ಅಮಿತಾಬ್ ಬಚ್ಚನ್ ಕನ್ನಡಕ ಕಳೆದು ಹೋಗಿದೆ: ಶಿವಣ್ಣ ನಿಮಗೆ ಸಿಕ್ಕಿತಾ?

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಕಪ್ಪು ಕನ್ನಡದ ಕಳೆದು ಹೋಗಿದೆ. ಬಚ್ಚನ್ ಅವರ ಕನ್ನಡಕವನ್ನು ಶಿವರಾಜ್ ಕುಮಾರ್, ರಜನೀಕಾಂತ್, ಚಿರಂಜೀವಿ, ಮುಮ್ಮುಟಿ ಸೇರಿ ಸ್ಟಾರ್ ನಟರೆಲ್ಲಾ ಹುಡುಕುತ್ತಿದ್ದಾರೆ!

Recommended Video

ಬೋರ್ ಆಯ್ತು ಎಂದು ಆಚೆ ಬರಬೇಡಿ ಎಂದ ಡಾಲಿ ಧನಂಜಯ್ | Dolly Dhananjay | Stay Home Stay Safe|Filmibeat Kannada

ಅಮಿತಾಬ್ ಬಚ್ಚನ್ ಅವರ ಅವರ ಕನ್ನಡಕ ಕಳೆದು ಹೋಗಿದ್ದು, ಅದನ್ನು ಹುಡುಕುವ ಜವಾಬ್ದಾರಿಯನ್ನು ರಣಬೀರ್ ಕಪೂರ್, ಬಾದ್‌ಶಾ ಹೊತ್ತುಕೊಂಡಿದ್ದು, ಶಿವರಾಜ್ ಕುಮಾರ್ ಅವರ ಬಳಿಯೂ ವಿಚಾರಣೆ ನಡೆಸಿದ್ದಾರೆ.

ಏನಪ್ಪಾ ಇದು, ಅಮಿತಾಬ್ ಬಚ್ಚನ್ ಕನ್ನಡದ ಕಳೆದುಕೊಳ್ಳುವುದೇನು, ಶಿವರಾಜ್ ಕುಮಾರ್‌ ಗೂ ಅದಕ್ಕೂ ಏನು ಸಂಬಂಧ ಎಂದುಕೊಳ್ಳಬೇಡಿ, ಹೀಗೊಂದು ಸಣ್ಣ ವಿಡಿಯೋ ತುಣಕನ್ನು ಸ್ಟಾರ್ ನಟರೆಲ್ಲಾ ಸೇರಿ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ.

ಶಿವಣ್ಣನನ್ನು ಕೇಳುವ ರಣಬೀರ್ ಕಪೂರ್

ಶಿವಣ್ಣನನ್ನು ಕೇಳುವ ರಣಬೀರ್ ಕಪೂರ್

ಭಾರತೀಯ ಸ್ಟಾರ್ ನಟರೆಲ್ಲಾ ಸೇರಿ ಸಣ್ಣ ವಿಡಿಯೋ ಮಾಡಿದ್ದು, ಅದರಲ್ಲಿ ಅಮಿತಾಬ್ ಬಚ್ಚನ್ ಕಪ್ಪು ಕನ್ನಡಕ ಕಳೆದು ಹೋಗುತ್ತದೆ. ಕನ್ನಡಕಕ್ಕಾಗಿ ರಣಬೀರ್ ಕಪೂರ್ ಅವರು, ಶಿವರಾಜ್ ಕುಮಾರ್, ಮುಮ್ಮುಟಿ, ರಜನೀಕಾಂತ್, ಮೋಹನ್‌ ಲಾಲ್, ಚಿರಂಜೀವಿ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ದಿಲ್ಜೀತ್ ದೊಸಾಂಜ್, ಪ್ರೊಸೆಂಜೀತ್ ಚಟರ್ಜಿ, ಸೊನಾಲಿ ಕುಲಕರ್ಣಿ ಅವರನ್ನೆಲ್ಲಾ ಕೇಳುತ್ತಾರೆ. ಹೀಗೆ ಸಾಗುತ್ತದೆ ಈ ಕಿರು ಚಿತ್ರ.

