ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!

Recommended Video

KGF Kannada Movie : ಡ್ರೈವರ್ ಮಗನ ಸಾಧನೆ ಕಂಡು ರಾಜಮೌಳಿ ಮುತ್ತಿನಂಥ ಮಾತು | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿ, ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಸಿನಿಮಾ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದೆ. ಕನ್ನಡ ಸಿನಿಮಾವೊಂದು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.

ಆರಂಭದಲ್ಲಿ ಕೆಜಿಎಫ್ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರ ಬರುವ ಯೋಚನೆಯಲ್ಲಿತ್ತು. ಅದೇ ರೀತಿ ಎರಡು ಚಾಪ್ಟರ್ ಬದಲು ಒಂದೇ ಸಿನಿಮಾವಾಗಿ ತಯಾರಾಗುತ್ತಿತ್ತು. ಆದ್ರೆ, ಚಿತ್ರದ ಮೇಕಿಂಗ್, ಕಥೆಯಲ್ಲಿದ್ದ ರೋಚಕತೆ ನಿರ್ದೇಶಕರ ಜಾಣ್ಮೆಯಿಂದ ಈಗ ಎರಡು ಚಾಪ್ಟರ್ ಮತ್ತು ಬಹುಭಾಷೆಯಲ್ಲಿ ಸಿದ್ಧವಾಗಿದೆ.

ಅಂದ್ಹಾಗೆ, ಕನ್ನಡದ ಸಿನಿಮಾವೊಂದು ಈಗ ಹೊರರಾಜ್ಯಗಳಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಹಿಂದಿ ಮತ್ತು ತೆಲುಗಿನಲ್ಲಂತೂ ತಮ್ಮದೇ ಸಿನಿಮಾ ಎಂಬ ಪ್ರಚಾರ ಸಿಕ್ತಿದೆ. ರಿಲೀಸ್ ಗೂ ಮುಂಚೆ ಇಷ್ಟು ಸೌಂಡ್ ಮಾಡ್ತಿರುವ ಕೆಜಿಎಫ್ ಗೆ ಒಬ್ಬ ವ್ಯಕ್ತಿ ಸಹಾಯ ಮಾಡಿದ್ದಾರೆ. ಈ ವ್ಯಕ್ತಿ ನೀಡಿದ ಸಣ್ಣ ನೆರವಿನಿಂದ ಕೆಜಿಎಫ್ ಗಡಿದಾಟಿ ನಿಂತಿದೆ. ಅಷ್ಟಕ್ಕೂ, ಯಾರು ಆ ವ್ಯಕ್ತಿ. ಅವರು ಮಾಡಿದ ಸಹಾಯವೇನು? ಮುಂದೆ ಓದಿ.....

ರಾಜಮೌಳಿಯ ಗಮನ ಸೆಳೆದಿದ್ದ ಕೆಜಿಎಫ್

ರಾಜಮೌಳಿಯ ಗಮನ ಸೆಳೆದಿದ್ದ ಕೆಜಿಎಫ್

ಅದಾಗಲೇ 'ಬಾಹುಬಲಿ' ಎಂಬ ಮೆಗಾ ಸಿನಿಮಾವನ್ನ ಮಾಡಿ ಜಗತ್ತಿನ ಗಮನ ಸೆಳೆದಿದ್ದ ಸ್ಟಾರ್ ಡೈರೆಕ್ಟರ್ ರಾಜಮೌಳಿ, ಕನ್ನಡದ ಕೆಜಿಎಫ್ ಸಿನಿಮಾಗೆ ಸಣ್ಣದೊಂದು ಮಟ್ಟದಲ್ಲಿ ನೆರವು ನೀಡಿದ್ದಾರೆ. ಆ ಸಹಾಯವೇ ಒಂದು ದೊಡ್ಡದಾಗಿ ನಿಂತಿದೆ. ಇದನ್ನ ಸ್ವತಃ ರಾಜಮೌಳಿಯೇ ಬಿಚ್ಟಿಟ್ಟಿದ್ದಾರೆ.

ಅದು ಏಪ್ರಿಲ್ ತಿಂಗಳು ಇರಬಹುದು

ಅದು ಏಪ್ರಿಲ್ ತಿಂಗಳು ಇರಬಹುದು

ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಆರ್.ಆರ್.ಆರ್ ಸಿನಿಮಾದ ಕಥೆಯ ಚರ್ಚೆಗಾಗಿ ರಾಜಮೌಳಿ ಬೆಂಗಳೂರಿಗೆ ಬಂದಿದ್ದರು. ಆ ವೇಳೆ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು. ಅದೇ ಹೋಟೆಲ್ ನಲ್ಲಿ ಯಶ್ ಕೂಡ ಇದ್ದರು. ರಾಜಮೌಳಿ ತಂಗಿದ್ದ ವಿಷ್ಯ ತಿಳಿದ ಯಶ್ ಮತ್ತು ಕೆಜಿಎಫ್ ಚಿತ್ರತಂಡ, ರಾಜಮೌಳಿಯನ್ನ ಭೇಟಿ ಮಾಡಿ ಎರಡು ನಿಮಿಷ ಕಾಲಾವಕಾಶ ಕೇಳಿದ್ರಂತೆ. ನಂತರ ಕೆಜಿಎಫ್ ಸಿನಿಮಾ ವಿಶ್ಯೂಲ್ಸ್ ತೋರಿಸಿದರಂತೆ.

