Just In
Don't Miss!
- Sports
ಐಪಿಎಲ್ 2021: ಆರ್ಸಿಬಿ ಉಳಿಸಿಕೊಂಡಿರುವ ಆಟಗಾರರ ಸಂಪೂರ್ಣ ಪಟ್ಟಿ
- News
ವ್ಯಾಕ್ಸಿನ್ ತೆಗೆದುಕೊಳ್ಳದೆ ನಾಟಕವಾಡಿದ ತುಮಕೂರು ಡಿಎಚ್ಒ: ಅಮಾನತ್ತಿಗೆ ಒತ್ತಾಯ
- Automobiles
ಅನಾವರಣಕ್ಕೂ ಮುನ್ನ ಹೊಸ ಕಿಗರ್ ಕಾರಿನ ಟೀಸರ್ ಬಿಡುಗಡೆ ಮಾಡಿದ ರೆನಾಲ್ಟ್
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Lifestyle
ಜನವರಿ 23 ಪರಾಕ್ರಮ ದಿವಸ್: ಸುಭಾಷ್ ಚಂದ್ರ ಬೋಸ್ ಬಗ್ಗೆ ನಿಮಗೆ ತಿಳಿದಿರದ ಸಂಗತಿಗಳು
- Finance
ಸೆನ್ಸೆಕ್ಸ್, ನಿಫ್ಟಿ ಹೊಸ ದಾಖಲೆ; ಟಾಟಾ ಮೋಟಾರ್ಸ್ 6%ಗೂ ಹೆಚ್ಚು ಗಳಿಕೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಿ ಬಾಸ್ ಬಳಿ ಮನವಿ ಮಾಡಿಕೊಂಡ ಭಾರತೀಯ ಥ್ರೋಬಾಲ್ ತಂಡದ ನಾಯಕಿ
ಭಾರತೀಯ ಥ್ರೋಬಾಲ್ ತಂಡದ ನಾಯಕಿ ಕೃಪಾ ಜೆ.ಪಿ ಅವರ ಮಾತೊಂದು ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂತರಾಷ್ಟ್ರೀಯ ಮಟ್ಟದ ಆಟಗಾರ್ತಿಯೊಬ್ಬರು ಡಿ ಬಾಸ್ ದರ್ಶನ್ ಬಳಿ ಒಂದು ಮನವಿ ಮಾಡಿಕೊಂಡಿದ್ದಾರೆ ಅಂದ್ರೆ ಅದು ನಿಜಕ್ಕು ಅಚ್ಚರಿ ಮೂಡಿಸುವಂತಹ ವಿಷಯ.
ಅವರ ಮನವಿಗೆ ಕಾರಣವಾಗಿದ್ದು ದರ್ಶನ್ ಅವರ ಸಹಾಯದ ಮನೋಭಾವ. ಕಷ್ಟ ಎಂದರವರ ಪಾಲಿಗೆ ದಚ್ಚು ದೇವರಾಗಿ ಬಿಡುತ್ತಾರೆ. ಅಭಿಮಾನಿಗಳ ಕಷ್ಟಕ್ಕೆ ಕರಗುವ ದಾಸ ಸದಾ ಸಹಾಯ ಹಸ್ತ ಚಾಚುತ್ತಲೆ ಇರುತ್ತಾರೆ.
ದರ್ಶನ್ ಅಭಿನಯದ 'ಗಂಡುಗಲಿ ಮದಕರಿ ನಾಯಕ' ಸಿನಿಮಾ ಆಗಸ್ಟ್ ನಿಂದ ಪ್ರಾರಂಭ
ದರ್ಶನ್ ಅವರ ಸಹಾಯದ ಮನೋಭಾವನ್ನು ನೋಡಿದ ಥ್ರೋಬಾಲ್ ಆಟಗಾರ್ತಿ ಕೃಪಾ ಜಿ ಪಿ, ಡಿ ಬಾಸ್ ಬಳಿ ಮನವಿ ಮಾಡಿ ಕೊಂಡಿದ್ದಾರೆ. ಕೃಪಾ ಅವರ ಮನವಿಯ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ. ದರ್ಶನ್ ಅಭಿಮಾನಿಗಳ ಪೇಜ್ ಗಳಲ್ಲಿ ವೈರಲ್ ಆಗಿದೆ. ಹಾಗಾದ್ರೆ ಕೃಪಾ ಅವರ ಮನವಿ ಏನು? ಮುಂದೆ ಓದಿ..

