For Quick Alerts
    ALLOW NOTIFICATIONS  
    For Daily Alerts

    ಶ್ರೀ ಸಿದ್ಧಗಂಗಾ ಮಠದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹುಟ್ಟುಹಬ್ಬ ಆಚರಣೆ

    |
    ಹುಟ್ಟುಹಬ್ಬದ ಆಚರಣೆಗಾಗಿ ಸಿದ್ದಗಂಗಾ ಮಠಕ್ಕೆ ಹೋಗಲಿದ್ದಾರೆ ಇಂದ್ರಜಿತ್..! | Filmibeat Kannada

    ಕನ್ನಡ ಚಿತ್ರರಂಗದಲ್ಲಿ ಸ್ಟೈಲಿಶ್ ನಿರ್ದೇಶಕ ಎಂದೇ ಹೆಸರು ಮಾಡಿರುವವರು ಇಂದ್ರಜಿತ್ ಲಂಕೇಶ್. ತಮ್ಮ ತಂದೆ ಪಿ.ಲಂಕೇಶ್ ಅವರ ಆದರ್ಶದಂತೆಯೇ ಇದುವರೆಗೂ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬಂದಿರುವ ಇಂದ್ರಜಿತ್ ಅವರು ಈ ಬಾರಿಯೂ ಸರಳವಾಗಿ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದ್ದಾರೆ.

    ಇದೇ ತಿಂಗಳ 22ನೇ ತಾರೀಖು ಅಂದರೆ ನಾಳೆ ಸಿದ್ಧಗಂಗಾ ಮಠದಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಇಂದ್ರಜಿತ್ ಲಂಕೇಶ್ ನಿರ್ಧರಿಸಿದ್ದಾರೆ. ಸ್ವಾಮೀಜಿಯವರ ಆಶೀರ್ವಾದ ಪಡೆದು ನಂತರ ಅಲ್ಲಿನ ಆಶ್ರಮದ ಮಕ್ಕಳಿಗೆ ಊಟೋಪಚಾರ ನೀಡಲಿದ್ದಾರೆ.

    ಶಿವಮೊಗ್ಗದಲ್ಲಿ 'ಶಕೀಲಾ' ಬಯೋಪಿಕ್ ಚಿತ್ರದ ಶೂಟಿಂಗ್

    ಇದಲ್ಲದೇ ಪಿ.ಲಂಕೇಶ್ ಅವರ ಹಲವಾರು ಪುಸ್ತಕಗಳನ್ನೂ ವಿತರಿಸಲಿದ್ದಾರೆ. ಇಲ್ಲಿ ಓದಿದ ಮಕ್ಕಳೆಲ್ಲ ಅಧಿಕಾರಿಗಳಾಗಿದ್ದಾರೆ. ದೊಡ್ಡ ಹುದ್ದೆಗಳಿಗೂ ಏರುತ್ತಾರೆ. ಈ ಮಕ್ಕಳು ತಮ್ಮ ತಂದೆಯವರು ಬರೆದ ಪುಸ್ತಕಗಳನ್ನು ಓದಿ ಸ್ಫೂರ್ತಿ ಪಡೆಯಲಿ ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

    'ತುಂಟಾಟ' ಚಿತ್ರದ ನಂತರದಲ್ಲಿ ಇಂದ್ರಜಿತ್ ಅವರು ಮಾದರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಮೊದಲ ಒಂದಷ್ಟು ವರ್ಷ ಅನಾಥಾಶ್ರಮದ ಮಕ್ಕಳಿಗೆ ಬಟ್ಟೆ, ಊಟ ವಿತರಿಸುವ ಮೂಲಕ ಇಂದ್ರಜಿತ್ ತೃಪ್ತಿ ಕಂಡಿದ್ದರು.

    ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ರಾಜಕೀಯಕ್ಕೆ ಎಂಟ್ರಿ

    ಆ ಬಳಿಕ ಪತ್ರಕರ್ತರ ಜೊತೆಗೂಡಿ ಸರಳವಾಗಿಯೇ ಸಂಭ್ರಮಿಸಿದ್ದರು. ಮತ್ತೊಂದು ಹುಟ್ಟುಹಬ್ಬದ ನೆನಪಿಗೆ ರಾಷ್ಟ್ರಪಕ್ಷಿ ನವಿಲನ್ನು ದತ್ತು ಪಡೆದಿದ್ದರು. ಬಳಿಕ ವೀರ ಯೋಧ ಹನುಮಂತ ಕೊಪ್ಪದ್ ಮಡದಿಗೆ ಸನ್ಮಾನಿಸುವ ಮೂಲಕವೂ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

    ಈ ಬಾರಿ ಅವರು ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಸಮ್ಮುಖದಲ್ಲಿಯೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲು ಮನಸ್ಸು ಮಾಡಿದ್ದಾರೆ.

    English summary
    Kannada Director Indrajit Lankesh to celebrate his Birthday in Siddaganga mutt.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
    X