ದರ್ಶನ್‌ಗಿಲ್ಲ ಮುಕ್ತಿ: ಮತ್ತೆ ಬಾಂಬ್ ಎಸೆದ ಇಂದ್ರಜಿತ್, ಗಲಾಟೆ ಬಗ್ಗೆ ಸಂದೇಶ್ ಹೇಳಿದ 'ಸತ್ಯ'

ದರ್ಶನ್‌, ಮೈಸೂರಿನ ಸಂದೇಶ್ ಪ್ರಿನ್ಸ್‌ ಹೋಟೆಲ್‌ನಲ್ಲಿ ನೌಕರನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ಬಹುತೇಕ ಅಂತ್ಯವಾಯಿತು ಎಂದುಕೊಂಡಾಗಲೇ ನಿರ್ದೇಶಕ ಇಂದ್ರಜಿತ್ ಲಂಕೇಶ್ ಆಡಿಯೋ ಬಾಂಬ್ ಒಂದನ್ನು ಎಸೆದಿದ್ದಾರೆ.

ನಟ ದರ್ಶನ್, ಸಂದೇಶ್ ಪ್ರಿನ್ಸ್‌ ಹೋಟೆಲ್‌ನಲ್ಲಿ ದಲಿತ ನೌಕರನನೊಬ್ಬನನ್ನು ಹೊಡೆದಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಮಾಡಿದ್ದರು. ಈ ಬಗ್ಗೆ ಮೈಸೂರು ಪೊಲೀಸರು ಸ್ವಯಂಪ್ರೇರಿತ ದೂರು ಸಹ ದಾಖಲಿಸಿಕೊಂಡಿದ್ದರು.

ದರ್ಶನ್‌ ಅವರಿಂದ ಹಲ್ಲೆಗೆ ಒಳಗಾದ ವ್ಯಕ್ತಿ ಎನ್ನಲಾಗಿದ್ದ ಗಂಗಾಧರ್ ಅನ್ನು ಇಂದು ಪೊಲೀಸರು ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಗಂಗಾಧರ್, 'ದರ್ಶನ್ ನನಗೆ ಹೊಡೆಯಲಿಲ್ಲ ಬದಲಿಗೆ ಬೈದರು ಅಷ್ಟೆ. ಹಾಗೂ ನಾನು ದಲಿತ ಸಮುದಾಯಕ್ಕೆ ಸೇರಿದವನಲ್ಲ ನಾನು ಬ್ರಾಹ್ಮಣ ಸಮುದಾಯದವನು ಹಾಗೂ ನನ್ನ ಹೆಂಡತಿ ಹೋಟೆಲ್‌ ಬಳಿ ಬಂದು ಜಗಳವಾಡಲು ಸಾಧ್ಯವಿಲ್ಲ. ನನಗೆ ಮದುವೆಯೇ ಆಗಿಲ್ಲ'' ಎಂದು ಹೇಳಿದರು.

ಗಂಗಾಧರ್ ಹೇಳಿಕೆ ಬಳಿಕ ಪ್ರಕರಣ ಮುಗಿಯಿತೆಂದು ಅಂದುಕೊಳ್ಳುತ್ತಿರುವ ವೇಳೆಗೆ ಇಂದ್ರಜಿತ್ ಲಂಕೇಶ್ ಆಡಿಯೋ ಬಾಂಬ್ ಒಂದನ್ನು ಎಸೆದಿದ್ದು, ಆಡಿಯೋದಲ್ಲಿ ಸಂದೇಶ್ ಪ್ರಿನ್ಸ್‌ ಹೋಟೆಲ್‌ನ ಮಾಲೀಕ ಸಂದೇಶ್, ದರ್ಶನ್ ಹಾಗೂ ಅವರ ಗೆಳೆಯರ ಬಗ್ಗೆ ಮಾತನಾಡಿರುವುದು ದಾಖಲಾಗಿದೆ.

