Don't Miss!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
FSL ವರದಿಯಲ್ಲಿ ಸಂಜನಾ,ರಾಗಿಣಿ ಡ್ರಗ್ಸ್ ಸೇವನೆ ದೃಢ: ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ
ನಟಿ ಸಂಜನಾ ಮತ್ತು ರಾಗಿಣಿ ದ್ವಿವೇದಿ ಡ್ರಗ್ಸ್ ಸೇವನೆ ಮಾಡಿರುವುದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟಿದೆ ಎಂಬ ಮಾಹಿತಿ ವರದಿಯಾಗಿದೆ. ಈ ವರದಿ ಬಹಿರಂಗವಾದ ಬೆನ್ನಲ್ಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
''ಎಫ್‌ಎಸ್‌ಎಲ್ ವರದಿಯಲ್ಲಿ ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ ಎಂದು ನಾನು ಸಹ ಮಾಧ್ಯಮಗಳಲ್ಲಿಯೇ ನೋಡಿದೆ. ಇದು ಸಮಾಧಾನ ತಂದಿದೆ. ಎಲ್ಲೋ ಒಂದು ಕಡೆ ಅನುಕಂಪನೂ ಇದೆ. ಅವರಿಗೆಲ್ಲ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಈಗ ಸಣ್ಣ ಸಣ್ಣವರನ್ನು ಬಂಧಿಸಿದ್ದರು. ಇದರಲ್ಲಿ ಇನ್ನು ದೊಡ್ಡವರು ಇದ್ದಾರೆ, ಅವರನ್ನು ಹಿಡಿಯಬೇಕು'' ಎಂದು ಆಗ್ರಹಿಸಿದರು.
ಸಂಜನಾ,
ರಾಗಿಣಿ
ಡ್ರಗ್ಸ್
ಸೇವಿಸಿದ್ದು
ಎಫ್‌ಎಸ್‌ಎಲ್
ವರದಿಯಿಂದ
ಖಾತ್ರಿ
''ನಾನು ಸಮಾಜ ಹಿತದೃಷ್ಟಿಯಿಂದ ಮುಂದೆ ಬಂದು ಹೋರಾಟ ಮಾಡಿದ್ದು, ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ಯಾರೊಬ್ಬರ ವಿರುದ್ಧವೂ ನನ್ನ ಹೋರಾಟ ಇರಲಿಲ್ಲ. ಡ್ರಗ್ಸ್‌ನಿಂದ ಸಮಾಜಕ್ಕೆ ಮಾರಕ. ಯುವಕರು, ಮಕ್ಕಳು ಈ ಡ್ರಗ್ಸ್ ಜಾಲಕ್ಕೆ ಸಿಕ್ಕಿಹಾಕಿಕೊಳ್ಳುತ್ತಿದ್ದಾರೆ ಎನ್ನುವುದು ನನ್ನ ಆತಂಕ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
140
ದಿನದ
ನಂತರ
ರಾ'ಗಿಣಿ'
ಬಿಡುಗಡೆ:
ಕಾನೂನು
ಹೋರಾಟದಲ್ಲಿ
ನಟಿ
ಕಂಡ
ಏಳು
ಬೀಳು!
''ಡ್ರಗ್ಸ್ ಕೇಸ್‌ನಲ್ಲಿ ನಾನು ಮಧ್ಯಪ್ರವೇಶಿಸಿದ್ದಕ್ಕೆ ಸಾಕಷ್ಟು ಜನ ನನ್ನನ್ನು ನಿಂದಿಸಿದರು. ವೈಯಕ್ತಿಕವಾಗಿ ತೇಜೋವಧೆ ಮಾಡಿದರು. ಅದೆಲ್ಲ ನನಗೆ ನೋವುಂಟು ಮಾಡಿತ್ತು. ಈಗ ಬಂದಿರುವ ವರದಿ ಮತ್ತು ತನಿಖೆಯಿಂದ ನಾನು ಗೆದ್ದೆ, ನಾನು ಸಕ್ಸಸ್ ಕಂಡ ಎಂದು ಖುಷಿ ಪಡಲ್ಲ. ನನಗೆ ಅವರ ಬಗ್ಗೆ ಅನುಕಂಪ ಇದೆ. ಇದೊಂದು ದೊಡ್ಡ ದಂಧೆ. ಇದಕ್ಕೆ ಕಡಿವಾಣ ಹಾಕಬೇಕು'' ಎಂದು ಮನವಿ ಮಾಡಿದರು. ಮುಂದೆ ಓದಿ...

ಪವಿತ್ರ ಸ್ಥಳದಲ್ಲಿ ಕೊಳೆ ಇತ್ತು, ಕ್ಲೀನ್ ಆಗ್ತಿದೆ
''ನಮ್ಮ ಚಿತ್ರರಂಗ ಪವಿತ್ರವಾದದ್ದು. ಇಂದ್ರಜಿತ್ ಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ಟೀಕಿಸಿದ್ದರು. ಹೌದು, ಪವಿತ್ರವಾದ ಸ್ಥಳದಲ್ಲಿ ಗಲೀಜು, ಕೊಳೆ ಇದ್ದಾಗ ಅದನ್ನು ಸ್ವಚ್ಛಗೊಳಸಿಬೇಕಾಗುತ್ತದೆ. ಆ ಉದ್ದೇಶದಿಂದ ನಾನು ಈ ಹೋರಾಟ ಮಾಡಿದೆ. ಒಬ್ಬ ಜವಾಬ್ದಾರಿಯುತ ವ್ಯಕ್ತಿ, ಪತ್ರಕರ್ತನಾಗಿ ನನಗೆ ಸಿಕ್ಕಿ ಮಾಹಿತಿಯನ್ನು ನಾನು ಪೊಲೀಸರಿಗೆ ಕೊಟ್ಟಿದ್ದೇನೆ ಅಷ್ಟೇ.'' ಎಂದು ಇಂದ್ರಜಿತ್ ಪ್ರತಿಕ್ರಿಯಿಸಿದ್ದಾರೆ.

