twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಪೊಲೀಸರ, ರಾಜಕಾರಣಿಗಳ ವೈಫಲ್ಯ ಎಂದ ಇಂದ್ರಜಿತ್ ಲಂಕೇಶ್

    By ಮೈಸೂರು ಪ್ರತಿನಿಧಿ
    |

    ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಪೊಲೀಸರ ವೈಫಲ್ಯದ ಜೊತೆಗೆ ರಾಜಕಾರಣಿಗಳ ಹಸ್ತಕ್ಷೇಪವು ಇದೆ ಎಂದು ಚಲನಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ.

    ಮೈಸೂರಿನಲ್ಲಿ ಶುಕ್ರವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಇಂದ್ರಜಿತ್ ಲಂಕೇಶ್, ವಿದ್ಯಾರ್ಥಿನಿ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಂಪೂರ್ಣವಾಗಿ ಪೊಲೀಸರನ್ನು ಹೊಣೆಗಾರರನ್ನಾಗಿಸಲು ಮಾಡಲು ಆಗಲ್ಲ. ಈ ಘಟನೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪವು ಇದೆ. ಇದರಿಂದಲೇ ಈ ರೀತಿಯ ಘಟನೆ ಆಗುತ್ತಿವೆ ಎಂದು ಗಂಭೀರ ಆರೋಪ ವ್ಯಕ್ತಪಡಿಸಿದ್ದಾರೆ.

    ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಈ ಹಿಂದೆಯೇ ಹೇಳಿದ್ದೆ. ಅದರಂತೆ ಇವತ್ತು ನಿಮಗೆ ಸಾಕ್ಷಿ ಸಮೇತ ಮಾಹಿತಿ ಸಿಗುತ್ತಿದೆ‌ ನೋಡಿ. ಐತಿಹಾಸಿಕ ಹಿನ್ನಲೆ ಇರುವ ಮೈಸೂರು ಇಂದು ಈ ಸ್ಥಿತಿಗೆ ಬಂದಿದೆ. ನಾನು ಕೂಡ ಮೈಸೂರಿನಲ್ಲಿ ಶೂಟಿಂಗ್‌ ಮಾಡಿದ್ದೇನೆ. ಆದತೆ ಇಂದು ಇದೇ ಮೈಸೂರಿನಲ್ಲಿ ಹಲ್ಲೆಗಳಾಗಿದೆ, ದರೋಡೆ, ಗ್ಯಾಂಗ್ ರೇಪ್ ಘಟನೆ ಆಗಿದೆ‌. ಇದು ಮೈಸೂರನ್ನ ಡಿಸ್ಟರ್ಬ್ ಮಾಡಿದೆ ಎಂದರು.

     Indrajit Lankesh Condemns Mysore Gang Rape Incident

    ರಾಜಕಾರಣಿಗಳು ಮೈಸೂರನ್ನು ತಾಲೀಬಾನ್‌ ಗಳಿಗೆ ಹೋಲಿಸುತ್ತಿದ್ದಾರೆ. ಮತ್ತೇ ಕೆಲವರು ಯುವಕ ಯುವತಿ ಹೋಗಿದ್ದೆ ತಪ್ಪು ಎನ್ನುತ್ತಿದ್ದಾರೆ. ಈ ಮಧ್ಯೆ ರಾಜಕಾರಣಿಗಳು ಏನು ಮಾತಾಡುತ್ತಿದ್ದಾರೆ? ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಎಲ್ಲರು ನೋಡ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರನ್ನ ಬ್ಲೇಮ್ ಮಾಡಲು ಆಗಲ್ಲ ಎಂದರು.

    ಅಲ್ಲದೇ, ಗ್ಯಾಂಗ್ ರೇಪ್ ಘಟನೆ ಬಗ್ಗೆ ದೆಹಲಿಯಲ್ಲಿ ನಿರ್ಭಯ ಅಂತ ಕರೆಯುತ್ತಿದ್ದರು, ನಾನು ಇಲ್ಲಿ ಮಾನಿನಿ ಅಂತ ಕರೆಯುತ್ತೇನೆ. ಮಾನಿನಿ ಅಂದರೆ‌ ಮಾನ ಎತ್ತಿ ಹಿಡಿಯುವ ಯುವತಿ ಎಂದರ್ಥ. ಹಾಗಾಗಿ ಈ ಪ್ರಕರಣದಲ್ಲಿ ನಾನು ಯುವತಿಗೆ ಮಾನಿನಿ ಅಂತ ಹೇಳುತ್ತೇನೆ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.

