ಇಂದ್ರಜಿತ್ ಲಂಕೇಶ್ ವಿಚಾರಣೆ ಅಂತ್ಯ: ನಾನೊಬ್ಬ ಮೆಸೆಂಜರ್ ಅಷ್ಟೇ

ಸ್ಯಾಂಡಲ್‌ವುಡ್ ಡ್ರಗ್ಸ್ ವಿವಾದದಲ್ಲಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಎರಡನೇ ಬಾರಿ ಸಿಸಿಬಿ ವಿಚಾರಣೆ ಮುಗಿಸಿದ್ದಾರೆ. ಸಿಸಿಬಿ ಕಚೇರಿಯಿಂದ ಹೊರಬಂದ ಬಳಿಕ ಮಾತನಾಡಿದ ಇಂದ್ರಜಿತ್ ಲಂಕೇಶ್ ''ಈ ಪ್ರಕರಣದಲ್ಲಿ ನಾನೊಬ್ಬ ಮೆಸೆಂಜರ್ ಅಷ್ಟೇ. ಇಂಡಸ್ಟ್ರಿಯನ್ನು ಸ್ವಚ್ಛಗೊಳಿಸಬೇಕು ಎನ್ನುವುದಷ್ಟೇ ನನ್ನ ಗುರಿ'' ಎಂದು ಹೇಳಿದ್ದಾರೆ.

Recommended Video

Drug Mafia 15 ಜನ ಹೀರೋ, ಹೀರೋಯಿನ್ ದಾಖಲೆಯನ್ನು ಸಾಕ್ಷಿ ಸಮೇತ ಪೋಲೀಸರ ಕೈಗೆ ಕೊಟ್ಟ ಇ,ಲಂಕೇಶ್ |

''ಈ ಹಿಂದೆ ನಾನು ನೀಡಿದ್ದ ಮಾಹಿತಿ ಕುರಿತು ಸ್ಪಷ್ಟನೆ ನೀಡುವುದಕ್ಕಾಗಿ ಕರೆಯಲಾಗಿತ್ತು. ನನ್ನ ಬಳಿಯಿದ್ದ ಎಲ್ಲ ಮಾಹಿತಿ ನೀಡಿದ್ದೇನೆ. ಅದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಅವರು ತನಿಖೆ ಆರಂಭಿಸಿದ್ದಾರೆ. ತನಿಖೆ ಮಾಡಲು ಬಿಡಿ'' ಎಂದು ಇಂದ್ರಜಿತ್ ತಿಳಿಸಿದರು.

''ಸಿಸಿಬಿ ಅಧಿಕಾರಿ ಸಂದೀಪ್ ಪಾಟೀಲ್ ತಂಡದ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ. ಈ ಪ್ರಕರಣದಲ್ಲಿ ನಾನು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಮತ್ತೆ ಕರೆದರು ಸಹ ಭೇಟಿಯಾಗುತ್ತೇನೆ'' ಎಂದು ಸ್ಪಷ್ಟನೆ ನೀಡಿದ್ದಾರೆ.

Indrajith lankesh Reaction After CCB Inquiry

ಮತ್ತೊಂದಡೆ ಡ್ರಗ್ಸ್ ಪ್ರಕರಣದಲ್ಲಿ ಸಂಬಂಧಿಸಿದಂತೆ ಬಾಲಿವುಡ್ ಡ್ರಗ್ ಡೀಲರ್‌ಗಳ ಜೊತೆ ಕರ್ನಾಟಕದ ರಾಜಕಾರಣಿಗೂ ಮತ್ತು ಕನ್ನಡ ಸಿನಿಮಾ ಕಲಾವಿದರಿಗೂ ಸಂಬಂಧ ಇದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಸಿನಿಮಾ ವಿತರಕ ಪ್ರಶಾಂತ್ ಸಂಬರ್ಗಿ ಆರೋಪಿಸಿದ್ದಾರೆ.

ನಟಿ ರಾಗಿಣಿ ಅವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದು, ವಿಚಾರಣೆಗೆ ಗೈರಾಗಿದ್ದಾರೆ. ಮತ್ತೊಂದೆಡೆ ರಾಗಿಣಿ ಅವರ ಆಪ್ತ ರವಿಶಂಕರ್ ಹಾಗೂ ಸಂಜನಾ ಗಲ್ರಾನಿ ಅವರ ಆಪ್ತ ರಾಹುಲ್ ಎನ್ನುವ ವ್ಯಕ್ತಿಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.

More from Filmibeat

English summary
Drug Mafia in Sandalwood: Kannada director Indrajith lankesh finished CCB Inquiry second time today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X