ಅಕ್ಕನ ಬಗ್ಗೆ ಮಾತನಾಡಿದ್ದು ತುಂಬಾ ನೋವು ತಂದಿದೆ: ಇಂದ್ರಜಿತ್ ಲಂಕೇಶ್

ಗೌರಿ ಲಂಕೇಶ್ ಸಾವಿನ ಬಗ್ಗೆ ಮಾತನಾಡಿದ್ದು ತುಂಬಾ ನೋವು ತಂದಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು (ಸೆಪ್ಟೆಂಬರ್ 3) ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಚಿತ್ರರಂಗಕ್ಕೆ ಡ್ರಗ್ ನಂಟಿನ ಬಗ್ಗೆ ಮಾತನಾಡುತ್ತಾ, ಅಕ್ಕ ಗೌರಿ ಲಂಕೇಶ್ ಬಗ್ಗೆ ಮಾತನಾಡಿದವರಿಗೆ ತಿರುಗೇಟು ನೀಡಿದ್ದಾರೆ.

Recommended Video

Ragini ಹಾಗು Sanjana ಬಗ್ಗೆ ಹೊಸ ಬಾಂಬ್ ಸಿಡಿಸಿದ Prashanth Sambargi | Filmibeat Kannada

ಇಂದ್ರಜಿತ್, ಅಕ್ಕ ಗೌರಿ ಲಂಕೇಶ್ ಬಗ್ಗೆ ಯಾರು ಮಾತನಾಡಿದ್ದಾರೆ ಎಂದು ಅವರ ಹೆಸರು ಹೇಳದೆ ಪ್ರತಿಕ್ರಿಯೆ ನೀಡಿದ್ದಾರೆ. 'ಅವರು ಸಮಾಜಕ್ಕೆ ಏನು ನೀಡಿದ್ದಾರೆ, ಅವರನ್ನು ಸಮಾಜ, ರಾಜಕೀಯ ಪಕ್ಷಗಳು ಹೇಗೆ ಕಡೆಗಣಿಸಿ ತಳ್ಳಿಹಾಕಿದ್ದಾರೆ' ಎಂದಿದ್ದಾರೆ. ಮುಂದೆ ಓದಿ...

 'ನಮ್ಮಕ್ಕನ ಸಾವು ಸಾವಲ್ಲವೇ..'

'ನಮ್ಮಕ್ಕನ ಸಾವು ಸಾವಲ್ಲವೇ..'

'ಈ ಹಿಂದೆ ಒಬ್ಬ ನಟನ ಬಗ್ಗೆ ಮಾತನಾಡಿದ್ದೆ. ಆದರೆ ಅವರಿಗೆ ಗೌರವ ಕೊಟ್ಟು ನನ್ನ ಹೇಳಿಕೆಯನ್ನು ವಾಪಸ್ ಪಡೆದಿದ್ದೆ. ಸಾವಿನಲ್ಲಿ ಹೀಗೆ ಮಾಡುವುದು ಬೇಡ ಎಂದು ಹೇಳಿಕೆಯನ್ನು ಹಿಂದಕ್ಕೆ ಪಡೆದೆ. ಆದರೆ ನಮ್ಮಕ್ಕನ ಸಾವು ಸಾವಲ್ಲವೇ' ಎಂದು ಪ್ರಶ್ನಿಸಿದ್ದಾರೆ.

 'ಅಕ್ಕನ ಸಿದ್ಧಾಂತ ಸಾವು ಮಾಡುವಷ್ಟು ಕ್ರೂರಿನಾ?..'

'ಅಕ್ಕನ ಸಿದ್ಧಾಂತ ಸಾವು ಮಾಡುವಷ್ಟು ಕ್ರೂರಿನಾ?..'

'ನಮಗೂ ತಾಯಿ ಇಲ್ಲವೇ, ತಮ್ಮ ತಾಯಿ ಕ್ಯಾನ್ಸರ್ ರೋಗಿ. ನಮಗೆ ನೋವಾಗಲ್ಲವೇ. ನಮ್ಮಕ್ಕನ ಸಿದ್ಧಾಂತ ಹಲವರು ಒಪ್ಪದೇ ಇರಬಹುದು, ಆದರೆ ಸಾವು ಮಾಡುವಷ್ಟು ಆ ಸಿದ್ಧಾಂತ ಕ್ರೂರಿನಾ' ಎಂದು ಇಂದ್ರಜಿತ್ ಪರೋಕ್ಷವಾಗಿ ಪ್ರಮೋದ್ ಮುತಾಲಿಕ್ ಅವರಿಗೆ ತಿರುಗೇಟು ನೀಡಿದ್ದಾರೆ.

 ಪ್ರಮೋದ್ ಮುತಾಲಿಕ್ ಹೇಳಿದ್ದೇನು?

ಪ್ರಮೋದ್ ಮುತಾಲಿಕ್ ಹೇಳಿದ್ದೇನು?

ಬುಧವಾರ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, 'ಡ್ರಗ್ ವಿಚಾರದಲ್ಲಿ ಇಂದ್ರಜಿತ್ ಲಂಕೇಶ್ ಹೀರೋ ಆಗೋಕೆ ಹೊರಟಿದ್ದಿರಲ್ಲ. ನಿಮ್ಮ ಅಕ್ಕ ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಆದಾಗ ನೀವು ಎಲ್ಲಿ ಹೋಗಿದ್ರಿ? ಅಂದು ಯಾಕೆ ಈ ವಿಚಾರದ ಬಗ್ಗೆ ನೀವು ಮಾತನಾಡಲಿಲ್ಲ? ಗೌರಿ ಲಂಕೇಶ್‌ರನ್ನು ಸುಧಾರಿಸುವ ಪ್ರಯತ್ನ ಏಕೆ ಮಾಡಲಿಲ್ಲ?' ಎಂದು ಪ್ರಶ್ನಿಸಿದ್ದರು.

 ಸಿಸಿಬಿಗೆ ಮತ್ತಷ್ಟು ಮಾಹಿತಿ ನೀಡಿರುವ ಇಂದ್ರಜಿತ್

ಸಿಸಿಬಿಗೆ ಮತ್ತಷ್ಟು ಮಾಹಿತಿ ನೀಡಿರುವ ಇಂದ್ರಜಿತ್

ಇಂದು ಮತ್ತೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದ ಇಂದ್ರಜಿತ್ ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಯಾವ ಸಾಕ್ಷ್ಯಗಳನ್ನು ಕೊಟ್ಟಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸಾಕಷ್ಟು ಮಾಹಿತಿ ನೀಡಿದ್ದೇನೆ ಎಂದು ಸಿಸಿಬಿ ಕಚೇರಿಯಿಂದ ಹೊರಬಂದ ಬಳಿಕ ಇಂದ್ರಜಿತ್ ಹೇಳಿದ್ದಾರೆ.

More from Filmibeat

English summary
Indrajith Lankesh hurts by talks about his sister Gauri Lankesh death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X