ಗೃಹ ಸಚಿವರಿಗೆ ದೂರು ನೀಡಿದ್ದ ಇಂದ್ರಜಿತ್
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಕಳೆದ ವರ್ಷ ಗೃಹ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ವಿಶೇಷ ಕಾಳಜಿ ವಹಿಸಿ ತನಿಖೆ ಮಾಡುವಂತೆ ಮನವಿ ಮಾಡಿದ್ದರು. ಆ ವಿಷಯದ ಬಗ್ಗೆ ಈಗ ಪ್ರಸ್ತಾಪಿಸಿದ ಇಂದ್ರಜಿತ್, ''ನಾನು ಹೋಮ್ ಮಿನಿಸ್ಟರ್‌ಗೆ ದೂರು ಕೊಟ್ಟಾಗ, ಇಂಡಸ್ಟ್ರಿಯಲ್ಲಿ ಬಹಳಷ್ಟು ಜನರು ನನ್ನನ್ನು ಟೀಕಿಸಿದರು. ಇಂದ್ರಜಿತ್‌ಗೆ ಕೆಲಸ ಇಲ್ಲ ಎಂದು ಹೇಳಿದ್ದರು. ಬೆಂಗಳೂರಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸರಬರಾಜು ಆಗ್ತಿದೆ. ಇತ್ತೀಚಿಗೆ ಸಾಕಷ್ಟು ಪ್ರಕರಣಗಳು ವರದಿಯಾಗಿದೆ, ಆರೋಪಿಗಳನ್ನು ಬಂಧಿಸಿದ್ದಾರೆ. ಸಾವಿರಾರು ರೂಪಾಯಿಯ ಬೆಲೆಯ ಗಾಂಜಾ ವಶಕ್ಕೆ ಪಡೆದಿರುವುದು ನೋಡಿದ್ದೇವೆ. ಇದು ದೊಡ್ಡ ದಂಧೆ. ಹೆಚ್ಚಿನ ತನಿಖೆಯಾಗಬೇಕು'' ಎಂದು ಆಗ್ರಹಿಸಿದರು.

ಹೈದರಾಬಾದ್‌ನಲ್ಲಿ ಪರೀಕ್ಷೆ ಮಾಡಲಾಗಿದೆ
ಡ್ರಗ್ಸ್ ಪ್ರಕರಣದಲ್ಲಿ ನಟಿ ಸಂಜನಾ, ರಾಗಿಣಿ, ವಿರೇನ್ ಖನ್ನಾ, ರವಿಶಂಕರ್ ಸೇರಿದಂತೆ ಅನೇಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಂಜನಾ ಮತ್ತು ರಾಗಿಣಿಯ ತಲೆ ಕೂದಲನ್ನು ಎಫ್‌ಎಸ್‌ಎಲ್ ಪರೀಕ್ಷೆಗಾಗಿ ಹೈದರಾಬಾದ್‌ಗೆ ಕಳುಹಿಸಿಕೊಡಲಾಗಿತ್ತು. ಆ ವರದಿ ಈಗ ಲಭ್ಯವಾಗಿದ್ದು, ಡ್ರಗ್ಸ್ ಸೇವಿಸಿರುವುದು ಖಚಿತವಾಗಿದೆ.

ಸೆಪ್ಟೆಂಬರ್‌ನಲ್ಲಿ ರಾಗಿಣಿ ಅರೆಸ್ಟ್
2020ರ ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರು ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವೀವೇದಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದರು. ಇದಾದ ನಾಲ್ಕು ದಿನಗಳ ಬಳಿಕ ಸಂಜನಾ ಗಲ್ರಾನಿಯನ್ನು ಅರೆಸ್ಟ್ ಮಾಡಲಾಯಿತು. ಈ ನಟಿಯರ ಜೊತೆ ಸಂಪರ್ಕದಲ್ಲಿದ್ದ ರಾಹುಲ್, ವೀರೇನ್ ಖನ್ನಾ, ಆದಿತ್ಯ ಆಳ್ವಾ, ರಾಗಿಣಿ ಆಪ್ತ ರವಿಕುಮಾರ್, ಶಿವಪ್ರಕಾಶ್ ಇನ್ನೂ ಹಲವಾರು ಮಂದಿಯನ್ನು ವಶಕ್ಕೆ ಪಡೆದುಕೊಂಡರು. ತಿಂಗಳುಗಟ್ಟಲೇ ಇಬ್ಬರೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧಿಗಳಾಗಿ ಕಾಲ ಕಳೆದರು. ನಂತರ ರಾಗಿಣಿ ಮತ್ತು ಸಂಜನಾ ಜಾಮೀನಿನ ಮೇಲೆ ಬಿಡುಗಡೆಯಾದರು. ಆದರೆ, ಪ್ರಕರಣದ ತನಿಖೆ ಮುಂದುವರಿದಿದ್ದು, ಎಫ್‌ಎಸ್‌ಎಲ್ ವರದಿ ಬೆನ್ನಲ್ಲೆ ನಟಿಯರಿಬ್ಬರಿಗೂ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.