twitter
    For Quick Alerts
    ALLOW NOTIFICATIONS  
    For Daily Alerts

    'ಕ್ಷಮೆ ಕೇಳಿ, ಇಲ್ಲ ಅಂದ್ರೆ ಇನ್ನು ತೇಜೋವಧೆ ಆಗುತ್ತೆ'- ಇಂದ್ರಜಿತ್

    |

    ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ಮಾಡಿರುವುದು ನಿಜ, ಬಡವರು ಎನ್ನುವ ಕಾರಣಕ್ಕೆ ಅವರಿಗೆ ನ್ಯಾಯ ಕೇಳಲು ಸಾಧ್ಯವಾಗಿಲ್ಲ. ಅವರ ಪರವಾಗಿ ನಾನು ಈ ಹೋರಾಟ ಮುಂದುವರಿಸುತ್ತೇನೆ ಎಂದು ಪತ್ರಕರ್ತ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಸ್ಪಷ್ಟಪಡಿಸಿದ್ದಾರೆ.

    ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಕೇಶ್ ''ಈ ವಿಚಾರವಾಗಿ ಕ್ಷಮೆ ಕೇಳಿ, ಅವರಿಗೆ ನ್ಯಾಯ ಒದಗಿಸಿ ಇಲ್ಲಿಗೆ ಬಿಟ್ಟು ಬಿಡೋಣ, ಇಲ್ಲ ಮುಂದುವರಿಸೋಣ ಅಂದ್ರೆ ಮತ್ತಷ್ಟು ತೇಜೋವಧೆ ಆಗಬಹುದು'' ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಮುಂದೆ ಓದಿ....

    'ದರ್ಶನ್-ಇಂದ್ರಜಿತ್ ಇಲ್ಲಿಗೆ ಬಿಟ್ಟುಬಿಡಿ': ವಿಚಾರಣೆ ಬಳಿಕ ಸಂದೇಶ್ ಪ್ರತಿಕ್ರಿಯೆ 'ದರ್ಶನ್-ಇಂದ್ರಜಿತ್ ಇಲ್ಲಿಗೆ ಬಿಟ್ಟುಬಿಡಿ': ವಿಚಾರಣೆ ಬಳಿಕ ಸಂದೇಶ್ ಪ್ರತಿಕ್ರಿಯೆ

    ಕ್ಷಮೆ ಕೇಳಿ ಅಷ್ಟೇ ಸಾಕು

    ಕ್ಷಮೆ ಕೇಳಿ ಅಷ್ಟೇ ಸಾಕು

    ''ಸಾಮಾಜಿಕ ಹಿತದೃಷ್ಟಿ, ಕಳಕಳಿಯಿಂದ ಈ ಹೋರಾಟ ಮುಂದುವರಿದಿದೆ. ಅನ್ಯಾಯವಾಗಿರುವುದು ಬಡವರಿಗೆ, ಅವರಿಗೆ ನ್ಯಾಯ ಸಿಗಬೇಕು. ಹೋಟೆಲ್ ಸಿಬ್ಬಂದಿಗೆ ನ್ಯಾಯ ಕೊಡಿಸಲು ನಾನು ಬಂದಿರುವುದು. ಹಲ್ಲೆಗೊಳಗಾದವರಿಗೆ ಕ್ಷಮೆ ಕೇಳಿ, ನ್ಯಾಯ ಒದಗಿಸಿ. ಈ ವಿಚಾರವನ್ನು ಇಲ್ಲಿಗೆ ಬಿಡೋಣ. ಇಲ್ಲ ಅಂದ್ರೆ ಇದು ಇನ್ನು ಮುಂದುವರಿಯುತ್ತೆ. ಮತ್ತಷ್ಟು ತೇಜೋವಧೆ ಆಗಬಹುದು'' ಎಂದು ತಿಳಿಸಿದ್ದಾರೆ.

