ಹುತಾತ್ಮ ಭಾರತೀಯ ಯೋಧರಿಗೆ ಸಿನಿತಾರೆಯರ ಗೌರವ ನಮನ

ಪೂರ್ವ ಲಡಾಖ್ ಗಡಿಯ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸೋಮವಾರ ತಡರಾತ್ರಿ ನಡೆದ ಸಂಘರ್ಷದಲ್ಲಿ ಭಾರತೀಯ ಸೇನಾ ಸಿಬ್ಬಂದಿಯನ್ನು ಹತ್ಯಗೈಯಲಾಗಿದೆ.

Recommended Video

ಮಾದ್ಯಮಗಳಿಗೆ ವಿಶೇಷವಾದ ಮನವೆನ್ನ ಮಾಡಿಕೊಂಡ ಸರ್ಜಾ ಕುಟುಂಬ | Chiranjeevi Sarja | Arjun Sarja | Dhruva Sarja

ಹುತಾತ್ಮರಾಗಿರುವ ಭಾರತೀಯ ಯೋಧರಿಗೆ ಸಿನಿತಾರೆಯರು ಗೌರವ ನಮನ ಸಲ್ಲಿಸಿದ್ದಾರೆ. ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ಹೃತಿಕ್ ರೋಷನ್, ಅಮಿತಾಬ್ ಬಚ್ಚನ್, ಅಜಯ್ ದೇವಗನ್ ಸೇರಿದ್ದಂತೆ ಅನೇಕ ಸಿನಿತಾರೆಯರು ಗೌರವ ಸಲ್ಲಿಸಿದ್ದಾರೆ. ಮುಂದೆ ಓದಿ...

ಅಜಯ್ ದೇವಗನ್

ಅಜಯ್ ದೇವಗನ್

"ಭಾರತಕ್ಕಾಗಿ ಪ್ರಾಣವನ್ನೆ ಅರ್ಪಿಸಿದ ಪ್ರತಿಯೊಬ್ಬ ಸೈನಿಕರಿಗೂ ಪ್ರತಿಯೊಬ್ಬ ಸೈನಿಕರಿಗೂ ನನ್ನ ಸೆಲ್ಯೂಟ್. ಜೈ ಜವಾನ್, ಜೈ ಭಾರತ್" ಎಂದು ಟ್ವೀಟ್ ಮಾಡಿದ್ದಾರೆ.

ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್

"ಗಲ್ವಾನ್ ವ್ಯಾಲಿಯಲ್ಲಿ ನಮ್ಮ ಧೈರ್ಯಶಾಲಿ ಯೋಧರ ಸಾವಿನಿಂದ ತೀವ್ರ ದುಃಖವಾಗಿದೆ. ರಾಷ್ಟ್ರಕ್ಕಾಗಿ ಅವರು ಮಾಡಿದ ಸೇವೆ ಅಮೂಲ್ಯ ಸೇವೆ ಗಾಗಿ ನಾವು ಶಾಶ್ವತ ಋಣಿ. ಅವರ ಕುಟುಂಬಕ್ಕೆ ನನ್ನ ಸಂತಾಪ"ಎಂದು ಅಕ್ಷಯ್ ಕಮಾರ್ ಟ್ವೀಟ್ ಮಾಡಿದ್ದಾರೆ.

ಹೃತಿಕ್ ರೋಷನ್

ಹೃತಿಕ್ ರೋಷನ್

ಲಡಾಖ್ ನಲ್ಲಿ ನಾವು ಯೋಧರನ್ನು ಕಳೆದುಕೊಂಡಿರುವುದು ತುಂಬಾ ದುಃಖವಾಗುತ್ತಿದೆ. ನಮ್ಮ ರಕ್ಷಣ ನೆಲದ ಮೇಲೆ ಎತ್ತರವಾಗಿ ನಿಂತಿದೆ. ಹುತಾತ್ಮ ಯೋಧರಿಗೆ ನನ್ನ ಅತ್ಯುತನ್ನತ ಗೌರವ. ಅವರ ಕುಟುಂಬಕ್ಕೆ ನನ್ನ ಸಂತಾಪ. ದುಃಖ ಭರಿಸುವ ಶಕ್ತಿ ನೀಡಲಿ" ಎಂದು ಹೃತಿಕ್ ರೋಷನ್ ಟ್ವೀಟ್ ಮಾಡಿದ್ದಾರೆ.