ದರ್ಶನ್ ಬಳಿ ಕೃಪಾ ಮನವಿ
ಕಷ್ಟ ಎಂದವರ ಪಾಲಿಗೆ ಕರಗುವ ದರ್ಶನ್ ಅವರ ಸಹಾಯದ ಮನೋಭಾವ ಹಾಗು ಅವರ ಪ್ರಾಣ ಪ್ರೀತಿ ಕೃಪಾ ಅವರಿಗೆ ತುಂಬಾ ಇಷ್ಟವಾಗುತ್ತಂತೆ. ದರ್ಶನ್ ಅವರನ್ನು ಸದಾ ಫಾಲೋಮಾಡುತ್ತಿರುವ ಕೃಪಾ ಥ್ರೋಬಾಲ್ ಆಟಗಾಗರಿಗೂ ಸಹಾಯದ ಹಸ್ತ ಚಾಚಿ ಎಂದು ಕೇಳಿಕೊಂಡಿದ್ದಾರೆ.

ಥ್ರೋಬಾಲ್ ಆಟಕ್ಕೆ ಖ್ಯಾತಿಯಿಲ್ಲ
"ಥ್ರೋಬಾಲ್ ಆಟ ನಾನಾಕಾರಣಗಳಿಗೆ ಖ್ಯಾತಿ ಪಡೆದುಕೊಂಡಿಲ್ಲ. ಆದ್ರೆ ರಾಜ್ಯದಲ್ಲಿ ಸಾಕಷ್ಟು ಉದಯೋನ್ಮುಕ ಮಹಿಳಾ ಆಟಗಾಗರು ಇದ್ದಾರೆ. ಚಿಕ್ಕ ಚಿಕ್ಕ ಗ್ರಾಮಗಳಿಂದ ಬಂದಿದ್ದಾರೆ. ಅನೇಕ ಆಟಗಾರರು ಥ್ರೋಬಾಲ್ ನಲ್ಲಿ ಮುಂದೆ ಬರಲು ಪ್ರಯತ್ನಿಸುತ್ತಿರುತ್ತಾರೆ. ಆದ್ರೆ ಥ್ರೋಬಾಲ್ ಅಷ್ಟು ಪ್ರಖ್ಯಾತಿ ಪಡಿದುಕೊಂಡಿಲ್ಲ"
'ರಂಗಪಟ್ಟಣ' ಸೇರಿದ ದರ್ಶನ್ ಗೆಳೆಯ ಯಶಸ್ ಸೂರ್ಯ

ಮಹಿಳಾ ಥ್ರೋ ಬಾಲ್ ತಂಡ ಬೆಳೆಸಿ ಸರ್
"ಪ್ರಖ್ಯಾತಿ ಪಡೆಯದ ಥ್ರೋಬಾಲ್ ಆಟ ಖ್ಯಾತಿ ಗಳಿಸಬೇಕು ಅಂದ್ರೆ ಕರ್ನಾಟಕದ ಶಕ್ತಿ ಆಗಿರುವ ದರ್ಶನ್ ಅಂತಹ ಸ್ಟಾರ್ ನಟರ ಸಹಾಯ ಬೇಕು. ಥ್ರೋಬಾಲ್ ಮಹಿಳಾ ತಂಡಕ್ಕೆ ಪ್ರೋತ್ಸಹ ನೀಡಿದ್ರೆ ಥ್ರೋಬಾಲ್ ಆಟ ಕೂಡ ಖ್ಯಾತಿ ಗಳಿಸುತ್ತೆ. ಅನೇಕ ಕ್ರೀಡಾಪಟುಗಳಿಗೂ ಸಹಾಯವಾಗುತ್ತೆ. ದಯವಿಟ್ಟು ಸಹಾಯ ಮಾಡಿ, ಆಟವನ್ನು ಬೆಂಬಲಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.
'ರಾಬರ್ಟ್' ಚಿತ್ರದ ದರ್ಶನ್ ಲುಕ್ ಲೀಕ್.!

ಥ್ರೋಬಾಲ್ ತಂಡದ ನಾಯಕಿ
ಕರ್ನಾಟಕದವರಾದ ಆಟಗಾರ್ತಿಯಾದ ಕೃಪಾ ಜಿ ಪಿ ಸದ್ಯ ಭಾರತೀಯ ಥ್ರೋಬಾಲ್ ತಂಡದ ನಾಯಕಿಯಾಗಿದ್ದಾರೆ. ಕೃಪಾ ದರ್ಶನ್ ಅವರ ದೊಡ್ಡ ಅಭಿಮಾನಿ ಕೂಡ ಅಂತೆ. ದರ್ಶನ್ ಅವರನ್ನು ಸದಾ ಫಾಲೋಮಾಡುತ್ತಿರುವ ಕೃಪಾ ಅವರಿಗೆ ಥ್ರೋಬಾಲ್ ಆಟಕ್ಕು ಬೆಂಬಲಿಸಲಿ ಎನ್ನುವುದು ಅವರ ಮನವಿ. ಕೃಪಾ ಮನವಿಗೆ ಡಿ ಬಸ್ ಸ್ಪಂದಿಸುತ್ತಾರಾ ಎಂದು ಕಾದು ನೋಡಬೇಕು.