ಇಂದ್ರಜಿತ್ ಲಂಕೇಶ್ -ಕುಮಾರಸ್ವಾಮಿ ಭೇಟಿಯ ಫೋಟೋ ವೈರಲ್
ಚಾಲೆಂಜಿಂಗ್ ಸ್ಟಾರ್ ದೊಡ್ಡ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ದರ್ಶನ್ ಹೆಸರಿನಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣ ಬೆನ್ನಲ್ಲೇ ದರ್ಶನ್ ವಿರುದ್ಧ ಹಲ್ಲೆ ಆರೋಪ ಕೇಳಿಬರುತ್ತಿದೆ. ನಿರ್ದೇಶಕ ಇಂದ್ರಜಿತ್ ಲಂಕೇಶ್, ದರ್ಶನ್ ವಿರುದ್ಧ ಹಲ್ಲೆ ಆರೋಪ ಮಾಡಿದ್ದಾರೆ.
ಇದರ ಬೆನ್ನಲ್ಲೇ ಇಂದ್ರಜಿತ್ ಲಂಕೇಶ್ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭೇಟಿಯಾದ ಫೋಟೋ ವೈರಲ್ ಆಗಿದೆ. ಇಂದ್ರಜಿತ್ ಲಂಕೇಶ್ ಮಾಜಿ ಮುಖ್ಯಮಂತ್ರಿಯನ್ನು ದಿಢೀರ್ ಭೇಟಿಯಾದ ಹಿಂದಿನ ಉದ್ದೇಶವೇನು ಎನ್ನುವ ಕುತೂಹಲ ಮೂಡಿಸಿದೆ.
ದರ್ಶನ್ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೇ ಕುಮಾರಸ್ವಾಮಿ ಭೇಟಿಯ ಫೋಟೋ ವೈರಲ್ ಆಗಿರುವ ಬಗ್ಗೆ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ. ಅಂದಹಾಗೆ ಇದು ಇತ್ತೀಚಿಗೆ ಭೇಟಿಯಾದ ಫೋಟೋನಾ ಅಥವಾ ಹಳೆಯ ಪೋಟೋನಾ ಎನ್ನುವುದು ಇನ್ನು ಅಧೃಕೃತವಾಗಿಲ್ಲ. ಆದರೆ ಭೇಟಿಯ ವೇಳೆ ಟೇಬಲ್ ಮೇಲೆ ಇದ್ದ ಪತ್ರಿಕೆಯ ಹೆಡ್ ಲೈನ್ ನೋಡಿದ್ರೆ ಇದು ಹಳೆಯ ಫೋಟೋ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಈ ಫೋಟೋವನ್ನು ದರ್ಶನ್ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.ಇಂದ್ರಜಿತ್ ಆರೋಪದ ಬಳಿಕ ದರ್ಶನ್ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಕಿಡಿಕಾರಿದ್ದರು. ಇದರ ಬೆನ್ನಲ್ಲೇ ಇಬ್ಬರು ಭೇಟಿಯ ಫೋಟೋ ವೈರಲ್ ಆಗಿರುವುದು ಮತ್ತಷ್ಟು ಅನುಮಾನ ಮೂಡಿಸುತ್ತಿದೆ.
Recommended Video
ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ರಿಕಾಗೋಷ್ಠಿ ನಡೆಯುವ ಸಾಧ್ಯತೆ ಇದೆ. ದರ್ಶನ್ ಪ್ರೆಸ್ ಮೀಟ್ ಬಳಿಕ ಇಂದ್ರಜಿತ್ ಕೂಡ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ಮತ್ತಷ್ಟು ವಿಚಾರಗಳನ್ನು ಬಹಿರಂಗ ಪಡಿಸುವ ಜೊತೆಗೆ ಕುಮಾರಸ್ವಾಮಿ ಭೇಟಿಯ ಬಗ್ಗೆಯೂ ಸ್ಪಷ್ಟಪಡಿಸುವ ಸಾಧ್ಯತೆ ಇದೆ.


Click it and Unblock the Notifications











