For Quick Alerts
  ALLOW NOTIFICATIONS  
  For Daily Alerts

  ಸಿಸಿಬಿ ಅಧಿಕಾರಿಗಳಿಗೆ ಇಂದ್ರಜಿತ್ ಲಂಕೇಶ್ ಕೊಟ್ಟಿದ್ದು ಹೇಳಿಕೆ ಮಾತ್ರ, ಸಾಕ್ಷ್ಯ ಇಲ್ಲ

  |

  ಕನ್ನಡ ಚಿತ್ರರಂಗದಲ್ಲಿ ನಟ-ನಟಿಯರು ಹಾಗೂ ತಂತ್ರಜ್ಞರು ಡ್ರಗ್ಸ್ ಸೇವಿಸುತ್ತಾರೆ, ಡೀಲರ್‌ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಆರೋಪಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್, ಈ ಕುರಿತು ಸಿಸಿಬಿ ಅಧಿಕಾರಿಗಳ ಬಳಿ ಸಾಕ್ಷ್ಯಗಳನ್ನು ನೀಡಿದ್ದಾರೆ ಎಂದು ಹೇಳಲಾಗಿತ್ತು.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಸಿಸಿಬಿ ನೀಡಿದ್ದ ನೋಟಿಸ್ ಹಿನ್ನೆಲೆ ಕಚೇರಿಗೆ ತೆರಳಿದ್ದ ಇಂದ್ರಜಿತ್ ಲಂಕೇಶ್, ಡ್ರಗ್ಸ್ ಜಾಲದಲ್ಲಿ ತೊಡಗಿಕೊಂಡಿರುವ ಸೆಲೆಬ್ರಿಟಿಗಳ ಹೆಸರು, ಫೋಟೋ ಮತ್ತು ವಿಡಿಯೋ ಸಹ ನೀಡಿದ್ದೇನೆ ಎಂದು ಹೇಳಿದ್ದರು. ಆದ್ರೆ, ಸಿಸಿಬಿ ಅಧಿಕಾರಿ ಸಂದೀಪ್ ಪಾಟೀಲ್ ''ಹೇಳಿಕೆ ಮಾತ್ರ ಕೊಟ್ಟಿದ್ದಾರೆ, ಸಾಕ್ಷ್ಯ ಇಲ್ಲ'' ಎಂದಿದ್ದಾರೆ. ಮುಂದೆ ಓದಿ...

  ಪೂರ್ಣ ಮಾಹಿತಿ ನೀಡಿಲ್ಲ

  ಪೂರ್ಣ ಮಾಹಿತಿ ನೀಡಿಲ್ಲ

  ಡ್ರಗ್ಸ್ ಜಾಲಕ್ಕೆ ಸಂಬಂಧಪಟ್ಟಂತೆ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಿನ್ನೆ ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಕೆಲವರು ಹೆಸರು ಮಾತ್ರ ನೀಡಿದ್ದಾರೆ. ಅನುಮಾನದ ಹಿನ್ನೆಲೆ ಈ ಹೆಸರುಗಳನ್ನು ಪ್ರಸ್ತಾಪಿಸಿದ್ದಾರೆ. ಬೇರೆ ಯಾವ ಸಾಕ್ಷ್ಯವನ್ನು ನೀಡಿಲ್ಲ ಎಂದು ಸಿಸಿಬಿ ಅಧಿಕಾರಿ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

  ಸಿಸಿಬಿ ಕೈ ಸೇರಿತು 'ಇಂದ್ರಜಿತ್ ಫೈಲ್': 15 ತಾರೆಯರ ವಿವರ ಹಸ್ತಾಂತರ

  ಫೋಟೋನೂ ಇಲ್ಲ, ವಿಡಿಯೋ ಇಲ್ಲ

  ಫೋಟೋನೂ ಇಲ್ಲ, ವಿಡಿಯೋ ಇಲ್ಲ

  ಸಿಸಿಬಿ ವಿಚಾರಣೆ ಮುಗಿಸಿ ಹೊರಬಂದ ಇಂದ್ರಜಿತ್ ಲಂಕೇಶ್ ಸೆಲೆಬ್ರಿಟಿಗಳ ಹೆಸರು, ವಿವರ, ಸ್ಥಳಗಳ ಬಗ್ಗೆ ಮಾಹಿತಿ ನೀಡಿದ್ದೇನೆ. ಹಾಗೂ ಅದಕ್ಕೆ ಸಂಬಂಧಪಟ್ಟಂತೆ ಕೆಲವು ಪಾರ್ಟಿಗಳ ಫೋಟೋ ಹಾಗೂ ವಿಡಿಯೋ ಸಹ ನೀಡಿದ್ದೇನೆ ಎಂದಿದ್ದರು.

  ಇನ್ನೊಂದು ಅವಕಾಶ ನೀಡಲಾಗಿದೆ

  ಇನ್ನೊಂದು ಅವಕಾಶ ನೀಡಲಾಗಿದೆ

  ಸದ್ಯಕ್ಕೆ ಕೆಲವರ ಹೆಸರುಗಳನ್ನು ಇಂದ್ರಜಿತ್ ಲಂಕೇಶ್ ಪ್ರಸ್ತಾಪಿಸಿದ್ದಾರೆ. ಅದಕ್ಕೆ ಪೂರಕವಾದ ಸಾಕ್ಷ್ಯ ಅಥವಾ ಆಧಾರಗಳು ಇದ್ದಲ್ಲಿ ಮತ್ತೆ ಸಿಸಿಬಿ ಕಚೇರಿ ಬಂದು ನೀಡಿ ಎಂದು ಪೊಲೀಸರು ಸೂಚಿಸಿದ್ದಾರಂತೆ.

  ಡ್ರಗ್ಸ್ ಎಫೆಕ್ಟ್: ಮೂರು ಘಟನೆಗಳಿಗೆ ಸ್ಪಷ್ಟನೆ ಕೇಳಿದ ಇಂದ್ರಜಿತ್ ಲಂಕೇಶ್

  ಮುಂದೆ ಏನು.......?

  ಮುಂದೆ ಏನು.......?

  ಇಷ್ಟು ದಿನ ನನ್ನಲ್ಲಿ ದಾಖಲೆ ಇದೆ, ಸಾಕ್ಷ್ಯ ಇದೆ, ಫೋಟೋ ಇದೆ, ವಿಡಿಯೋ ಇದೆ ಎಂದು ಹೇಳುತ್ತಿದ್ದ ಇಂದ್ರಜಿತ್ ಲಂಕೇಶ್ ಹಾಗಾದ್ರೆ ಸಿಸಿಬಿ ಮುಂದೆ ಏನೂ ನೀಡಿಲ್ವಾ? ಸಾಕ್ಷ್ಯ ಎನ್ನುವ ದಾಖಲೆಗಳು ಅವರ ಬಳಿ ಇದ್ಯಾ ಅಥವಾ ಇಲ್ಲದೆ ಸುಮ್ಮನೆ ಹೇಳುತ್ತಿದ್ದಾರಾ? ಸಿಸಿಬಿ ಕಚೇರಿಗೆ ಇಂದ್ರಜಿತ್ ಮತ್ತೆ ಭೇಟಿ ನೀಡುತ್ತಾರಾ? ಎಂಬ ಪ್ರಶ್ನೆಗಳು ಸಹಜವಾಗಿ ಕಾಡುತ್ತದೆ.

  English summary
  Film director Indrajit Lankesh did not give any evidence except names said CCB Officer Sandip Patil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X