ಲೈಬ್ರೆರಿಯಲ್ಲಿ ಪುಸ್ತಕದೊಂದಿಗೆ ಶಿವಣ್ಣ

ಲೈಬ್ರೆರಿಯಲ್ಲಿ ಪುಸ್ತಕದೊಂದಿಗೆ ಶಿವಣ್ಣ

ರಣಬೀರ್ ಅವರು ಶಿವಣ್ಣ ಅವರನ್ನು ಕನ್ನಡಕ್ಕಾಗಿ ಕೇಳಿದಾಗ ಲೈಬ್ರೆರಿಯಲ್ಲಿ ನಿಂತ ಶಿವಣ್ಣ, 'ಮೊದಲೇ ಕಳೆದು ಹೋದ ಕನ್ನಡಕವನ್ನು ನಾನು ಹೇಗೆ ಹುಡುಕಲಿ, ಮೊದಲು ನೀನು ಹುಡುಕು ಆಮೇಲೆ ನಾನು ಹುಡುಕಲಿ' ಎನ್ನುತ್ತಾರೆ. ವಿಶೇಷವೆಂದರೆ ಶಿವಣ್ಣನನ್ನು ಮಾವ ಎನ್ನುತ್ತಾರೆ.

ಕೊನೆಗೆ ಕನ್ನಡಕ ಸಿಗುವುದು ಎಲ್ಲಿ?

ಕೊನೆಗೆ ಕನ್ನಡಕ ಸಿಗುವುದು ಎಲ್ಲಿ?

ರಜನೀಕಾಂತ್, ಮೋಹನ್‌ ಲಾಲ್, ಮುಮ್ಮಟಿ, ಚಿರಂಜೀವಿ ಯಾರೂ ಅಮಿತಾಬ್ ಕನ್ನಡಕ ನೋಡಿಲ್ಲ. ಕೊನೆಗೆ ಕನ್ನಡಕ ದೊರೆಯುವುದು ಆಲಿಯಾ ಭಟ್ ತಲೆ ಮೇಲೆ! ಅದನ್ನು ಅಮಿತಾಬ್ ಗೆ ಯಾರು ಕೊಡಬೇಕೆಂಬ ಜಗಳ ಶುರುವಾಗುತ್ತದೆ. ಕೊನೆಗೆ ಪ್ರಿಯಾಂಕಾ ಚೋಪ್ರಾ ಕನ್ನಡಕವನ್ನು ಅಮಿತಾಬ್ ಅವರಿಗೆ ತಲುಪಿಸುತ್ತಾರೆ.

ಒಂದೇ ಕಡೆ ಸೇರಿ ಚಿತ್ರೀಕರಣ ಮಾಡಿದರೆ?

ಒಂದೇ ಕಡೆ ಸೇರಿ ಚಿತ್ರೀಕರಣ ಮಾಡಿದರೆ?

ಒಂದೇ ಮನೆಯಲ್ಲಿ ನಡೆದಂತೆ ಈರುವ ಈ ಕಿರು ಚಿತ್ರ ಅಸಲಿಗೆ ಬೇರೆ ಬೇರೆ ಸ್ಥಳಗಳಲ್ಲಿ ಚಿತ್ರೀಕರಣವಾಗಿದೆ. ಕಿರುಚಿತ್ರದಲ್ಲಿರುವ ಎಲ್ಲಾ ನಟರು ಅವರವರ ಮನೆಗಳಲ್ಲೇ ಇದ್ದು ಈ ವಿಡಿಯೋ ಮೊಬೈಲ್‌ನಲ್ಲೇ ಶೂಟ್ ಮಾಡಿದ್ದಾರೆ. ಅದನ್ನು ಒಟ್ಟು ಮಾಡಿ ಕಿರು ಚಿತ್ರವನ್ನಾಗಿಸಲಾಗಿದೆ.

ಭಾರತೀಯ ಸಿನಿಮಾ ಕುಟುಂಬ ಒಂದೇ

ಭಾರತೀಯ ಸಿನಿಮಾ ಕುಟುಂಬ ಒಂದೇ

ಮನೆಯಲ್ಲೇ ಇರಿ ಎಂದು ಸೂಚ್ಯವಾಗಿ ಹೇಳುವ ವಿಡಿಯೋ ಇದಾಗಿದೆ. ಅಷ್ಟೆ ಅಲ್ಲದೆ, ಸಿನಿಮಾ ಹಿಂದೆ ಕೆಲಸ ಮಾಡುವ ದಿನಗೂಲಿ ನೌಕರರಿಗೆ, ಬಡ ಕಾರ್ಮಿಕರಿಗೆ ಸಹಾಯ ಮಾಡುವ ಉದ್ದೇಶದಿಂದ, ಅವರೊಂದಿಗೆ ನಾವಿದ್ದದೇವೆ, ಹಾಗೂ ಭಾರತೀಯ ಸಿನಿಮಾ ಉದ್ಯಮ ಒಂದೇ ಕುಟುಂಬ ಎಂದು ತೋರಿಸುವ ಉದ್ದೇಶದಿಂದ ಈ ಕಿರು ಚಿತ್ರ ನಿರ್ಮಿಸಲಾಗಿದೆ.

More from Filmibeat

English summary
Indian movie stars of all languages made a short movie. All actors shoot movie being in teir homes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X