ಅರುಣಾಕುಮಾರಿ ಪ್ರಕರಣ: ದರ್ಶನ್ ಮತ್ತು ಸ್ನೇಹಿತರ ವಿರುದ್ಧ ಸಿಡಿದೆದ್ದ ಇಂದ್ರಜಿತ್
''ಸೆಲೆಬ್ರಿಟಿಗಳು ಹಲ್ಲೆ ಮಾಡ್ತಾರೆ, ಬೆದರಿಕೆ ಹಾಕ್ತಾರೆ, ಆಮೇಲೆ ತಪ್ಪಿಸಿಕೊಳ್ಳುತ್ತಿದ್ದಾರೆ. ಸಾಮಾನ್ಯರಿಗೆ ಶಿಕ್ಷೆ ಕೊಡ್ತಾರೆ, ಜೈಲಿಗೆ ಹಾಕ್ತಾರೆ'' ಎಂದು ನಟ ದರ್ಶನ್ ಮತ್ತು ಸ್ನೇಹಿತರ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ.
Recommended Video
ಮೈಸೂರಿನ ಸಂದೇಶ ಹೋಟೆಲ್‌ವೊಂದರಲ್ಲಿ ನಟ ದರ್ಶನ್ ಮತ್ತು ಸ್ನೇಹಿತರು ದಲಿತ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ, ಆ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಪಿಸಿರುವ ಇಂದ್ರಜಿತ್ ಲಂಕೇಶ್ ಗುರುವಾರ ಬೆಳಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರು.
ಹೋಮ್ ಮಿನಿಸ್ಟರ್ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಇಂದ್ರಜಿತ್ ''ಅರುಣಾ ಕುಮಾರಿಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ'' ಎಂದು ದೂರಿದ್ದಾರೆ. ಅರುಣಾಕುಮಾರಿ ಲೋನ್ ಪ್ರಕರಣದ ಬಗ್ಗೆ ಮಾತು ಮುಂದುವರಿಸಿದ ಇಂದ್ರಜಿತ್ ಹಲವು ದರ್ಶನ್ ವಿರುದ್ಧ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿ...

ಸ್ವಾರ್ಥಕ್ಕಾಗಿ ಮಹಿಳೆ ಬಳಕೆ
''ಲೋನ್ ವಿವಾದದಲ್ಲಿ ಮಹಿಳೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡು, ಪೊಲೀಸರ ಮೇಲೆ ಒತ್ತಡ ತಂದು ಪ್ರಭಾವಿಗಳು ಮಾತ್ರ ಪ್ರಕರಣದಿಂದ ನುಣುಚಿಕೊಳ್ಳುತ್ತಿದ್ದಾರೆ.ಇದು ಸಾಮಾನ್ಯ ಮಹಿಳೆಯರಲ್ಲಿ ನ್ಯಾಯದ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತಿದೆ. ಇದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ ಸುಮ್ಮನೆ ಬಿಡುತ್ತಿದ್ದರಾ? ಜನಸಾಮಾನ್ಯರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಮತ್ತೊಂದು ನ್ಯಾಯವೇ?'' ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ.

ತೋಟಕ್ಕೆ ಕರೆಯಿಸಿಕೊಂಡಿದ್ದೇಕೆ?
'ಲೋನ್ ವಿಚಾರದಲ್ಲಿ ಮಹಿಳೆ ವಿಚಾರ ತಿಳಿದ ಮೇಲೆ ಆಕೆಯನ್ನು ತೋಟಕ್ಕೆ ಕರೆಯಿಸಿಕೊಂಡಿದ್ದು ಏಕೆ' ಎಂದು ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ. 'ಮಹಿಳೆ ಬಗ್ಗೆ ಮೊದಲೇ ಮಾಹಿತಿ ಇದ್ದರೂ ತೋಟದ ತೋರಿಸಿದ್ದು ಏಕೆ, ಮನೆಗೆ ಕರೆದು ಮಾತನಾಡಿಸಿದ್ದು ಏಕೆ' ಎಂದು ನಟ ಸ್ಪಷ್ಟನೆ ಕೊಡಲಿ ಎಂದು ಡೈರೆಕ್ಟರ್ ಆಗ್ರಹಿಸಿದ್ದಾರೆ.

ಬೆದರಿಕೆ ಏಕೆ ಹಾಕಿದ್ರಿ?
'ಏನೂ ತಪ್ಪು ಮಾಡಿಲ್ಲ ಎನ್ನುವುದಾದರೇ ಮಹಿಳೆಯನ್ನು ರಾಜರಾಜೇಶ್ವರಿ ನಗರದ ಹೆಬ್ಬಾಗಿಲ ಬಳಿ ಇನೋವಾ ಕಾರಿನಲ್ಲಿ ಕೂರಿಸಿಕೊಂಡು, ಇದೇ ರಾಕೇಶ್ ಪಾಪಣ್ಣ ಮತ್ತು ಸ್ನೇಹಿತರು ಬೆದರಿಕೆ ಹಾಕಿದ್ದು ಏಕೆ 'ಎಂದು ಪ್ರಶ್ನಿಸಿ ಈ ಪ್ರಕರಣದ ಬಗ್ಗೆ ಮತ್ತಷ್ಟು ಅನುಮಾನ ಮೂಡಿಸಿದ್ದಾರೆ.

ತಲೆ ಸೀಳ್ತೀನಿ ಅಂತಾರೆ, ಮತ್ತೆ ಒಂದಾದ್ರು ಅಂತಾರೆ
'ಒಮ್ಮೆ ತಲೆ ಸೀಳ್ತಿನಿ, ತಲೆ ಹೊಡಿತಿನಿ ಅಂತಾರೆ. ಆಮೇಲೆ ಏನು ಆಗಿಲ್ಲ ಸಂಧಾನ ಮಾಡಿಕೊಂಡ್ವಿ ಅಂತಾರೆ. ಮಹಿಳೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡು ಈಗ ಏನೂ ಆಗಿಲ್ಲ ಅಂದ್ರೆ ಏನು ಅರ್ಥ. ಸಾಮಾನ್ಯರಿಗೆ ಶಿಕ್ಷೆ, ಜೈಲು. ಸೆಲೆಬ್ರಿಟಿಗಳಿಗೆ ಸೆಟಲ್‌ಮೆಂಟ್ ಎಂದು ಇಂದ್ರಜಿತ್ ಪ್ರಶ್ನಿಸಿದ್ದಾರೆ. ಮಹಿಳೆ ಪರ ನಾನಿಲ್ಲ, ಆದರೆ ಮಹಿಳೆಗೆ ನ್ಯಾಯ ಸಿಗಬೇಕು' ಎಂದು ನಿರ್ದೇಶಕರು ಗಂಭೀರ ಆರೋಪ ಮಾಡಿದ್ದಾರೆ.


Click it and Unblock the Notifications