ಕೆಜಿಎಫ್ ದೃಶ್ಯ ನೋಡಿ ರಾಜಮೌಳಿ ಅಚ್ಚರಿ

ಕೆಜಿಎಫ್ ದೃಶ್ಯ ನೋಡಿ ರಾಜಮೌಳಿ ಅಚ್ಚರಿ

ಕೆಜಿಎಫ್ ಸಿನಿಮಾದ ಮೂರು ನಿಮಿಷದ ಮೇಕಿಂಗ್ ವಿಡಿಯೋ ರಾಜಮೌಳಿ ನೋಡಿದ್ರಂತೆ. ಈ ಮೇಕಿಂಗ್ ನೋಡಿ ಒಂದು ಕ್ಷಣ ರಾಜಮೌಳಿ ಅಚ್ಚರಿಯಾದರಂತೆ. ಯಾಕಂದ್ರೆ, ವಿಶ್ಯೂಲ್ಸ್ ಅಷ್ಟು ಫ್ರೆಶ್ ಆಗಿತ್ತು. ಒರಿಜಿನಾಲಿಟಿ, ಕ್ವಾಲಿಟಿ ಅಷ್ಟು ರೋಚಕವಾಗಿತ್ತು. ಈ ಸಿನಿಮಾ ಹಿಂದೆ ಮೂರು ವರ್ಷದ ಎಫರ್ಟ್ ಇದೆ ಎಂದು ತಿಳಿದಾಗ ತುಂಬಾ ಖುಷಿ ಪಟ್ಟರಂತೆ. ನಂತರ ನಿರ್ದೇಶಕರು ಇದನ್ನ ಪ್ಯಾನ್ ಇಂಡಿಯಾ ಸಿನಿಮಾ ಮಾಡಬೇಕೆಂದುಕೊಂಡಿದ್ದೀವಿ ಎಂದು ಹೇಳಿದ್ರಂತೆ. ಆಗ ರಾಜಮೌಳಿ ಈ ಸಿನಿಮಾವನ್ನ ದೇಶದಾದ್ಯಂತ ತೆಗೆದುಕೊಂಡು ಹೋಲು ಸಾಧ್ಯಾನಾ ಅಂತ ಯೋಚನೆ ಮಾಡಿದ್ರಂತೆ.

 ಕೆಲವರಿಗೆ ಫೋನ್ ಮಾಡಿ ಹೇಳಿದ್ರು

ಕೆಲವರಿಗೆ ಫೋನ್ ಮಾಡಿ ಹೇಳಿದ್ರು

ಆದ್ರೆ, 'ಕೆಜಿಎಫ್' ದೃಶ್ಯ ನೋಡಿ ಇದು ಇಡೀ ಇಂಡಿಯಾದ ಸಿನಿಮಾ ಆಗುತ್ತೆ ಎಂದು ನಿರ್ಧರಿಸಿದ ರಾಜಮೌಳಿ ಬಾಲಿವುಡ್ ನ ಖ್ಯಾತ ನಿರ್ಮಾಪಕ ಅನಿಲ್ ತಡಾನಿ ಗೆ ಹಾಗೂ ಟಾಲಿವುಡ್ ನಿರ್ಮಾಪಕ ಸಾಯಿ ಮತ್ತು ಶೋಬು ಅವರಿಗೆ ಪೋನ್ ಮಾಡಿ ಕನ್ನಡದಲ್ಲಿ ಕೆಜಿಎಫ್ ಅಂತ ಒಂದು ಸಿನಿಮಾ ಇದೆ. ಒಮ್ಮೆ ನೋಡಿ, ಇದನ್ನ ಏನಾದರೂ ಮಾಡಬಹುದಾ ಎಂದು ಮನವಿ ಮಾಡಿದ್ದರಂತೆ. ಅದರ ಪರಿಣಾಮ ಇಂದು ಕೆಜಿಎಫ್ ಸಿನಿಮಾ ಇಂಡಿಯಾ ಚಿತ್ರವಾಗಿ ಆಗಿ ನಿಂತಿದೆ.

'ಬಾಹುಬಲಿ'ಯಂತೆ ಕೆಜಿಎಫ್ ಹಿಟ್ ಆಗುತ್ತಾ?

'ಬಾಹುಬಲಿ'ಯಂತೆ ಕೆಜಿಎಫ್ ಹಿಟ್ ಆಗುತ್ತಾ?

ಬಾಹುಬಲಿ ಚಿತ್ರದ ಹಿಂದೆಯೂ ಇಂತಹದ್ದೇ ಒಂದು ಪರಿಶ್ರಮವಿತ್ತು. ನಿರ್ದೇಶಕರ ಹಾರ್ಡ್ ವರ್ಕ್ ಇತ್ತು. ಕಲಾವಿದರು ಡೆಡಿಕೇಷನ್ ಇತ್ತು. ನಿರ್ಮಾಪಕರ ಧೈರ್ಯ ಇತ್ತು. ಇದೆಲ್ಲದರ ಪರಿಣಾಮ ಬಾಹುಬಲಿ ಎರಡು ಭಾಗವಾಗಿತ್ತು. ಇದೀಗ, ಅಂತಹದ್ದೇ ಪರಿಶ್ರಮ, ತಂಡದಿಂದ ಕೆಜಿಎಫ್ ಆಗಿದೆ. ಈಗ ಬಾಹುಬಲಿಯಂತೆ ಕೆಜಿಎಫ್ ಸಿನಿಮಾನೂ ಆಕರ್ಷಣೆ ಮಾಡಿದೆ. ಅಷ್ಟೇ ದೊಡ್ಡ ಸಕ್ಸಸ್ ಸಿಗುತ್ತಾ ಕಾದುನೋಡಬೇಕಿದೆ.

More from Filmibeat

English summary
Indian star director Ss Rajamouli spoke about KGF kannada movie on Pre release event held in Hyderabad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X