    ಬಡವರು, ಭಯ ಇರುತ್ತದೆ

    ಬಡವರು, ಭಯ ಇರುತ್ತದೆ

    ''ಅವರು ಬಡವರು, ಮುಂದೆ ಬಂದ ಹೋರಾಟ ಮಾಡಲು ಆಗಲ್ಲ. ಕೆಲಸ ಹೋಗುತ್ತೆ ಎನ್ನುವ ಭಯ, ಸಮಾಜದಲ್ಲಿ ಮುಂದೆ ಹೇಗೆ ಎನ್ನುವ ಆತಂಕ ಇರುತ್ತದೆ. ಹಾಗಾಗಿ, ಅವರು ಸತ್ಯವನ್ನು ಮುಚ್ಚಿಡುವ ಪ್ರಯತ್ನ. ಈ ಘಟನೆ ನಡೆದಿರುವುದು ಎಲ್ಲರಿಗೂ ಗೊತ್ತಿದೆ. ಜವಾಬ್ದಾರಿಯುತ ನಟನಾಗಿ ನಡೆದುಕೊಳ್ಳಿ'' ಎಂದು ಇಂದ್ರಜಿತ್ ಹೇಳಿದ್ದಾರೆ.

    ದರ್ಶನ್ ನನ್ನನ್ನು ಹೊಡೆದಿಲ್ಲ, ಬೈದರು ಅಷ್ಟೆ: ಸಂತ್ರಸ್ತ ಗಂಗಾಧರ್ದರ್ಶನ್ ನನ್ನನ್ನು ಹೊಡೆದಿಲ್ಲ, ಬೈದರು ಅಷ್ಟೆ: ಸಂತ್ರಸ್ತ ಗಂಗಾಧರ್

    ಆಡಿಯೋದಲ್ಲಿ ಧ್ವನಿ ನನ್ನದೇ

    ಆಡಿಯೋದಲ್ಲಿ ಧ್ವನಿ ನನ್ನದೇ

    ನಿರ್ಮಾಪಕ, ಹೋಟೆಲ್ ಮಾಲೀಕ ಸಂದೇಶ್ ಅವರ ಜೊತೆ ಇಂದ್ರಜಿತ್ ಮಾತನಾಡಿದ್ದಾರೆ ಎನ್ನಲಾದ ಅಡಿಯೋ ಕುರಿತು ಸ್ಪಷ್ಟನೆ ಕೊಟ್ಟಿರುವ ಇಂದ್ರಜಿತ್ ''ಆ ಆಡಿಯೋ ನನ್ನದೇ'' ಎಂದಿದ್ದಾರೆ. ಅವರ ಜೊತೆ ಈ ರೀತಿ ಹಲವು ಸಂಭಾಷಣೆ ಇದೆ. ನನ್ನ ತನಿಖೆ ವರದಿಗಾರರ ಜೊತೆನೂ ಮಾತನಾಡಿದ್ದಾರೆ ಎಂದು ತಿಳಿಸಿದರು.

    Recommended Video

    Darshan ವಿಚಾರದಲ್ಲಿ ಸುಳ್ಳು ಹೇಳಿದ್ರ ಹೋಟೆಲ್ ಮಾಲೀಕ ಸಂದೇಶ್ | Darshan Hotel Controversy |Filmibeat Kannada
    ಕುಮಾರಸ್ವಾಮಿಗೆ ಸಂಬಂಧವಿಲ್ಲ

    ಕುಮಾರಸ್ವಾಮಿಗೆ ಸಂಬಂಧವಿಲ್ಲ

    ''ಈ ಪ್ರಕರಣಕ್ಕೂ ಎಚ್‌ ಡಿ ಕುಮಾರಸ್ವಾಮಿ ಅವರಿಗೂ ಯಾವುದೇ ಸಂಬಂಧವಿಲ್ಲ. ಸಿದ್ದರಾಮಯ್ಯ ಅವರಿಗೂ ಏನೂ ನಂಟು ಇಲ್ಲ. ಕುಮಾರಸ್ವಾಮಿ ಜೊತೆ ನಾನು ಹಲವು ಬಾರಿ ಭೇಟಿ ಮಾಡಿದ್ದೇನೆ. ಅದು ಸಿನಿಮಾ ಮತ್ತು ಬೇರೆ ವಿಷಯಕ್ಕೆ ಸಂಬಂಧಿಸಿದ್ದು. ಇದರಲ್ಲಿ ಅವರ ಹೆಸರು ಎಳೆದು ತರಬೇಡಿ'' ಎಂದು ಇಂದ್ರಜಿತ್ ಲಂಕೇಶ್ ಮಾಹಿತಿ ನೀಡಿದ್ದಾರೆ.

    English summary
    Director-Journalist Indrajit Lankesh demanded that Darshan apologize to hotel staff.
    Saturday, July 17, 2021, 7:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X