Gowri Photoshoot: 6 ಅಡಿ ಹೈಟು.. ಕ್ಲಾಸಿ ಲುಕ್ಕು.. ಸಾನ್ಯಾ-ಸಮರ್ಜಿತ್ ಬಿಂದಾಸ್ ಫೋಟೊಶೂಟ್ ವೈರಲ್!
ಇಂದ್ರಜಿತ್ ಲಂಕೇಶ್ ಸಿನಿಮಾಗಳು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿರುತ್ತೆ. ದುಬಾರಿ ಸೆಟ್ಟು, ಅದ್ಧೂರಿ ಸಾಂಗ್, ಫೈಟ್ ಎಲ್ಲವೂ ಇರುತ್ತೆ. ಇದೂವರೆಗೂ ಆಕ್ಷನ್ ಕಟ್ ಹೇಳಿರೋ ಈ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಇನ್ನು ಮಗನನ್ನು ಚಿತ್ರರಂಗಕ್ಕೆ ಇಂಟ್ರುಡ್ಯೂಸ್ ಮಾಡುತ್ತಿದ್ದಾರೆ. ಅಂದ್ಮೇಲೆ ಈ ಸಿನಿಮಾ ಮತ್ತಷ್ಟು ಅದ್ಧೂರಿಯಾಗೇ ಇರುತ್ತೆ.
ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಸಿನಿಮಾಗಾಗಿ ಸಂಪೂರ್ಣ ತಯಾರಿ ಮಾಡಿಕೊಂಡೇ ಎಂಟ್ರಿ ಕೊಡುತ್ತಿದ್ದಾರೆ. ಸಿನಿಮಾ ಮುಹೂರ್ತಕ್ಕೂ ಮುನ್ನ ಮಾಡಿರೋ ಫೋಟೊಶೂಟ್ ಇದಕ್ಕೆ ಸಾಕ್ಷಿ. ಸಮರ್ಜಿತ್ ಹಾಗೂ ಸಾನ್ಯಾ ಇಬ್ಬರ ಕೆಮಿಸ್ಟ್ರಿಯನ್ನು ಈ ಫೋಟೊ ಶೂಟ್ ಹೇಳುತ್ತಿದೆ.

ದಿವಂಗತ ಪಿ. ಲಂಕೇಶ್ ಮೊಮ್ಮಗ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರೋದ್ರಿಂದ ನಿರೀಕ್ಷೆಯಂತೂ ಇದ್ದೇ ಇದೆ. ಅದಕ್ಕೆ ತಕ್ಕಂತೆ 'ಗೌರಿ' ಅನ್ನೋ ಟೈಟಲ್ ಇಟ್ಟಿದ್ದಾರೆ. ಹೀಗಾಗಿ ಈ ಸಿನಿಮಾ ಮೂಲಕ ಇಂದ್ರಜಿತ್ ಲಂಕೇಶ್ ಏನು ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋ ಸುಳಿವು ಇಲ್ಲ. ಆದರೂ, ಸಿನಿಮಾ ಫೋಟೊಶೂಟ್ ಹಾಗೂ ಟೈಟಲ್‌ನಿಂದ ಗಮನ ಸೆಳೆಯುತ್ತಿದೆ.
ಸಮರ್ಜಿತ್ ಲಂಕೇಶ್ ಜೊತೆ ಬಿಗ್ ಬಾಸ್ ಹಾಗೂ 'ಪುಟ್ಟಗೌರಿ' ಖ್ಯಾತಿಯ ಸಾನ್ಯಾ ಲಂಕೇಶ್ ಕೆಮಿಸ್ಟ್ರಿ ವರ್ಕ್ ಫೋಟೊಶೂಟ್‌ನಲ್ಲಿ ಕ್ಲಿಕ್ ಆಗುವಂತೆ ಕಾಣುತ್ತಿದೆ. ಸಮರ್ಜಿತ್ ಶರ್ಟ್‌ಲೆಸ್ ಫೋಟೊಗಳು ಬಾಲಿವುಡ್ ನಟರನ್ನು ನೆನಪಿಸುತ್ತಿವೆ. ಹಾಗೇ ದುಬಾರಿ ಬೈಕ್ ಪಕ್ಕದಲ್ಲಿ ನಿಂತಿರೋ ತೆಗೆದಿರೋ ಫೋಟೊಗಳು ಕೂಡ ಬಾಲಿವುಡ್ ನಟರ ಫೀಲ್ ಕೊಡುತ್ತಿದೆ.