ನೌಕರನನ್ನು ಹೊಡೆದಿರುವುದಾಗಿ ಹೇಳಿರುವ ಸಂದೇಶ್

ನೌಕರನನ್ನು ಹೊಡೆದಿರುವುದಾಗಿ ಹೇಳಿರುವ ಸಂದೇಶ್

ಈಗ ಇಂದ್ರಜಿತ್ ಬಿಡುಗಡೆ ಮಾಡಿರುವ ಆಡಿಯೋನಲ್ಲಿ ಸ್ವತಃ ಹೋಟೆಲ್ ಮಾಲೀಕ ಸಂದೇಶ್, ತಮ್ಮ ಹೋಟೆಲ್‌ನಲ್ಲಿಯೇ ದರ್ಶನ್, ನೌಕರನನ್ನು ಹೊಡೆದಿದ್ದಾಗಿ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಈ ಮಾತನ್ನು ಅವರು ಇಂದ್ರಜಿತ್ ಲಂಕೇಶ್ ಬಳಿಯೇ ಹೇಳಿದ್ದಾರೆ. ಆದರೆ ಮಾಧ್ಯಮಗಳು ಹಾಗೂ ಪೊಲೀಸರ ಮುಂದೆ ಸುಳ್ಳು ಹೇಳಿಕೆ ದಾಖಲಿಸಿದರೆ ಎಂಬ ಅನುಮಾನ ವ್ಯಕ್ತವಾಗಿದೆ.

ಗಲಾಟೆ ಆದಾಗ ರಾಕೇಶ್, ಹರ್ಷಾ ಇದ್ದರು

ಗಲಾಟೆ ಆದಾಗ ರಾಕೇಶ್, ಹರ್ಷಾ ಇದ್ದರು

''ಹರ್ಷಾ ಮೆಲಂತಾ, ರಾಕೇಶ್ ಪಾಪಣ್ಣ, ಎಲ್ಲ ಅಲ್ಲೇ ಇದ್ದರು. ನಾನು ಅಲ್ಲಿಗೆ ಹೋಗಿ, ಅಲ್ಲಾರಿ, ಒಬ್ಬ ಕೆಲಸದವನನ್ನು ಹಿಡಿದುಕೊಂಡು ಹೊಡಿಬೇಕಾದ್ರೆ ನೀವು ಹದಿನೈದು ಜನ ನಿಂತು ಸುಮ್ಮನೆ ನೋಡ್ತಿದ್ದೀರಲ್ಲ ನಾಚಿಕೆ ಆಗಲ್ವಾ ಅಂತ ನಾನು ಬೈದೆ. ಆದಕ್ಕೆ ಹರ್ಷಾ, ಅಣ್ಣಾ ತಪ್ಪಾಯ್ತು ಅಂದ'' ಎಂದಿದ್ದಾರೆ ಸಂದೇಶ್.

ರಾಕೇಶ್ ಪಾಪಣ್ಣ, ಹರ್ಷಾ ಮೆಲಂತಾ ಕತೆ

ರಾಕೇಶ್ ಪಾಪಣ್ಣ, ಹರ್ಷಾ ಮೆಲಂತಾ ಕತೆ

ಮುಂದುವರೆದು, ''ಅವರೆಲ್ಲ ಪೋಲಿಗಳು ಕಣ್ರಿ, ಆ ರಾಕೇಶ್ ಪಾಪಣ್ಣ ಇದ್ದಾನಲ್ಲ ಅವನ ಕೆಲ್ಸ ಏನು ಗೊತ್ತು. ಯಾವ ಲಿಟಿಕೇಶನ್ ಪ್ರಾಪರ್ಟಿ ಇರುತ್ತದೆಯೋ ಅದಕ್ಕೆ ಹೋಗಿ ಕೇಸ್ ಹಾಕಿಕೊಳ್ಳೋದು. ಒಂದು ರುಪಾಯಿ ಅವನಿಗೆ ಮೈಸೂರಿನಲ್ಲಿ ಬೆಲೆ ಇಲ್ಲ. ನಮ್ಮ ಹತ್ರ ಬಾಲ ಬಿಚ್ಚಲ್ಲ ಬಿಡಿ. ಇನ್ನು ಹರ್ಷ ಊರು ತುಂಬಾ ಸಾಲ ಮಾಡ್ಕೊಂಡು ಬಿಟ್ಟಿದಾನೆ. ಸೋಷಿಯಲ್ಸ್ ಚೆನ್ನಾಗಿ ನಡೀತಾ ಇದೆ. ಕ್ಲಬ್ ಮೆಂಬರ್‌ಶಿಪ್ ತಗೊಂಡು ಮಾಡ್ಕೊಂಡಿರೋದು. ಅವನದ್ದು ಏನು ಸ್ವಂತ ಇಲ್ಲ. ಕ್ಲಬ್ ಅಲ್ಲಿ ಅವನು ಕೂತ್ಕೊಂಡು ಅವನೇ ಕಸ್ಟಮರ್‌ಗೆ ಹೊಡೆದು ಬಿಡೋದು'' ಎಂದಿದ್ದಾರೆ ಸಂದೇಶ್.

