ಕಮಲ್ ಹಾಸನ್ 'ಇಂಡಿಯನ್ -02'ಗೆ ಸೆಡ್ಡು ಹೊಡೆದ ಇಂದ್ರಜಿತ್ ಲಂಕೇಶ್ 'ಗೌರಿ'...!
ಇಂದ್ರಜಿತ್ ಲಂಕೇಶ್ ಅವರ ಸಿನಿಮಾಗಳಲ್ಲಿ ಮೊದಲಿಂದ ಹಾಡುಗಳು ಪ್ರಾಮುಖ್ಯತೆಯನ್ನ ಪಡೆದಿರುತ್ತವೆ. ಇವರು ಆಯ್ಕೆ ಮಾಡಿಕೊಳ್ಳುವ ಟ್ಯೂನಿನಲ್ಲೇ ಜನರನ್ನು ಸಮ್ಮೋಹಕಗೊಳಿಸುವ ಗುಣವಿರುತ್ತದೆ. ಜೊತೆಗೆ ಮನಸಿಗೆ ಹತ್ತಿರವಾದ ಸಾಲುಗಳು ಯಾವಾಗಲೂ ಗೆಲುವು ಸಾಧಿಸುತ್ತದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಗೌರಿ ಚಿತ್ರದ 'ಧೂಳ್' ಹಾಡು ಅಕ್ಷರಶಃ ಧೂಳೆಬ್ಬಿಸುತ್ತಿದೆ.
ಹೌದು, ಮೊನ್ನೆಯಷ್ಟೇ ಬಿಡುಗಡೆಯಾದ ಜವಾರಿ ಶೈಲಿಯ ಧೂಳ್ ಹಾಡು, ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಟಾಪ್ 5 ಟ್ರೆಂಡಿಂಗ್‌ನಲ್ಲಿದೆ. ಇನ್ನೂ ಈ ಹಾಡು ಇಂದಿನ ಯುವಜನಾಂಗವನ್ನ ಎಷ್ಟರ ಮಟ್ಟಿಗೆ ಸೆಳೆದಿದೆ ಎಂದರೆ ಲಕ್ಷಾಂತರ ಮಂದಿ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.ಸಮರ್ಜಿತ್ ಲಂಕೇಶ್ ಮತ್ತು ಸಾನ್ಯಾ ಅವರಂತೆಯೇ ಹೆಜ್ಜೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ.

ಇನ್ನೂ. ಇದು ಸಾಲದು ಎಂಬಂತೆ ಈ ಹಾಡು ಆಲ್ ಇಂಡಿಯಾ ಲೆವೆಲ್ ನಲ್ಲಿ ಕಲ್ಕಿ ಮತ್ತು ಪುಷ್ಪ 2 ಚಿತ್ರದ ಹಾಡುಗಳಿಗೆ ಕೂಡ ಗೌರಿ ಚಿತ್ರದ ಧೂಳ್ ಹಾಡು ತೀವೃವಾದ ಪೈಪೋಟಿಯನ್ನೂ ನೀಡುತ್ತಿದೆ. ಈ ಮೂಲಕ ಹೊಸ ಇತಿಹಾಸವನ್ನೂ ಬರೆದಿದೆ. ಹೌದು, ಆಲ್ ಇಂಡಿಯಾ ಲೆವಲ್ ಟ್ರೆಂಡಿಂಗ್ ಲಿಸ್ಟ್‌ನಲ್ಲಿ ಮೊದಲನೇ ಸ್ಥಾನದಲ್ಲಿ ಡಾರ್ಲಿಂಗ್ ಪ್ರಭಾಸ್ ಅಭಿನಯದ ಕಲ್ಕಿ ಚಿತ್ರ ಇದ್ದರೆ, ಎರಡನೇ ಸ್ಥಾನದಲ್ಲಿ ಪುಷ್ಪ-02 ಚಿತ್ರದ ಹಾಡು ಇದೆ. ಆ ನಂತರ ಸ್ಥಾನದಲ್ಲಿ ಕನ್ನಡದ ಗೌರಿ ಸಿನಿಮಾದ ಧೂಳ್ ಹಾಡು ಇದೆ. ಇನ್ನೂ ವಿಶೇಷ ಅಂದರೆ ಗೌರಿಯ ಈ ಹಾಡಿನ ಮುಂದೆ ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರದ ಹಾಡಿನ ಕಮಾಲ್ ನಡೆಯಲಿಲ್ಲ. ಇಂಡಿಯನ್ 02 ಚಿತ್ರದ ಹಾಡನ್ನೂ ಹಿಂದಿಕ್ಕಿದೆ ಗೌರಿ ಚಿತ್ರದ ಹಾಡು.
ಅಂದ್ಹಾಗೇ ಶಿವು ಬೆರ್ಗಿ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರೀ ಮತ್ತು ಅನನ್ಯಾ ಭಟ್ ಹಾಡಿದ್ದಾರೆ. ಇನ್ನೂ ಸಮರ್ಜಿತ್ ಮತ್ತು ಸಾನ್ಯಾ ಅಯ್ಯರ್ ಅವರನ್ನ ತಾಳಕ್ಕೆ ತಕ್ಕಂತೆ ಭಜರಂಗಿ ಮೋಹನ್ ಕುಣಿಸಿದ್ದಾರೆ.

ಉಳಿದಂತೆ ಗೌರಿ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಪ್ರಿಯಾಂಕಾ ಉಪೇಂದ್ರ, ಅಕುಲ್ ಬಾಲಾಜಿ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ. ಬಿಎ ಮಧು, ರಾಜಶೇಖರ್ ಕೆಎಲ್, ಮಾಸ್ತಿ, ಮನು ತಪಸ್ವಿ ಈ ಚಿತ್ರಕ್ಕೆ ಮಾತುಗಳನ್ನ ಬರೆದಿದ್ದಾರೆ. ಶಿವು ಬೆರ್ಗಿ ಮಾತ್ರವಲ್ಲದೇ ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ ಮತ್ತು ಅನಿರುದ್ಧ ಶಾಸ್ತ್ರೀ ಕೂಡ ಬೇರೆ ಹಾಡುಗಳಿಗೆ ಸಂಗೀತ ನಿರ್ದೇಶನವನ್ನ ಮಾಡಿದ್ದಾರೆ. ಈ ಚಿತ್ರಕ್ಕಿದೆ.
ಒಟ್ನಲ್ಲಿ ತಮ್ಮ ಕ್ರಿಯೆಟಿವ್ ಐಡಿಯಾಗಳಿಂದನೇ ಕಾಲ..ಕಾಲಕ್ಕೆ.. ಎಲ್ಲರ ಚಿತ್ತ ಕದಿಯುವ ಇಂದ್ರಜಿತ್ ಲಂಕೇಶ್ ʻಗೌರಿʼ ಸಿನಿಮಾ ಬಿಡುಗಡೆಯ ಹೊತ್ತಿಗೆ ಇನ್ನೂ ಏನೇನು ಕ್ರೇಜ್ ಕ್ರಿಯೇಟ್ ಮಾಡುತ್ತಾರೋ ಅನ್ನುವುದಕ್ಕೆ ಉತ್ತರ ಸದ್ಯದಲ್ಲಿಯೇ ಸಿಗಲಿದೆ.


Click it and Unblock the Notifications











