twitter
    For Quick Alerts
    ALLOW NOTIFICATIONS  
    For Daily Alerts

    ಐಪ್ಯಾಡ್ -ಹಾರ್ಡ್‌ಡಿಸ್ಕ್ ತಗೊಂಡು ಸಿಸಿಬಿ ಕಚೇರಿಗೆ ಬಂದ ಇಂದ್ರಜಿತ್ ಲಂಕೇಶ್

    |

    ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಸೇವನೆ, ಡೀಲರ್‌ಗಳ ಜೊತೆ ಕೆಲವು ಕಲಾವಿದರು ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೊಮ್ಮೆ ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದಾರೆ.

    Recommended Video

    Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

    ಈ ಮುಂಚೆ ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಒಳಪಟ್ಟಿದ್ದ ಇಂದ್ರಜಿತ್ ಲಂಕೇಶ್ ಸಾಕಷ್ಟು ಮಾಹಿತಿ ನೀಡಿದ್ದರು. ಈಗ ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳು ಇಂದ್ರಜಿತ್ ಅವರಿಗೆ ಬುಲಾವ್ ನೀಡಿದ್ದು, ಈ ಸಲ ಐಪ್ಯಾಡ್ -ಹಾರ್ಡ್‌ಡಿಸ್ಕ್ ಇರುವ ಬ್ಯಾಗ್ ತೆಗೆದುಕೊಂಡು ಬಂದಿದ್ದಾರೆ. ಈ ಸಲ ಯಾವ ಸಾಕ್ಷ್ಯ ನೀಡಲಿದ್ದಾರೆ? ಮುಂದೆ ಓದಿ....

    ಸಿಸಿಬಿ ಕೈ ಸೇರಿತು 'ಇಂದ್ರಜಿತ್ ಫೈಲ್': 15 ತಾರೆಯರ ವಿವರ ಹಸ್ತಾಂತರ ಸಿಸಿಬಿ ಕೈ ಸೇರಿತು 'ಇಂದ್ರಜಿತ್ ಫೈಲ್': 15 ತಾರೆಯರ ವಿವರ ಹಸ್ತಾಂತರ

    ಬ್ಯಾಗ್ ಹಿಡಿದು ಬಂದ ಇಂದ್ರಜಿತ್

    ಬ್ಯಾಗ್ ಹಿಡಿದು ಬಂದ ಇಂದ್ರಜಿತ್

    ಐಪ್ಯಾಡ್ ಮತ್ತು ಹಾರ್ಡ್‌ಡಿಸ್ಕ್ ಹೊಂದಿರುವ ಬ್ಯಾಗ್ ತೆಗೆದುಕೊಂಡು ಸಿಸಿಬಿ ಕಚೇರಿ ಬಂದಿರುವ ಇಂದ್ರಜಿತ್ ಲಂಕೇಶ್ ಒಳಗೆ ಹೋಗುವುದಕ್ಕೂ ಮುಂಚೆ ಮಾಧ್ಯಮದವರು ಬಳಿ ಮಾತನಾಡಿದರು. '' ಈ ಹಿಂದೆ ಸಿಸಿಬಿ ಕಚೇರಿಗೆ ಬಂದಾಗ ಸಾಕಷ್ಟು ಮಾಹಿತಿ ನೀಡಿದ್ದೇನೆ. ಈಗ ಮತ್ತೆ ಕರೆದಿದ್ದಾರೆ, ತನಿಖೆಗೆ ಸಹಕರಿಸುವ ಉದ್ದೇಶದಿಂದ ಬಂದಿದ್ದೇನೆ. ಬ್ಯಾಗ್‌ನಲ್ಲಿ ಹಾರ್ಡ್‌ಡಿಸ್ಕ್ ಹಾಗೂ ಐಪ್ಯಾಡ್ ಇದೆ, ಅದರಲ್ಲಿ ಏನಿದೆ ಎಂದು ಕೇಳಬೇಡಿ'' ಎಂದು ಕುತೂಹಲ ಮೂಡಿಸಿದರು.

