Don't Miss!
- News
Breaking: ಸಿಬಿಐನಿಂದ ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ ಬಂಧನ
- Automobiles
ವಿಶ್ವದ ಅತಿ ಎತ್ತರ ಪ್ರದೇಶಕ್ಕೆ ತಲುಪಿ ತನ್ನ ಸಾಮರ್ಥ್ಯ ಸಾಬೀತುಪಡಿಸಿಕೊಂಡ ಹಂಟರ್ 350
- Sports
ವಾಷಿಂಗ್ಟನ್ ಸುಂದರ್ಗೆ ಮತ್ತೆ ಇಂಜ್ಯುರಿ: ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ಔಟ್?
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 V/S ಗ್ಯಾಲಕ್ಸಿ Z ಫೋಲ್ಡ್ 3: ಏನಿದೆ ಹೊಸತು?
- Finance
ಷೇರುಪೇಟೆ ಚೇತರಿಕೆ: ಯಾವೆಲ್ಲಾ ಷೇರುಗಳು ಏರಿಕೆ?
- Lifestyle
ಸ್ವಲ್ಪ ಜಾಸ್ತಿ ಉಪ್ಪು ಬಳಸುತ್ತೀರಾ? ಡೇಂಜರ್...ಡೇಂಜರ್!
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
ಸಿನಿಮಾ ಉದ್ಯಮದಲ್ಲಿ ಸೃಜನಶೀಲತೆಯನ್ನು ಹೆಚ್ಚಾಗಿ ತೋರಿಸಬಹುದು. ಆದರೆ ಅವುಗಳಲ್ಲಿ ಕೆಲವು ವಿವಾದಕ್ಕೂ ಎಡೆಮಾಡಿಕೊಡುತ್ತವೆ. ಅಂತೆಯೇ ಈಗ ಹೊಸದಾಗಿ 'ಕಾಳಿ' ಎಂಬ ಸಿನಿಮಾದ ವಿಷಯದಲ್ಲಿ ವಿವಾದ ಸೃಷ್ಟಿ ಆಗಿದೆ.
ಲೀನಾ ಮಣಿಮೇಕಲೈ 'ಕಾಳಿ' ಎಂಬ ಸಾಕ್ಷ್ಯ ಚಿತ್ರವನ್ನು ನಿರ್ಮಿಸಿದ್ದಾರೆ. ಪೋಸ್ಟ್ನಿಂದಾಗಿ ಪೇಚಿಗೆ ಸಿಲುಕುವಂತಾಗಿದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಕಾಳಿ ಮಾತೆ ಕೈಯಲ್ಲಿ ಸಿಗರೇಟು ಮತ್ತು ಎಲ್ಜಿಬಿಟಿ ಧ್ವಜ ಇದೆ. ಹಾಗಾಗಿ ಇದು ವಿವಾದಕ್ಕೆ ಕಾರಣವಾಗಿದ್ದು, ಹಲವರು ಇದನ್ನು ವಿರೋಧಿಸಿದ್ದಾರೆ.
ದರ್ಶನ್
ಸೋ
ನೈಸ್,
ರಾಕಿ
ಭಾಯ್
ನಾಟ್
ಮೈ
ಬಾಯ್
ಎಂದಳು
ಸನ್ನಿಲಿಯೋನಿ!
ಈಗ ಈ ವಿವಾದ ಮತ್ತೊಂದು ಹಂತಕ್ಕೆ ಹೋಗಿದ್ದು, ಸರ್ಕಾರದ ಗಮನ ಸೆಳೆದಿದೆ. ಕೆನಡಾದಲ್ಲಿ ಇರುವ ಭಾರತೀಯ ಹೈಕಮಿಷನ್ ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದು, ಪೋಸ್ಟರ್ ತೆಗೆದು ಹಾಕುವಂತೆ ಒತ್ತಾಯಿಸಿದೆ.

ಪೋಸ್ಟರ್ ತೆಗೆಯಲು ಹೈಕಮಿಷನ್ ಕೋರಿಕೆ!
ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಸೋಮವಾರ 'ಕಾಳಿ' ಧೂಮಪಾನ ಮಾಡುತ್ತಿರುವ ಪೋಸ್ಟರ್ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಸಾಕ್ಷ್ಯಚಿತ್ರ ನಿರ್ಮಾಪಕಿ ಲೀನಾ ಮಣಿಮೆಕಲೈ ಅವರಿಗೆ ಪೋಸ್ಟರ್ ತೆಗೆಯುವಂತೆ ಹೇಳಿದೆ. ಕೆನಡಾದ ಅಧಿಕಾರಿಗಳು ಮತ್ತು ಕಾರ್ಯಕ್ರಮದ ಆಯೋಜಕರು, ಇಂತಹ ಪ್ರಚೋದನಕಾರಿ ವಸ್ತುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಅರ್ಧ
ವರ್ಷ
ಬಾಲಿವುಡ್
ಬಾಕ್ಸಾಫೀಸ್
ಕಥೆಯೇನು?