ನಿನ್ನ ಜೊತೆ ಇರುವವರು ಯಾರೂ ಒಳ್ಳೆಯವರಲ್ಲ ಅಂದಿದ್ದೆ: ಸಂದೇಶ್

ನಿನ್ನ ಜೊತೆ ಇರುವವರು ಯಾರೂ ಒಳ್ಳೆಯವರಲ್ಲ ಅಂದಿದ್ದೆ: ಸಂದೇಶ್

''ದರ್ಶನ್, ಪವಿತ್ರ ಗೌಡ ಒಂದು ರೂಮ್, ಈ ಹದಿನೈದು ಜನಕ್ಕೆ ಅವನು ಊಟ ಹಾಕಿರೋದು ಪೂಲ್‌ ಸೈಡ್‌ನಲ್ಲಿ. ನಾನು ಬಂದು ಬೈದಿದ್ದು ಸಹ ಅವರಿಗೇನೆ. ಹರ್ಷಾ ಕ್ಷಮೆ ಕೇಳಿದ ಆಮೇಲೆ ನಾನು ಅವರನ್ನು ಕಳಿಸಿಬಿಟ್ಟೆ. ಅಮೇಲೆ ನಿನ್ನೆ ದರ್ಶನ್‌ಗೆ ಹೇಳಿದೆ, ಯಾರೂ ಒಳ್ಳೆಯವರಲ್ಲ ನಿನ್ನ ಜೊತೆ ಇರೋರು. ನೀನು ಪ್ರೆಸ್‌ಗೆಲ್ಲ ಹೋಗಿದ್ದೀಯಲ್ಲ, ತಲೆ ಕಡೆತೀನಿ ಅಂದಿದ್ದೀಯಲ್ಲ. ಇವೆಲ್ಲ ಒಳ್ಳೆಯದಲ್ಲ ದರ್ಶನ್, ಇವೆಲ್ಲ ಶಾಶ್ವತ ಅಲ್ಲ ಅಂತ ನಾನು ನೇರವಾಗಿ ಹೇಳಿದೆ'' ಎಂದಿದ್ದಾರೆ ಸಂದೇಶ್.

Recommended Video

ವೈರಲ್ ಆಯ್ತು ಕುಮಾರಸ್ವಾಮಿ, ಇಂದ್ರಜಿತ್ ಲಂಕೇಶ್ ಫೋಟೋ | Darshan Hotel Controversy | Filmibeat Kannada
ಉಮಾಪತಿ ವಿಷಯವಾಗಿಯೂ ಚರ್ಚೆ

ಉಮಾಪತಿ ವಿಷಯವಾಗಿಯೂ ಚರ್ಚೆ

ಆಡಿಯೋದಲ್ಲಿ ಇನ್ನೂ ಹಲವು ವಿಷಯಗಳನ್ನು ಸಂದೇಶ್ ಮಾತನಾಡಿದ್ದಾರೆ. ಉಮಾಪತಿ ಪ್ರಕರಣದ ಬಗ್ಗೆಯೂ ಮಾತನಾಡಿ, ಆ ಯುವತಿಯನ್ನು ಬಳಸಿಕೊಂಡು ಉಮಾಪತಿಯನ್ನು ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ್ದೀರ. ಅವನ ಮನೆ ಹಾಳು ಮಾಡಿದರೆ ನಿಮ್ಮ ಮನೆಯನ್ನು ಅವನು ಹಾಳು ಮಾಡುತ್ತಾನೆ. ಇದೆಲ್ಲ ಒಳ್ಳೆಯದಲ್ಲ ಎಂದಿದ್ದೆ. ನಮ್ಮ ಅಪ್ಪನಂತೂ ದರ್ಶನ್ ಕಾಲ್ ಮಾಡಿದ್ದ ಅಂದ್ರೆ ರೇಗಿ ಬಿಟ್ಟರು, ಬಿಟ್ಟು ಬಿಡು ಅವನನ್ನ ಅವನು ತಪ್ಪು ಮಾಡಿರುವ ಗಿಲ್ಟ್ ಅವನನ್ನು ಕಾಡಿಕೊಂಡು ಇರಲಿ, ಮತ್ತೆ ಹೋಟೆಲ್‌ ಕಡೆ ಎಲ್ಲಿಯಾದರೂ ಬಂದು ಬಿಟ್ಟಾನು ಎಂದರು ಎಂದು ಸಹ ಸಂದೇಶ್ ಆಡಿಯೋದಲ್ಲಿ ಹೇಳಿದ್ದಾರೆ.

More from Filmibeat

English summary
Indrajit Lankesh released a audio in which Sandhesh Prince hotel owner Sandesh saying that Darshan hit a employee of his hotel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X