For Quick Alerts
  ALLOW NOTIFICATIONS  
  For Daily Alerts

  ಡ್ರಗ್ ವಿಚಾರದಲ್ಲಿ ಮತ್ತೊಂದು ಬಾಂಬ್ ಸಿಡಿಸಿದ ಇಂದ್ರಜಿತ್ ಲಂಕೇಶ್

  |

  ಡ್ರಗ್ಸ್ ದಂಧೆಯಲ್ಲಿ ಕೇವಲ ಇಬ್ಬರು ಮಾತ್ರ ನಟಿಯರಿದ್ದಾರಾ, ಬೇರೆ ಯಾರೂ ಇಲ್ವಾ? ಇಬ್ಬರು ನಟಿಯರು ಬಿಟ್ಟರೆ ಯಾಕೆ ಇದುವರೆಗೂ ಯಾವ ನಟ, ನಿರ್ದೇಶಕರ ಮಕ್ಕಳನ್ನು, ರಾಜಕಾರಣಿಗಳ ಮಕ್ಕಳನ್ನು ಬಂಧಿಸಿಲ್ಲ ಅಥವಾ ವಿಚಾರಣೆಗೆ ಕರೆದಿಲ್ಲ ಎಂಬ ಅನುಮಾನ ಕಾಡುವುದು ಸಹಜ. ಇದೇ ಅನುಮಾನವನ್ನು ಇಂದ್ರಜಿತ್ ಲಂಕೇಶ್ ವ್ಯಕ್ತಪಡಿಸಿದ್ದಾರೆ.

  ಡೆಲ್ಲಿಯಿಂದ ಟೀಮ್ ಬಂದ್ರೇನೇ ಇವರ ಬಂಡವಾಳ ಗೊತ್ತಾಗೋದು | Oneindia Kannada

  ಡ್ರಗ್ಸ್ ವಿಚಾರದಲ್ಲಿ ವಿರುದ್ಧವಾಗಿ ಧ್ವನಿ ಎತ್ತಿದ್ದ ಇಂದ್ರಜಿತ್ ಲಂಕೇಶ್ ಆರಂಭದಿಂದಲೇ ಚಿತ್ರರಂಗದ ಕೆಲವು ಸ್ಟಾರ್‌ಗಳು, ಹಿರಿಯ ನಿರ್ದೇಶಕರ ಮಕ್ಕಳು, ರಾಜಕಾರಣಿಗಳ ಮಕ್ಕಳು, ಇವೆಂಟ್ ಆಯೋಜಕರು ಭಾಗಿಯಾಗಿದ್ದಾರೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದ್ರೆ, ಈ ಕೇಸ್‌ ಗಂಭೀರವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಇಂದ್ರಜಿತ್ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

  ಡ್ರಗ್ಸ್ ಪ್ರಕರಣ: ನಟಿಯರ ಖಾಸಗಿ ವಿಡಿಯೋ ಸೋರಿಕೆ ಮಾಡಿದವರ ವಿರುದ್ಧ ಸಿಡಿದೆದ್ದ ನಟಿ ಪಾರುಲ್ಡ್ರಗ್ಸ್ ಪ್ರಕರಣ: ನಟಿಯರ ಖಾಸಗಿ ವಿಡಿಯೋ ಸೋರಿಕೆ ಮಾಡಿದವರ ವಿರುದ್ಧ ಸಿಡಿದೆದ್ದ ನಟಿ ಪಾರುಲ್

  ಸುಮ್ಮನೆ ವಿಚಾರಣೆ ಆಗ್ತಿದೆ ಅಷ್ಟೇ

  ಸುಮ್ಮನೆ ವಿಚಾರಣೆ ಆಗ್ತಿದೆ ಅಷ್ಟೇ

  ಪೊಲೀಸರು ಕೆಲಸ ಮಾಡುತ್ತಿದ್ದರೂ ಅವರ ಕೈಕಟ್ಟಿ ಹಾಕಿರುವಂತೆ ಕೆಲಸ ಕಾಣ್ತಿದೆ. ಇಬ್ಬರು ನಟಿಯರನ್ನು ಬಿಟ್ಟರೆ ಬೇರೆ ಯಾರನ್ನು ಬಂಧಿಸಿಲ್ಲ, ನಟ-ನಿರ್ದೇಶಕರ ಮಕ್ಕಳು, ರಾಜಕಾರಣಿಗಳ ಮಕ್ಕಳು ಈ ದಂಧೆಯಲ್ಲಿದ್ದಾರೆ. ಆದರೆ, ಬೇರೆ ಹಿಡಿದು ತನಿಖೆ ಮಾಡುವಂತೆ ಕಾಣುತ್ತಿಲ್ಲ. ಸುಮ್ಮನೆ ತನಿಖೆ ಮಾಡ್ತಿದ್ದಾರೆ ಅನಿಸುತ್ತಿದೆ'' ಎಂದು ಇಂದ್ರಜಿತ್ ಲಂಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

  ಸಿಬಿಐ ಸೂಕ್ತ ಮಾರ್ಗ!

  ಸಿಬಿಐ ಸೂಕ್ತ ಮಾರ್ಗ!

  ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಖಂಡಿತ ಹಲವು ರಾಜಕಾರಣಿಗಳ ಹೆಸರು ಹೊರಗೆ ಬರುತ್ತೆ, ರಾಜಕಾರಣಿಗಳ ಮಕ್ಕಳ ಹೆಸರು ಬರುತ್ತೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ, ಆದ್ರೆ ಅವರ ನಾಯಕರಿಂದಲೇ ತನಿಖೆಗೆ ಅಡ್ಡಗಾಲು ಎದುರಾಗುತ್ತಿದೆ. ಸಿಬಿಐ ತನಿಖೆ ಮಾಡಿದ್ರೆ ಅಸಲಿ ಸತ್ಯ ಹೊರಗೆ ಬರುತ್ತದೆ'' ಎಂದು ಇಂದ್ರಜಿತ್ ಆಗ್ರಹಿಸಿದ್ದಾರೆ.

  English summary
  Director Indrajit lankesh express displeasure against CCB Inquiry on Drugs case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X