KGF
2,
RRR,
ದಿ
ಕಾಶ್ಮೀರ್
ಫೈಲ್ಸ್ನದ್ದೇ
ಸದ್ದು!
|
ಹೇಳಿಕೆಯಲ್ಲಿ ಇರುವುದೇನು?
ಹೈಕಮಿಷನ್ ಹೊರಡಿಸಿರುವ ಹೇಳಿಕೆಯಲ್ಲಿ "ಅಗಾಖಾನ್ ಮ್ಯೂಸಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರದ ಪೋಸ್ಟರ್ನಲ್ಲಿ ಹಿಂದೂ ದೇವರನ್ನು ಅಗೌರವಯುತವಾಗಿ ಚಿತ್ರಿಸಿರುವ ಬಗ್ಗೆ, ಕೆನಡಾದ ಹಿಂದೂ ಸಮುದಾಯದ ಮುಖಂಡರಿಂದ ದೂರುಗಳನ್ನು ಸ್ವೀಕರಿಸಲಾಗಿದೆ. ಜೊತೆಗೆ ಕೆನಡಾದ ಹಲವು ಹಿಂದೂ ಗುಂಪುಗಳು ಈ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ಸಂಪರ್ಕಿಸಿವೆ ಎಂದು ನಮಗೆ ತಿಳಿಸಲಾಗಿದೆ. ಕೆನಡಾದ ಅಧಿಕಾರಿಗಳು ಮತ್ತು ಈವೆಂಟ್ ಆಯೋಜಕರು ಇಂತಹ ಎಲ್ಲಾ ಪ್ರಚೋದನಕಾರಿ ವಸ್ತುಗಳನ್ನು ಹಿಂತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ" ಎಂದು ಹೇಳಿಕೆಯಲ್ಲಿ ನಮೂದಿಸಲಾಗಿದೆ.

ಏನಿದು ಕಾಳಿ ವಿವಾದ?
ಚಿತ್ರ ನಿರ್ಮಾಪಕಿ ಲೀನಾ ಮಣಿಮೆಕಲೈ 'ಕಾಳಿ' ಸಾಕ್ಷ್ಯ ಚಿತ್ರದ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿದೆ. ಈ ಪೋಸ್ಟರ್ನಲ್ಲಿ ಕಾಳಿ ದೇವಿಯ ವೇಷ ಭೂಷಣವನ್ನು ಧರಿಸಿರುವ ಮಹಿಳೆ ಇದ್ದಾಳೆ. ಪೋಸ್ಟರ್ನಲ್ಲಿ ಆಕೆ ಸಿಗರೇಟ್ ಸೇದುತ್ತಿರುವುದನ್ನು ಕಾಣಬಹುದು. ಜೊತಗೆ ಕೈಯಲ್ಲಿ ತ್ರಿಶೂಲ, ಮತ್ತು ಕುಡಗೋಲು ಇವೆ. ಹಾಗೆ ದೇವತೆಯಾಗಿ ನಟಿಸುವ ಕಲಾವಿದೆಯ ಕೈಯಲ್ಲಿ LGBTQ+ ಸಮುದಾಯದ ಹೆಮ್ಮೆಯ ಧ್ವಜವನ್ನು ಹಿಡಿದಿರುವುದನ್ನು ತೋರಿಸಲಾಗಿದೆ.
ವಿವಾಹಪೂರ್ವ
ಲೈಂಗಿಕತೆ
ಬಗ್ಗೆ
ನಟಿ
ದಿಯಾ
ಮಿರ್ಜಾ
ಮಾತು
|
ಚಿತ್ರ ನೋಡಿ ಎಂದ ಲೀನಾ ಮಣಿಮೆಕಲೈ!
ಲೀನಾ ಮಣಿಮೆಕಲೈ ಪೋಸ್ಟರ್ ಹಂಚಿಕೊಂಡ ಕೂಡಲೇ, ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ತೆಗೆದು ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ವಿವಾದ ಭುಗಿಲೆದ್ದ ಮೇಲೆ ನಿರ್ಮಾಪಕಿ, ಲೀನಾ ಮಣಿಮೆಕಲೈ, ಟೀಕಿಸುವ ಮೊದಲು ಚಿತ್ರವನ್ನು ಮೊದಲು ನೋಡಿ ಎಂದು ಕೇಳಿಕೊಂಡಿದ್ದಾರೆ. ಈ ಪೋಸ್ಟರ್ ವಿವಾದ ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಸಾಕ್ಷ್ಯ ಚಿತ್ರದಲ್ಲಿ ಏನಿರಬಹುದು ಎನ್ನುವ ಪ್ರಶ್ನೆಯನ್ನೂ ಕೂಡ ಹುಟ್ಟಾಕಿದೆ.