ಸಮರ್ಜಿತ್‌ಗೆ ಸಾನ್ಯಾ ಅಯ್ಯರ್ ನಾಯಕಿ. ಹೀಗಾಗಿ ಇಬ್ಬರೂ ಕಾಂಬಿನೇಷನ್‌ನಲ್ಲಿ ತೆಗೆದ ಫೋಟೊಗಳು ಕೂಡ ಅಷ್ಟೇ ಪ್ರಾಮಿಸಿಂಗ್ ಆಗಿವೆ. ಕೆಲವು ಫೋಟೊಗಳಂತೂ ಸಿಕ್ಕಾಪಟ್ಟೆ ಬೋಲ್ಡ್ ಆಗಿವೆ ಎಂದೆನಿಸುತ್ತಿವೆ. ಫೋಟೊಶೂಟ್‌ನಲ್ಲಿ ಜೋಡಿ ಚೆನ್ನಾಗಿದೆ ಅಂತ ಅನಿಸಿದ್ದರೂ, ಸಿನಿಮಾದಲ್ಲಿ ಹೇಗಿರುತ್ತೆ? ಅನ್ನೋ ಕುತೂಹಲವಿದೆ.
ಅಂದ್ಹಾಗೆ, ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯಾ ಅಯ್ಯರ್ ಫೋಟೊಶೂಟ್ ಅನ್ನು ಸ್ಯಾಂಡಲ್‌ವುಡ್‌ನ ಸ್ಟಾರ್ ಸಿನಿಮಾಟೋಗ್ರಾಫರ್ ಭುವನ್ ಗೌಡ ಮಾಡಿದ್ದಾರೆ. ಈ ಲುಕ್ ಟೆಸ್ಟ್‌ಗೆ ಕ್ಲಿಕ್ ಆಗಿದ್ದು, ತೆರೆಮೇಲೆ ಹೇಗೆ ಮೂಡಿ ಬರುತ್ತೆ ಅನ್ನೋ ಕುತೂಹಲವಿದೆ.
ಭುವನ್ ಗೌಡ ಜೊತೆ ಕ್ಯಾಮರಾಮ್ಯಾನ್ ಎಜೆ ಶೆಟ್ಟಿ ಅವ್ರಿಂದಲೂ ಫೋಟೊಶೂಟ್ ಮಾಡಿಸಲಾಗಿದೆ. ಸಾನಿಯಾ ಹಾಗೂ ಸಮರ್ಜಿತ್ ಲಂಕೇಶ್ ಕೆಮಿಸ್ಟ್ರಿಯನ್ನು ಇಬ್ಬರು ಕ್ಯಾಮರಾಮ್ಯಾನ್‌ಗಳೂ ಕೂಡ ಸಖತ್ ಆಗಿಯೇ ಸೆರೆ ಹಿಡಿದಿದ್ದಾರೆ.
'ಗೌರಿ' ಸಿನಿಮಾ ನಾಳೆ (ಆಗಸ್ಟ್ 31)ರಂದು ಅದ್ಧೂರಿಯಾಗಿ ಮುಹೂರ್ತ ಆಗುತ್ತಿದೆ. ಈ ಸಮಾರಂಭಕ್ಕೆ ಗಣ್ಯಾತೀಗಣ್ಯರೇ ಆಗಮಿಸುವ ಸಾಧ್ಯತೆಯಿದೆ. ಈ ಸಿನಿಮಾಗಾಗಿ ಸಮರ್ಜಿತ್ ಈಗಾಗಲೇ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದು ಸಾನಿಯಾ ಐಯ್ಯರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೀಗಾಗಿ ಸಿನಿ ಪ್ರಿಯರಿಗೆ ಗಮನ ಸೆಳೆದಿದೆ.
ಈಗಾಗಲೇ ಇಂದ್ರಜಿತ್ ತಮ್ಮ ಮಗನ ಪಾತ್ರಕ್ಕೆ ಬೇರೆ ಬೇರೆ ರೀತಿಯಲ್ಲಿ ಲುಕ್ ಟೆಸ್ಟ್ ಮಾಡಿದ್ದಾರೆ. ಸುಮಾರು ನಾಲ್ಕೈದು ಲುಕ್‌ನಲ್ಲಿ ಫೋಟೋ ಶೂಟ್ ಮಾಡಿಸಿ ಲುಕ್ ಟೆಸ್ಟ್ ಮಾಡಿದ್ದಾರೆ. ಬರೀ ಫೋಟೊಶೂಟ್ ಮಾತ್ರವಲ್ಲದೇ ಹಳೆ ಸಿನಿಮಾ ಸೀನ್‌ಗಳನ್ನು ರೀ ಕ್ರಿಯೇಟ್ ಮಾಡುವ ಮೂಲಕ ಮಗನ ಆಕ್ಟಿಂಗ್ ಅನ್ನೂ ಕೂಡ ಟೆಸ್ಟ್ ಮಾಡಿದ್ದಾರೆ.
ಸಮರ್ಜಿತ್ ಲುಕ್, ಆಕ್ಟಿಂಗ್, ಸ್ಟಂಟ್, ಡ್ಯಾನ್ಸ್ ಎಲ್ಲದರಲ್ಲೂ ಪರ್ಫೆಕ್ಟ್ ಅನ್ನಿಸಿದ್ದಾರೆ. ಆಗಸ್ಟ್ 31ರಂದು ಅದ್ಧೂರಿಯಾಗಿ ಮುಹೂರ್ತ ಮಾಡಿ ಆ ಬಳಿಕ ಸಿನಿಮಾ ಶೂಟಿಂಗ್‌ಗೆ ಇಂದ್ರಜಿತ್ ಧುಮುಕಲಿದ್ದಾರೆ.


Click it and Unblock the Notifications











