For Quick Alerts
  ALLOW NOTIFICATIONS  
  For Daily Alerts

  ಯಾರಾದರೊಬ್ಬರು ಬೆಕ್ಕಿಗೆ ಘಂಟೆ ಕಟ್ಟಬೇಕಿತ್ತು ಕಟ್ಟಿದ್ದೀನಿ; ಇಂದ್ರಜಿತ್ ಲಂಕೇಶ್

  |

  ನಟ ದರ್ಶನ್ ಹಿಂಬಾಲಕರು ಹಾಗೂ ರೌಡಿಗಳು ಬೆದರಿಕೆ ಹಾಕುತ್ತಿದ್ದಾರೆ, ಅಶ್ಲೀಲ ಪದಗಳ ಸಂದೇಶ ಕಳುಹಿಸುತ್ತಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.

  ದರ್ಶನ್ ಬೆಂಬಲಿಗರಿಂದ ಪ್ರತಿ 30 ಸೆಕೆಂಡ್ ಗೆ ಬೆದರಿಕೆ ಕರೆಗಳು, ಅಶ್ಲೀಲ ಸಂದೇಶ, ಅಶ್ಲೀಲ ವಿಡಿಯೋಗಳು ನನ್ನ ಮೊಬೈಲ್ ಬರುತ್ತಿವೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ.

  ದರ್ಶನ್ ಹಿಂಬಾಲಕರು, ರೌಡಿಗಳಿಂದ ಕೊಲೆ ಬೆದರಿಕೆ: ಇಂದ್ರಜಿತ್ ದೂರುದರ್ಶನ್ ಹಿಂಬಾಲಕರು, ರೌಡಿಗಳಿಂದ ಕೊಲೆ ಬೆದರಿಕೆ: ಇಂದ್ರಜಿತ್ ದೂರು

  ಪೊಲೀಸ್ ಕಮಿಷನರ್ ಬಳಿ ದೂರು ನೀಡಿದ ಬಳಿಕ ಮಾತನಾಡಿದ ಇಂದ್ರಜಿತ್ ಲಂಕೇಶ್, "ಈ ಬಗ್ಗೆ ನನಗೆ ಬರುತ್ತಿರುವ ದೂರವಾಣಿ ಕರೆಯ ನಂಬರ್, ಆಶ್ಲೀಲ ಪದಗ ಬಳಸಿ ಕಳುಹಿಸಿದ ಸಂದೇಶಗಳನ್ನು ತೋರಿಸಿದ್ದೇನೆ. ಬಳಿಕ ಅವರು ಸೌತ್ ಈಸ್ಟ್ ಡಿಸಿಪಿ ಜೊತೆ ಮಾತನಾಡಿ, ಕೋರಮಂಗಲ ಡಿಸಿಪಿ ಬಳಿ ದೂರು ನೀಡಲು ಹೇಳಿದ್ದಾರೆ. ಇಂಥವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ" ಎಂದರು.

  "ಬೆದರಿಕೆ ಕರೆಗಳು, ಟ್ರೋಲ್, ಅಶ್ಲೀಲ ಭಾಷೆ ಅಶ್ಲೀಲ ಚಿತ್ರ ಮತ್ತು ಯಾರು ಇದರ ಹಿಂದೆ ಇದರೆ ಎನ್ನುವ ತನಿಖೆ ಮಾಡಲಿ ಗೊತ್ತಾಗುತ್ತೆ. 30 ಸೆಕಂಡ್ ಗೂ ಫೋನ್ ಮಾಡುತ್ತಾರೆ, ಅಶ್ಲೀಲ ಭಾಷೆ ಉಪಯೋಗಿಸಿ ಸಂದೇಶ ಕಳುಹಿಸುತ್ತಿದ್ದಾರೆ. ಈ ರೀತಿಯ ಅಶ್ಲೀಲ ಪದ ಬಳಸುವುದು ಭಯಾನಕ. ಹಾಗಾಗಿ ಯಾರಾದರೊಬ್ಬರು ಬೆಕ್ಕಿಗೆ ಘಂಟೆ ಕಟ್ಟಬೇಕಿತ್ತು ನಾನು ಕಟ್ಟಿದ್ದೀನಿ" ಎಂದು ಇಂದ್ರಜಿತ್ ಹೇಳಿದ್ದಾರೆ.

  ಇದೇ ಸಮಯದಲ್ಲಿ ಡ್ರಗ್ಸ್ ವಿಚಾರವಾಗಿಯೂ ಮಾತನಾಡಿದ್ದಾರೆ. "ಡ್ರಗ್ಸ್ ವಿಚಾರದಲ್ಲಿ ಏನು ಕಿತ್ತಾಕಿದ್ದಾರೆ ಅಂತ ಮಾತನಾಡುತ್ತಿದ್ದರು. ಆ ಬಗ್ಗೆ ಮಾತನಾಡಿದೇವು. ನೀವು ನೀಡಿದ ಮಾಹಿತಿಯಿಂದ ಕೋಟ್ಯಾಂತರ ರೂ. ಡ್ರಗ್ಸ್ ವಶಕ್ಕೆ ಪಡೆದಿರುವುದಾಗಿ ಹೇಳಿದರು. ಇದಕ್ಕೆ ನಾನು ಶುಭಾಶಯ ಹೇಳಿದೆ" ಎಂದು ಇಂದ್ರಜಿತ್ ಪ್ರತಿಕ್ರಿಯೆ ನೀಡಿ ಕೋರಮಂಗಲ ಡಿಸಿಪಿ ಕಚೇರಿಗೆ ಕಡೆ ತೆರಳಿದರು.

  ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada

  ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಇಂದ್ರಜಿತ್ ಲಂಕೇಶ್ ಪತ್ರಿಕಾಗೋಷ್ಠಿ ನಡೆಸಿದ್ದರು. "ನನಗೆ ಕಾಲ್ ಮಾಡುತ್ತಿರುವವರಿಗೆ, ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವವರಿಗೆ ಪಾಠ ಕಲಿಸದೇ ಬಿಡಲ್ಲ. ಇಂಥ ಬೆದರಿಕೆಗಳು ನನಗೆ ಹೊಸದೇನೂ ಅಲ್ಲ. ಇಂಥಹಾ ಬೆದರಿಕೆಗಳನ್ನು ಹಲವು ವರ್ಷಗಳಿಂದಲೂ ನೋಡುತ್ತಾ ಬಂದಿದ್ದೇನೆ. ಇವರನ್ನು ಸುಮ್ಮನೆ ಬಿಡಲ್ಲ. ಸೈಬರ್ ಠಾಣೆಗೆ ದೂರು ನೀಡುತ್ತೇನೆ'' ಎಂದಿದ್ದರು.

  English summary
  Indrajit lankesh files a complaint against Darshan followers who giving life threats to him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X