    ದಾಖಲೆಗಳ ಬಗ್ಗೆ ನಾನು ಹೇಳಲ್ಲ

    ದಾಖಲೆಗಳ ಬಗ್ಗೆ ನಾನು ಹೇಳಲ್ಲ

    ''ನಾನು ಸಾಕಷ್ಟು ಮಾಹಿತಿ ನೀಡಿದ್ದೇನೆ. ನಾನು ಕೊಟ್ಟಿರುವ ದಾಖಲೆಗಳ ಬಗ್ಗೆ ಮಾಹಿತಿ ಕೊಡಲ್ಲ. ಯಾಕಂದ್ರೆ, ಅದು ಬಹಿರಂಗವಾದರೆ ತನಿಖೆಗೆ ಅಡ್ಡಿಯಾಗುತ್ತದೆ. ಮೊನ್ನೆ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೆ. ಈಗಲೂ ಎಲ್ಲ ಪ್ರಶ್ನೆಗೂ ಉತ್ತರ ಕೊಡ್ತೇನೆ. ಸಂಪೂರ್ಣವಾಗಿ ಸಹಕರಿಸುತ್ತಿದ್ದೇನೆ. ಉಳಿದ ಮಾಹಿತಿಗಳನ್ನು ಸಿಸಿಬಿ ಅವರನ್ನೇ ಕೇಳಬೇಕು' ಎಂದಿದ್ದಾರೆ.

    ಇಂಡಸ್ಟ್ರಿಗೆ ಕೆಟ್ಟ ಹೆಸರು ಬರಲ್ಲ

    ಇಂಡಸ್ಟ್ರಿಗೆ ಕೆಟ್ಟ ಹೆಸರು ಬರಲ್ಲ

    ಕೆಲವರು ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತೆ ಅಂತ ಅಂದುಕೊಂಡಿದ್ದಾರೆ. ಅದು ತಪ್ಪು, ಇದರಿಂದ ಇಂಡಸ್ಟ್ರಿ ಸ್ವಚ್ಛವಾಗುತ್ತೆ. ಕಾರ್ಯಕ್ರಮ ನಿರೂಪಕರು, ಹೊಸದಾಗಿ ಬಂದ ಕೆಲವು ಕಲಾವಿದರು ಭಾಗಿಯಾಗಿದ್ದು, ಈ ಜಾಲದಲ್ಲಿದ್ದಾರೆ, ಅವರನ್ನು ಕ್ಲೀನ್ ಮಾಡಬೇಕು. ಬಂದಿತ ಆರೋಪಿ ಅನಿಕಾ ನಾಲ್ಕು ಪುಟದ ಹೇಳಿಕೆ ನೀಡಿದ್ದಾರೆ. ಹಲವರು ಪಟ್ಟಿ ಸಹ ನೀಡಿದ್ದಾರೆ. ಅಧಿಕಾರಿಗಳು ತನಿಖೆ ಮಾಡಿದ್ದಾರೆ. ನಾನು ಸಹ ವಿವರ ನೀಡಿದ್ದೇನೆ'' ಎಂದು ಹೇಳಿದ್ದಾರೆ.

    ವಾಣಿಜ್ಯ ಮಂಡಳಿ ಮೊದಲೇ ಎಚ್ಚೆತ್ತಗೊಳ್ಳಬೇಕಿತ್ತು

    ವಾಣಿಜ್ಯ ಮಂಡಳಿ ಮೊದಲೇ ಎಚ್ಚೆತ್ತಗೊಳ್ಳಬೇಕಿತ್ತು

    ''ಈ ಹಿಂದೆ ಕೆಲವು ಘಟನೆಗಳು ಆದಾಗ ವಾಣಿಜ್ಯ ಮಂಡಳಿ ಎಚ್ಚೆತ್ತುಕೊಳ್ಳಬೇಕಾಗಿತ್ತು. ಅವರನ್ನು ಕರೆಸಿ ಬುದ್ದಿವಾದ ಹೇಳಬೇಕಿತ್ತು. ಮೊಳಕೆಯಲ್ಲಿ ನಿಯಂತ್ರಿಸಿದ್ದರೆ ಇಲ್ಲಿಯವರೆಗೂ ಬರುತ್ತಿರಲಿಲ್ಲ. ಬನ್ನಿ ನನ್ನ ಜೊತೆ ಹೋರಾಟಕ್ಕೆ ಕೈ ಜೋಡಿಸಿ, ಇಡೀ ಇಂಡಸ್ಟ್ರಿ ಸ್ವಚ್ಛವಾಗುತ್ತೆ'' ಎಂದು ತಿಳಿಸಿದ್ದಾರೆ.

    English summary
    Drug Mafia in Sandalwood: Kannada director Indrajith lankesh attends CCB Inquiry second time today.
    Thursday, September 3, 2020, 12:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X