ಐಎಫ್‌ಟಿಡಿಎ, ಐಎಫ್‌ಟಿಪಿಸಿ, ಡಬ್ಲುಐಎಫ್‌ಪಿಎ (IMPPA, FWICE, IFTDA, IFTPC, WIFPA) ಸಂಘಗಳು ಭಾನುವಾರ ಒಟ್ಟಿಗೆ ಸಭೆ ನಡೆಸಿ ಈ ನಿರ್ಣಯಕ್ಕೆ ಬಂದಿವೆ.

ನಿರ್ಮಾಪಕರಿಗೆ ಮೂರು ದಿನಗಳ ಕಾಲಾವಕಾಶ

ನಿರ್ಮಾಪಕರಿಗೆ ಮೂರು ದಿನಗಳ ಕಾಲಾವಕಾಶ

ಚಿತ್ರತಂಡಗಳು ಚಿತ್ರೀಕರಣವನ್ನು ಬಂದ್ ಮಾಡಲು ಮೂರು ದಿನಗಳ ಅವಕಾಶವನ್ನು ಈ ಸಂಘಟನೆಗಳ ಒಕ್ಕೂಟ ನೀಡಿದ್ದು, ಎಲ್ಲಾ ನಿರ್ಮಾಪಕರು ಇನ್ನು ಮೂರು ದಿನಗಳ ಒಳಗಾಗಿ ಭಾರತ ಮತ್ತು ವ ವಿದೇಶದಲ್ಲಿ ನಡೆಯುತ್ತಿರುವ ಚಿತ್ರೀಕರಣವನ್ನು ಬಂದ್ ಮಾಡಬೇಕು ಎಂದು ಸೂಚನೆ ನೀಡಿದೆ.

ಹಣಕ್ಕಿಂತಲೂ ಆರೋಗ್ಯ ಹೆಚ್ಚು ಅವಶ್ಯಕ: ದುಬೆ

ಹಣಕ್ಕಿಂತಲೂ ಆರೋಗ್ಯ ಹೆಚ್ಚು ಅವಶ್ಯಕ: ದುಬೆ

ಸಿನಿಮಾಗಳಿಗೆ ಕೆಲಸ ಮಾಡುವ ದಿನಗೂಲಿ ನೌಕರರ ಸಂಘದ ಅಧ್ಯಕ್ಷ ದುಬೆ ಮಾತನಾಡಿ, ''25 ಲಕ್ಷಕ್ಕೂ ಹೆಚ್ಚು ಮಂದಿ ದಿನಗೂಲಿ ಲೆಕ್ಕದಲ್ಲಿ ಸಿನಿಮಾ-ಧಾರವಾಹಿಗಳಿಗೆ ಕೆಲಸ ಮಾಡುತ್ತಾರೆ. ಆದರೆ ಎಲ್ಲದಕ್ಕಿಂತಲೂ ಆರೋಗ್ಯವೇ ಮುಖ್ಯ ಎಂಬ ಕಾರಣಕ್ಕೆ ಈ ಬಂದ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ'' ಎಂದಿದ್ದಾರೆ.

ಸಿನಿಮಾ ಧಾರವಾಹಿಗಳಲ್ಲಿ ದಿನಗೂಲಿ ನೌಕರರೇ ಹೆಚ್ಚು

ಸಿನಿಮಾ ಧಾರವಾಹಿಗಳಲ್ಲಿ ದಿನಗೂಲಿ ನೌಕರರೇ ಹೆಚ್ಚು

ಸಿನಿಮಾ ಧಾರವಾಹಿಗಳಲ್ಲಿ ದಿನಗೂಲಿ ಲೆಕ್ಕದಲ್ಲಿ ಲಕ್ಷಾಂತರ ನೌಕರರು ಕೆಲಸ ಮಾಡುತ್ತಾರೆ. ಜ್ಯೂನಿಯರ್ ಆರ್ಟಿಸ್ಟ್, ಲೈಟ್ ಬಾಯ್, ಸೆಟ್ ಕ್ಲೀನರ್, ಡಾನ್ಸರ್ಸ್, ಸಾಹಸ ಕಲಾವಿದರು, ಸ್ಟಂಟ್ ಕಲಾವಿದರು, ಮೇಕಪ್ ಆರ್ಟಿಸ್ಟ್, ಅಡುಗೆಯವರು, ವಾಹನ ಚಾಲಕರು ಹೀಗೆ ಹಲವು ಮಂದಿ ಸಿನಿಮಾ-ಧಾರವಾಹಿಗಳಿಗೆ ಕೆಲಸ ಮಾಡುತ್ತಿರುತ್ತಾರೆ. ಕೊರೊನಾ ಇವರೆಲ್ಲರ ದಿನವಹಿ ನೌಕರಿಯನ್ನು ಕಿತ್ತುಕೊಂಡಿದೆ.

ಹಲವು ಚಿತ್ರಗಳ ಶೂಟಿಂಗ್ ನಡೆಯುತ್ತಿತ್ತು

ಹಲವು ಚಿತ್ರಗಳ ಶೂಟಿಂಗ್ ನಡೆಯುತ್ತಿತ್ತು

ಈಗಾಗಲೇ ಹಲವು ಸ್ಟಾರ್ ನಾಯಕರು ವಿದೇಶಗಳಲ್ಲಿದ್ದ ತಮ್ಮ ಚಿತ್ರೀಕರಣವನ್ನು ರದ್ದು ಮಾಡಿದ್ದಾರೆ. ಆದರೆ ಹಲವರು ಸ್ವದೇಶದಲ್ಲಿ ಶೂಟಿಂಗ್‌ ನಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಮಾರ್ಚ್ 19 ರಿಂದ ಆ ಚಿತ್ರೀಕರಣಗಳೂ ಬಂದ್ ಆಗಲಿದೆ. ಧಾರವಾಹಿ ಚಿತ್ರೀಕರಣ ಬಂದ್ ಆಗಲಿರುವುದು ಟಿವಿಗಳ ಮೇಲೂ ಪ್ರಭಾವ ಬೀರಲಿದೆ.

More from Filmibeat

English summary
All movie and serial shooting wil be stop from March 19 to March 30 due to coronavirus scare.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X