ಅಭಿಷೇಕ್ ಬಚ್ಚನ್

ಅಭಿಷೇಕ್ ಬಚ್ಚನ್

ಗಲ್ವಾನ್ ದಾಳಿಯಲ್ಲಿ ಹುತಾತ್ಮರಾದ ನಮ್ಮ ಸೈನಿಕರಿಗೆ ನನ್ನ ಸೆಲ್ಯೂಟ್. ಅವರ ಕುಟುಂಬಕ್ಕೆ, ಸಹೋದ, ಸಹೋದರಿಯರಿಗೆ ಸಂತಾಪ" ಎಂದು ಹೇಳಿದ್ದಾರೆ.

ಮಹೇಶ್ ಬಾಬು

ಮಹೇಶ್ ಬಾಬು

ಗಲ್ವಾನ್ ದಾಳಿಯಲ್ಲಿ ಹುತಾತ್ಮರಾಗಿರುವುದು ತಿಳಿದು ತೀವ್ರ ದುಃಖವಾಗಿದೆ. ರಾಷ್ಟ್ರಕ್ಕಾಗಿ ನೀವು ಮಾಡಿದ ತ್ಯಾಗ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ನಿಮ್ಮ ಶೌರ್ಯ ಮತ್ತು ದೇಶಪ್ರೇಮಕ್ಕೆ ನಮ್ಮ ಸೆಲ್ಯೂಟ್. ದುಃಖಿತ ಕುಟುಂಬಕ್ಕೆ ನನ್ನ ಸಂತಾಪ" ಎಂದು ನಟ ಮಹೇಶ್ ಬಾಬು ಹೇಳಿದ್ದಾರೆ.

ಪ್ರಣೀತಾ ಸುಭಾಷ್

ಪ್ರಣೀತಾ ಸುಭಾಷ್

"ಗಲ್ವಾನ್ ವ್ಯಾಲಿಯಲ್ಲಿ ನಮ್ಮ 20 ಯೋಧರು ಹುತಾತ್ಮರಾಗಿದ್ದಾರೆ. ಸಾಂಕ್ರಮಿಕ, ಚಂಡಮಾರುತ, ಮಿಡತೆಗಳ ದಾಳಿ, ಪಾಕಿಸ್ತಾನ ಭಯೋತ್ಪಾದನೆ, ಆರ್ಥಿಕ ಕುಸಿತ ಈಗ ಚೀನಾ ದಾಳಿ. ಇಂತಹ ಪರೀಕ್ಷಾ ಸಮಯದಲ್ಲಿ ಭಾರತ ಈಗ ಒಂದುಗೂಡಬೇಕು" ಎಂದು ಹೇಳಿದ್ದಾರೆ.

ಅಮಿತಾಬ್ ಬಚ್ಚನ್

ಅಮಿತಾಬ್ ಬಚ್ಚನ್

"ಅವರು ನಮ್ಮ ದೇಶವನ್ನು ರಕ್ಷಿಸಲು, ನಮ್ಮನ್ನು ಸುರಕ್ಷಿತವಾಗಿ ಇಡಲು ನಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಭಾರತೀಯ ಸೇನಾಧಿಕಾರಿಗಳು ಮತ್ತು ಸೈನಿಕರಿಗೆ ನನ್ನ ಸೆಲ್ಯೂಟ್" ಎಂದು ಅಮಿತಾಬ್ ಬಚ್ಚನ್ ಹೇಳಿದ್ದಾರೆ.

More from Filmibeat

English summary
Indian film stars Amitabh Bachchan, Hrithik Roshan, Akshy Kumar and others pay tribute soldiers martyred.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X