»   » ಬಾಲಿವುಡ್ ಚಿತ್ರರಂಗಕ್ಕೆ ಇಂದ್ರಜಿತ್ ಲಂಕೇಶ್ ಜಿಗಿತ

ಬಾಲಿವುಡ್ ಚಿತ್ರರಂಗಕ್ಕೆ ಇಂದ್ರಜಿತ್ ಲಂಕೇಶ್ ಜಿಗಿತ

Posted By:
Subscribe to Filmibeat Kannada
Director Indrajit Lankesh
ಕನ್ನಡ ಚಿತ್ರರಂಗದಲ್ಲಿ 'ತುಂಟಾಟ'ದ ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಈಗ ಬಾಲಿವುಡ್ ಕಡೆಗೆ ಹೆಜ್ಜೆ ಹಾಕಿದ್ದಾರೆ. ಶೀಘ್ರದಲ್ಲೇ ಅವರ ಬಾಲಿವುಡ್ ಚಿತ್ರ ಸೆಟ್ಟೇರಲಿದೆ.

ಒಂದು ಕಡೆ ಪತ್ರಿಕೋದ್ಯಮ, ಇನ್ನೊಂದು ಕಡೆ ಬಣ್ಣದ ನಂಟು. ಎರಡನ್ನೂ ಸರಿದೂಗಿಸಿಕೊಂಡು ಕನ್ನಡ ಚಿತ್ರೋದ್ಯಮದಲ್ಲಿ ತಮ್ಮದೇ ಆದಂತಹ ಇಂದ್ರಚಾಪ ಮೂಡಿಸಿದವರು ಇಂದ್ರಜಿತ್ ಲಂಕೇಶ್. ಈಗ ಅವರ ಪಯಣ ಬಾಲಿವುಡ್ ಕಡೆಗೆ ಸಾಗಿದೆ.

ತಮ್ಮ ಬಾಲಿವುಡ್ ಚಿತ್ರದ ಬಗೆಗಿನ ವಿವರಗಳನ್ನು ಸದ್ಯಕ್ಕೆ ಅವರು ಗುಟ್ಟಾಗಿ ಇಟ್ಟಿದ್ದಾರೆ. ಶೀಘ್ರದಲ್ಲೇ ಅವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ. ಇದೊಂದು ಬಿಗ್ ಬಜೆಟ್ ಚಿತ್ರ ಎಂಬುದು ಸದ್ಯಕ್ಕೆ ಲಭ್ಯವಿರುವ ಮಾಹಿತಿ. ಹೆಚ್ಚಿನ ವಿವರಗಳು ಶೀಘ್ರದಲ್ಲೇ ಪತ್ರಿಕಾಗೋಷ್ಠಿ ಕರೆದು ತಿಳಿಸಲಿದ್ದಾರಂತೆ.

ಬಾಲಿವುಡ್ ಚಿತ್ರರಂಗದಲ್ಲಿ ಸದ್ಯಕ್ಕೆ ನಂಬರ್ ಒನ್ ಪಟ್ಟಕ್ಕಾಗಿ ಪೈಪೋಟಿ ನಡೆಸುತ್ತಿರುವ ದೀಪಿಕಾ ಪಡುಕೋಣೆ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಇಂದ್ರಜಿತ್ ಅವರಿಗೆ ಸಲ್ಲುತ್ತದೆ. ಅವರ ಚೊಚ್ಚಲ ಬಾಲಿವುಡ್ ಚಿತ್ರಕ್ಕೆ ದೀಪಿಕಾ ಅವರೇ ನಾಯಕಿಯಾದರೆ ಇನ್ನೂ ಚೆನ್ನಾಗಿರುತ್ತದೆ ಎಂಬುದು ಸಿನಿರಸಿಕರ ಅಂಬೋಣ.

ಸಾಮಾನ್ಯವಾಗಿ ಇಂದ್ರಜಿತ್ ಅವರು ಇದುವರೆಗೂ ತೆಗೆದ ಚಿತ್ರಗಳೆಲ್ಲಾ ಯುವಕರನ್ನು ಗುರಿಯಾಗಿಸಿಕೊಂಡಿವೆ. ಬಾಲಿವುಡ್ ನಲ್ಲಿ ಅವರೇನಾದರೂ ಹೊಸ ಪ್ರಯೋಗ ಮಾಡುತ್ತಾರಾ ಎಂಬುದನ್ನು ಕಾದುನೋಡೋಣ. (ಏಜೆನ್ಸೀಸ್)

English summary
Kannada films successful director Indrajit Lankesh all set to debut in Bollywood films. Sources says, soon he will reveal the details, the announcement will be made in August.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada