2023ರ ಮೊದಲ 6 ತಿಂಗಳಲ್ಲಿ ಅತಿಹೆಚ್ಚು ಬಾರಿ 100 ಕೋಟಿ ಗಳಿಸಿದ್ದು ಯಾವ ಇಂಡಸ್ಟ್ರಿ? ಶೂನ್ಯ ಸುತ್ತಿದ್ದು ಈ ಚಿತ್ರರಂಗ!

2023ರ ಮೊದಲ ಆರು ತಿಂಗಳು ಮುಕ್ತಾಯವಾಗಿದ್ದು, ಸದ್ಯ ಎಲ್ಲೆಡೆ ವರ್ಷದ ಮೊದಲಾರ್ಧದಲ್ಲಿ ಯಾವ ಚಿತ್ರರಂಗಗಳು ಯಾವ ಸಾಧನೆ ಮಾಡಿದವು ಎಂಬುದರ ಕುರಿತಾದ ಚರ್ಚೆಗಳು ಆರಂಭಗೊಂಡಿವೆ.

ಇನ್ನು ಕಳೆದ ಬಾರಿ ಸೌತ್ ಇಂಡಸ್ಟ್ರಿಗಳ ಅಬ್ಬರದ ಮುಂದೆ ಸೈಲೆಂಟ್ ಆಗಿದ್ದ ಬಾಲಿವುಡ್ ಚಿತ್ರರಂಗ ಈ ಬಾರಿ ಬ್ಯುಸಿನೆಸ್‌ನಲ್ಲಿ ಅಬ್ಬರಿಸಿದೆ. ಹಿಂದಿಯ ಹಲವಾರು ಚಿತ್ರಗಳು ನೂರು ಕೋಟಿ ಗಳಿಸಿದ್ದು, ಶಾರುಖ್ ಖಾನ್ ನಟನೆಯ ಪಠಾಣ್ ಈ ವರ್ಷದ ಮೊದಲಾರ್ಧದಲ್ಲಿ 1000 ಕೋಟಿ ಗಳಿಸಿದ ಏಕೈಕ ಚಿತ್ರ ಎನಿಸಿಕೊಂಡಿದೆ.

Industry wise list of movies which have entered 100 crore club in the first 6 months of 2023

ಇತ್ತ ಸೌತ್ ಚಿತ್ರರಂಗಗಳ ಪೈಕಿ ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ಈ ಮೂರೂ ಚಿತ್ರರಂಗಗಳೂ ಸಹ ನೂರು ಕೋಟಿ ಕ್ಲಬ್ ಸೇರಿದ್ದು, ಸ್ಯಾಂಡಲ್‌ವುಡ್ ಚಿತ್ರರಂಗ ಮಾತ್ರ ವರ್ಷದ ಮೊದಲಾರ್ಧದಲ್ಲಿ ನೂರು ಕೋಟಿ ಗಳಿಕೆ ಮಾಡುವಲ್ಲಿ ವಿಫಲವಾಗಿದೆ.

ಹೌದು, ಈ ಆರು ತಿಂಗಳುಗಳಲ್ಲಿ ಕನ್ನಡದ ದೊಡ್ಡ ಸ್ಟಾರ್ ನಟರ ದೊಡ್ಡ ಚಿತ್ರಗಳು ಬಿಡುಗಡೆಯಾಗದ ಕಾರಣ ಹಾಗೂ ಬಿಡುಗಡೆಗೊಂಡ ಸ್ಟಾರ್ ನಟರ ಚಿತ್ರಗಳು ನಿರೀಕ್ಷಿಸಿದ ಫಲಿತಾಂಶ ಪಡೆಯದ ಕಾರಣ ಚಂದನವನ ಈ ಸಾಧನೆ ಮಾಡುವಲ್ಲಿ ವಿಫಲಗೊಂಡಿದೆ. ಹಾಗಿದ್ದರೆ ಈ ವರ್ಷ ಯಾವ ಚಿತ್ರರಂಗಗಳ ಎಷ್ಟು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಬಾಲಿವುಡ್: 7 ಚಿತ್ರಗಳು

ಈ ವರ್ಷದ ಮೊದಲಾರ್ಧದಲ್ಲಿ ಬಾಲಿವುಡ್ ಚಿತ್ರರಂಗ ಅತಿಹೆಚ್ಚು ನೂರು ಕೋಟಿ ಕ್ಲಬ್ ಚಿತ್ರಗಳನ್ನು ನೀಡಿದ ಇಂಡಸ್ಟ್ರಿ ಎನಿಸಿಕೊಂಡಿದೆ. ಹಿಂದಿಯ ಪಠಾಣ್, ಆದಿಪುರುಷ್, ದ ಕೇರಳ ಸ್ಟೋರಿ, ತೂ ಜೂತಿ ಮೈನ್ ಮಕ್ಕರ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್, ಭೋಲಾ ಹಾಗೂ ಝಯ ಹಟ್ಕೆ ಝರ ಬಚ್ಕೆ ಹೀಗೆ ಬಾಲಿವುಡ್‌ನ 7 ಚಿತ್ರಗಳು ಈ ವರ್ಷದ ಮೊದಲಾರ್ಧದಲ್ಲಿ ನೂರು ಕೋಟಿ ಗಳಿಕೆ ಮಾಡಿವೆ. ಈ ಚಿತ್ರಗಳು ಒಟ್ಟಾರೆ ಮಾಡಿದ ಗಳಿಕೆಯ ವಿವರಗಳು ಮುಂದಿದೆ..

Industry wise list of movies which have entered 100 crore club in the first 6 months of 2023

ಪಠಾಣ್ - 1050 ಕೋಟಿ, ಆದಿಪುರುಷ್ -395 ಕೋಟಿ, ದ ಕೇರಳ ಸ್ಟೋರಿ 300 ಕೋಟಿ, ತೂ ಜೂತಿ ಮೈನ್ ಮಕ್ಕರ್ 215 ಕೋಟಿ, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ 182 ಕೋಟಿ, ಭೋಲಾ 110 ಕೋಟಿ ಹಾಗೂ ಝಯ ಹಟ್ಕೆ ಝರ ಬಚ್ಕೆ 105 ಕೋಟಿ.

ಕಾಲಿವುಡ್: 4 ಚಿತ್ರಗಳು

ಈ ವರ್ಷದ ಮೊದಲಾರ್ಧದಲ್ಲಿ ತಮಿಳಿನ ವಾರಿಸು, ತುನಿವು, ಪೊನ್ನಿಯನ್ ಸೆಲ್ವನ್ 2 ಹಾಗೂ ವಾತಿ ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿವೆ. ಈ ಪೈಕಿ ವಾರಿಸು 302 ಕೋಟಿ, ತುನಿವು 201 ಕೋಟಿ, ಪೊನ್ನಿಯನ್ ಸೆಲ್ವನ್ 2 342 ಕೋಟಿ ಹಾಗೂ ವಾತಿ 116 ಕೋಟಿ ಗಳಿಸಿದೆ.

ಟಾಲಿವುಡ್: 3 ಚಿತ್ರಗಳು

ತೆಲುಗು ಸಿನಿಮಾಗಳಾದ ವಾಲ್ತೇರು ವೀರಯ್ಯ, ವೀರ ಸಿಂಹ ರೆಡ್ಡಿ ಹಾಗೂ ದಸರಾ ಚಿತ್ರಗಳು ಈ ವರ್ಷದ ಮೊದಲಾರ್ಧದಲ್ಲಿ ನೂರು ಕೋಟಿ ಕ್ಲಬ್ ಸೇರಿದ ಚಿತ್ರಗಳು ಎನಿಸಿಕೊಂಡಿವೆ. ವಾಲ್ತೇರು ವೀರಯ್ಯ 223 ಕೋಟಿ ಗಳಿಸಿದರೆ, ವೀರ ಸಿಂಹ ರೆಡ್ಡಿ 130 ಕೋಟಿ ಗಳಿಸಿದೆ ಹಾಗೂ ದಸರಾ 118 ಕೋಟಿ ಗಳಿಕೆ ಮಾಡಿದೆ.

ಮಾಲಿವುಡ್: 1 ಚಿತ್ರ

ಈ ವರ್ಷದ ಮೊದಲಾರ್ಧದಲ್ಲಿ 2018 ಎಂಬ ಸೂಪರ್ ಹಿಟ್ ಸಿನಿಮಾದ ಮೂಲಕ ಮಲಯಾಳಂ ಚಿತ್ರರಂಗ ಸಹ ನೂರು ಕೋಟಿ ಕ್ಲಬ್ ಸೇರಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಕೆಯನ್ನು ಮಾಡಿದ್ದು, ಸಿನಿಮಾ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಮಲಯಾಳಂ ಸಿನಿಮಾ ಎನಿಸಿಕೊಂಡಿದೆ.

More from Filmibeat

English summary
Industry wise list of movies which have entered 100 crore club in the first 6 months of 2023. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X