    ಅತ್ಯಾಚಾರ ಮಾಡಿದವರಿಗೆ ಯಾವ ಶಿಕ್ಷೆ ಎಂದು ಬೋರ್ಡ್ ಹಾಕಬೇಕಿದೆ. ಇಂದು ಬಸ್ ನಿಲ್ದಾಣದ ಬೋರ್ಡ್‌ನಲ್ಲಿ ಹಾಕಬೇಕು. ಇದೇ ಸ್ಥಳದಲ್ಲಿ ರಾಜಕಾರಣಿಗಳು ನಾನೇ ಈ ನಿಲ್ದಾಣ ಮಾಡಿಸಿದ್ದು ಎಂದು ಹಾಕ್ತಾರೆ. ಆದರೆ ಅತ್ಯಾಚಾರಕ್ಕೆ ಯಾವ ಶಿಕ್ಷೆ ಎಂದು ಬೋರ್ಡ್ ಹಾಕಬೇಕಿದೆ‌ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದರು.

    ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ರಾಜಕಾರಣಿಗಳು, ಸೆಲೆಬ್ರಿಟಿಗಳು ಘಟನೆಯನ್ನು ಖಂಡಿಸಿದ್ದಾರೆ. ನಟಿ ಶ್ರುತಿ, ರಮ್ಯಾ, ಉಮಾಶ್ರೀ ಇನ್ನೂ ಹಲವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

    ಇಂದ್ರಜಿತ್ ಲಂಕೇಶ್ ವಿರುದ್ಧ ಪ್ರತಿಭಟನೆ

    ಈ ಹಿಂದೆ ಮೈಸೂರು ಪೊಲೀಸ್ ಇಲಾಖೆ ಬಗ್ಗೆ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಮೈಸೂರಿನ ಪೊಲೀಸ್ ಠಾಣೆಗಳು ಸೆಟಲ್ಮೆಂಟ್ ಕೇಂದ್ರಗಳಾಗಿವೆ ಎಂಬ ಹೇಳಿಕೆ ನೀಡುವ ಮೂಲಕ ಮೈಸೂರು ಪೊಲೀಸರ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಲಂಕೇಶ್ ಅವರ ಈ ಹೇಳಿಕೆಗೆ ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಕೆಲವು ಸಂಘಟನೆಗಳು ಸ್ಯಾಂಡಲ್ವುಡ್ ನಿರ್ದೇಶಕನ ಇಂದ್ರಜಿತ್ ಲಂಕೇಶ್ ವಿರುದ್ಧ ಪ್ರತಿಭಟನೆಯನ್ನು ಸಹ ನಡೆಸಿದ್ದವು.

    ಈ ಹಿಂದೆ ದರ್ಶನ್ ಪ್ರಕರಣದಲ್ಲಿ ಇಂದ್ರಜಿತ್ ಲಂಕೇಶ್ ಮೈಸೂರು ಪೊಲೀಸರ ವಿರುದ್ಧ ತೀಕ್ಷ್ಣ ವಾಗ್ದಾಳಿ ಮಾಡಿದ್ದರು. ''ಮೈಸೂರಿನಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ. ಪೊಲಿಸ್ ಠಾಣೆಗಳು ಸೆಟಲ್‌ಮೆಂಟ್ ಅಡ್ಡಾಗಳಾಗಿವೆ. ಮೈಸೂರು ಜಿಲ್ಲೆಯಲ್ಲಿ ಸೆಲಬ್ರಿಟಿಗಳ ನಡವಳಿಕೆ, ಮಾತು ಮಿತಿ ಮೀರುತ್ತಿದೆ. ಸಾಕ್ಷಿಗಳಿದ್ದರೂ ಮೈಸೂರು ಪೊಲೀಸರು ಈ ಘಟನೆ ಸಂಬಂಧ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಅಲ್ಲಿಯ ಪೊಲೀಸರ ಈ ನಿಷ್ಕ್ರಿಯತೆ ಅನುಮಾನ ಮೂಡಿಸುತ್ತಿದೆ. ಮೈಸೂರಿನ ಪೊಲೀಸ್ ಠಾಣೆಗಳು ಸೆಟಲ್​ಮೆಂಟ್ ತಾಣಗಳಾಗುತ್ತಿವೆ. ಹೀಗಾಗಿ, ಮೈಸೂರು ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕು. ಭ್ರಷ್ಟ ಅಧಿಕಾರಿಗಳನ್ನ ವಜಾಗೊಳಿಸಿ ಸಮರ್ಥ ಅಧಿಕಾರಿಗಳನ್ನ ನೇಮಿಸಬೇಕು ಎಂದು ಇಂದ್ರಜಿತ್ ಆಗ ಒತ್ತಾಯಿಸಿದ್ದರು.

    English summary
    Director Indrajit Lankesh condemns Mysore gang rape incident. He said this is failure of police and politicians of Mysore.
    Friday, August 27, 2021, 15:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X